ಬಳ್ಳಾರಿ / ಕಂಪ್ಲಿ : ತಾಲೂಕಿನ ಎಮ್ಮಿಗನೂರು ಗ್ರಾ. ಪಂ. ಯ ಗ್ರೇಡ್-1 ಕಾರ್ಯದರ್ಶಿ ಕೆ. ದೊಡ್ಡಬಸಪ್ಪ ಗುರುವಾರ ವಯೋನಿವೃತ್ತಿಗೊಂಡರು.
ಈ ಸಂದರ್ಭದಲ್ಲಿ ಕೆ. ದೊಡ್ಡಬಸಪ್ಪ ಮತ್ತು ಕೆ. ಪವಿತ್ರಾ ದಂಪತಿಗಳನ್ನು ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳು, ಸಿಬ್ಬಂದಿ ಗೌರವಿಸಿ ಬೀಳ್ಕೊಡಲಾಯಿತು. ತಾ. ಪಂ. ಇ ಓ ಆರ್.ಕೆ.ಶ್ರೀಕುಮಾರ್, ನರೇಗಾ ಸಹಾಯಕ ನಿರ್ದೇಶಕ ಕೆ.ಎಸ್.ಮಲ್ಲನಗೌಡ, ಪಿಡಿಒ ಲಕ್ಷ್ಮಣ ತಾರುನಾಯ್ಕ, ಗ್ರಾಪಂ.ಅಧ್ಯಕ್ಷೆ ಎಚ್.ಜೆ.ಶಾರದಾ, ಉಪಾಧ್ಯಕ್ಷ ಎಚ್. ಗಾದಿಲಿಂಗಪ್ಪ, ಇಮಾಮ್ ಸಾಬ್, ಅಂಜಿನಮ್ಮ ಸೇರಿ ಇತರರಿದ್ದರು.
ಸಣಾಪುರ ಗ್ರಾ. ಪಂ. ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಗ್ರಾ. ಪಂ. ಅಧ್ಯಕ್ಷ ವೈ.ರಮಣಯ್ಯ, ಸದಸ್ಯ ಕೆ.ಬಸವರಾಜ, ಕೆ.ಭಾರತಿ, ಪಿಡಿಓ ಹಾಲಹರವಿ ಶೇಷಗಿರಿ, ಸಿಬ್ಬಂದಿ ಸೇರಿ ಇತರರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















