ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕುರಿ ಸಾಕಾಣಿಕೆ ಲಾಭದಾಯಕ ಡಾ. ಅಡಕಿ

ವಿಜಯಪುರ/ ಇಂಡಿ: ರೈತರು ಕೇವಲ ಕೃಷಿಯನ್ನೇ ಅವಲಂಬಿಸದೆ ಕುರಿ ಮೇಕೆ ಮರಿ ಸಾಕುತ್ತಾ ಅಧಿಕ ಲಾಭ ಪಡೆದುಕೊಳ್ಳಬಹುದು ಎಂದು ಪಶು ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ರಾಜಕುಮಾರ ಅಡಕಿ ಹೇಳಿದರು.
ಅವರು ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ
ಹಿಂದೆ ಉಪ ಜೀವನಕ್ಕಾಗಿ ಕುರಿ ಸಾಕಾಣಿಕೆ ಮಾಡುತ್ತಿದ್ದರು. ಇಂದು ಹೆಚ್ಚು ಹಣ ಗಳಿಸಲು ಕುರಿ ಮೇಕೆ ಸಾಕಾಣಿಕೆ ರೈತರು ಮಾಡಬೇಕಾಗಿದೆ. ಸರಕಾರದಿಂದ ಕುರಿ ಸಾಕಾಣಿಕೆಗೆ ಅನೇಕ ಸವಲತ್ತುಗಳಿದ್ದು ಅದರ ಲಾಭ ಪಡೆದುಕೊಳ್ಳಲು ಕೇಳಿಕೊಂಡರು.
ವಿಜಯಪುರ ಕೃಷಿ ವಿವಿಯ ಪ್ರಾಧ್ಯಾಪಕ ಜೆ. ಶ್ರೀನಿವಾಸ ಮಾತನಾಡಿ ಕೃಷಿ ಜತೆಗೆ ಪ್ರತಿ ತಿಂಗಳು ಆದಾಯ ಬರುವಂತಹ ಉಪ ಕಸಬು ಮಾಡಲು ರೈತರು ಸ್ವಾವಲಂಬಿ ಜೀವನ ಸಾಗಿಸಲು ಕುರಿ ಸಾಗಾಣಿಕೆ ಅತ್ಯುತ್ತಮ ದಾರಿ ಆರಂಭಿಕ ಹಂತದಲ್ಲಿ ಖರೀದಿಸಿದ ಮರಿಗಳನ್ನು ಚೆನ್ನಾಗಿ ಕಾಳಜಿ ಮಾಡಿ ಮೇಯಿಸಿ ದೊಡ್ಡದಾದ ಮೇಲೆ ಮಾರಾಟ ಮಾಡಿದಾಗ ಲಕ್ಷಾಂತರ ರೂ. ಆದಾಯ ಪಡೆಯಬಹುದು ಎಂದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಶಿವಶಂಕರಮೂರ್ತಿ ಮಾತನಾಡಿ ಕೃಷಿಯೊಂದಿಗೆ ಉಪ ಕಸಬು ಮಾಡುವ ರೈತರಿಗೆ ರೈತರು ಅರ್ಥಿಕವಾಗಿ ಸದೃಡರಾಗಲು ಕುರು ಸಾಗಾಣಿಕೆ ಯೋಜನೆ ಫಲಪ್ರದವಾಗಿದೆ. ಯುವಕರು ಕೇವಲ ಸರ್ಟಿಫಿಕೇಟ್ ಗಾಗಿ ತರಬೇತಿ ಮಾಡದೆ ಕುರಿ ಸಾಗಾಣಿಕೆ ತರಬೇತಿ ಮಾಡಿ ಒಳ್ಳೆಯ ಉದ್ಯೋಗ ಮಾಡಿ ಜೀವನ ಹೆಚ್ಚಿಸಿಕೊಳ್ಳಲು ಸಲಹೆ ನೀಡಿದರು.
ವಿಜ್ಞಾನಿ ಪ್ರಸಾದ ಅವರು ಭಾರತದಲ್ಲಿರುವ ಕುರಿಯ ತಳಿಗಳು, ಸರಕಾರದ ಸೌಲಭ್ಯಗಳು, ಕುರಿಯ ಸಾಕಾಣಿಕೆ ವಸತಿ ನಿರ್ವಹಣೆ, ಕುರಿ ಮರಿಯ ನಿರ್ವಹಣೆ ಸಾಮಾನ್ಯ ರೋಗಗಳ ಕುರಿತು ತರಬೇತಿದಾರರಿಗೆ ಮಾಹಿತಿ ನೀಡಿದರು.
ಡಾ. ಪ್ರೇಮಚಂದ್ರ, ಡಾ. ಪ್ರಕಾಶ ಮಾತನಾಡಿದರು.
ವೇದಿಕೆಯಲ್ಲಿ ಡಾ. ಬಾಲಾಜಿ, ಮಜೀದ , ಡಾ. ವೀಣಾ ಚಂದಾವರಿ, ಮಂಜುಳಾ ಹೊಸಮನಿ ಮತ್ತಿತರಿದ್ದರು.

ವರದಿ. ಅರವಿಂದ ಕಾಂಬಳೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!