ಬಳ್ಳಾರಿ / ಕಂಪ್ಲಿ: ಕಡು ಬಡತನದ ಸಮಾಜವಾಗಿದ್ದು, ಶಿಕ್ಷಣದ ಮೂಲಕ ಸಮಾಜದ ಬದಲಾವಣೆಗೆ ಮುಂದಾಗಬೇಕು ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.
ಪಟ್ಟಣದ ಬಳ್ಳಾರಿಯ ರಸ್ತೆಯ ಹೆರಿಟೇಜ್ ಹಿಂಭಾಗದಲ್ಲಿರುವ ಬುಡಕಟ್ಟು ಮೇದಾರ ಕೇತಯ್ಯ ಸಂಘದ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿ, ಕುಲ ಕಸುಬಿನ ಜೊತೆಗೆ ಬೇರೆ ಬೇರೆ ಹುದ್ದೆಗಳನ್ನು ಹೊಂದಬೇಕು. ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೆ ಒಳ್ಳೆಯ ಸಂಸ್ಕೃತಿ, ಸಂಸ್ಕಾರ ಬೆಳೆಸುವ ನಿಟ್ಟಿನಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದೆ. ಆಧುನಿಕ ಭಾರತದಲ್ಲಿ ಮೊಬೈಲ್, ವಾಟ್ಸಾಪ್, ಫೇಸ್ಬುಕ್ ಹಾವಳಿ ಹೆಚ್ಚಾಗಿದ್ದು, ಮಕ್ಕಳಿಗೆ ಮೊಬೈಲ್ ಕೊಡುವ ಬದಲು ಪುಸಕ್ತ ನೀಡಿದರೆ ಜ್ಞಾನದ ಭಂಡಾರ ವೃದ್ಧಿಸಲು ಸಾಧ್ಯ. ಬುಡಕಟ್ಟು ಸಮುದಾಯದ ಅಭಿವೃದ್ಧಿಗೆ ಸಹಾಯ, ಸಹಕಾರ ಸದಾ ಇರುತ್ತದೆ ಎಂದರು.
ಮೇದಾರ ಕೇತಯ್ಯ ಸಂಘದ ಕಾರ್ಯದರ್ಶಿ ಗಾಳಿಕುಮಾರ ಮಾತನಾಡಿ. ಶಾಸಕರ ಸಹಕಾರದಿಂದ ಸಮುದಾಯ ಭವನ ನಿರ್ಮಾಣವಾಗಿದೆ ಎಂದರು. ನಂತರ ಶಾಸಕ ಗಣೇಶ ಇವರಿಗೆ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮಂಜುನಾಥ ನಾಯಕ, ಬ್ಲಾಂಕ್ ಕಾಂಗ್ರೇಸ್ ಅಧ್ಯಕ್ಷ ಶ್ರೀನಿವಾಸರಾವ್, ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ, ಸದಸ್ಯ ಸಿ.ಅರ್ ಹನುಮಂತ, ಎಪಿಎಂಸಿ ಅಧ್ಯಕ್ಷ ಹಬೀಬ್ರೆಹಮಾನ್, ತಾ.ಪಂ ಕಾರ್ಯನಿರ್ವಾಹಕ ಆರ್.ಕೆ.ಶ್ರೀಕುಮಾರ, ಸಹಾಯಕ ನಿರ್ದೇಶಕ ಮಲ್ಲನಗೌಡ, ಬುಡಕಟ್ಟು ಮೇದಾರ ಕೇತಯ್ಯ ಸಂಘದ ಉಪಾಧ್ಯಕ್ಷರಾದ ಎಂ.ವೆಂಕಟೇಶ ಎಂ.ರಾಮಣ್ಣ, ಸಹ ಕಾರ್ಯದರ್ಶಿ ಎಂ.ಶ್ರೀನಿವಾಸ, ಖಜಾಂಚಿ ಎಂ.ಶಿವಣ್ಣ, ಮುಖಂಡರಾದ ಬಿ.ರಾಮಣ್ಣ, ಎಂ.ತಿಮ್ಮಪ್ಪ, ಎಂ.ಗಂಗಪ್ಪ, ಎಂ.ಮಲ್ಲಪ್ಪ, ಕರವೇ ಕ್ಷೇತ್ರ ಅಧ್ಯಕ್ಷ ಬಳೆ ಮಲ್ಲಿಕಾರ್ಜುನ ಸೇರಿದಂತೆ ಸಮಾಜದವರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















