ಶಿವಮೊಗ್ಗ/ತೀರ್ಥಹಳ್ಳಿ :ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಮನೆ ಮನೆಗೆ ಪೊಲೀಸ್ ಯೋಜನೆಗೆ ಚಾಲನೆ ನೀಡಲಾಯಿತು, ಇದರ ಉದ್ದೇಶ ಜನರೊಂದಿಗೆ ಪೊಲೀಸರು ಉತ್ತಮ ಬಾಂಧವ್ಯ ಹೊಂದುವುದು, ಇಲಾಖೆ ಜೊ ಸ್ನೇಹ ಸಂಬಂಧ ಬೆಸೆದು ಉತ್ತಮ ಸಮಾಜ ನಿರ್ಮಿಸುವುದಾಗಿದೆ.
ಮುಂದೆ ಆಗಬಹುದಾದ ಅಪರಾಧಗಳನ್ನು ತಡೆಗಟ್ಟಲು ಸಾರ್ವಜನಿಕರೊಂದಿಗೆ ಕೈಜೋಡಿಸುವುದು , ಬೀಟ್ ಪೊಲೀಸರು ಬಂದು ಅವರ ಅವರ ಹಳ್ಳಿಗಳಿಗೆ ಹೋಗಿ ಜನರೊಂದಿಗೆ ಸಂವಾದ ನಡೆಸಿ ಕುಂದು ಕೊರತೆ ಅಲಿಸಿ ಆದಷ್ಟು ಅಪರಾಧಗಳನ್ನು ತಡೆಗಟ್ಟಲು ಪ್ರಯತ್ನಿಸುತ್ತಾರೆ , ಹಾಗೆಯೇ ಹಳ್ಳಿಗಳಲ್ಲಿ ನಡೆಯುವ ಸಮಸ್ಯೆಗಳನ್ನು ಅಲ್ಲೇ ರಾಜಿ ಪಂಚಾಯತಿ ಮೂಲಕ ಬಗೆಹರಿಸಿ ದೊಡ್ಡದಾಗುವ ಪ್ರಕರಣಗಳನ್ನು ಅಲ್ಲೇ ಬಗೆಹರಿಸಲು ಪ್ರಯತ್ನಿಸುತ್ತಾರೆ ನಮ್ಮ ಪೊಲೀಸರು, ಪೋಲೀಸರ ಈ ಕಾರ್ಯ ಯಶಸ್ವಿ ಆಗಲಿ.
ವರದಿ : ಪ್ರಸಾದ್ ಹೆಚ್. ಬಿ, ತೀರ್ಥಹಳ್ಳಿ.



















