ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವರ್ಷ ಕಳೆದರೂ ನೀಡದ ಮಾಹಿತಿ, ಪುರಸಭೆ ಅಧಿಕಾರಿಗಳ ಕಾರ್ಯಕ್ಷಮತೆ ಕುರಿತು ಪ್ರಶ್ನೆ?

ಮಾಹಿತಿ ನೀಡಿ ಇಲ್ಲವಾದರೆ ಪ್ರತಿಭಟನೆ ಪರಿಣಾಮಕ್ಕೆ ಸಿದ್ದರಾಗಿ – ಶರಣ ಬಸಪ್ಪ ಎಲ್ಹೇರಿ.

ಯಾದಗಿರಿ/ಗುರುಮಠಕಲ್: ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಪರ ಸಂಘಟನೆಗಳ ಒಕ್ಕೂಟ ಗುರುಮಠಕಲ್ ತಾಲೂಕು ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇಂದು ಗುರುಮಠಕಲ್ ಪುರಸಭೆ ಕಾರ್ಯಾಲಯದ ಮುಖ್ಯಾಧಿಕಾರಿಗಳಾದ ಶ್ರೀಮತಿ ಭಾರತಿ ದಂಡೊತಿ ಅವರಿಗೆ ಮನವಿ ಸಹಿತ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

ಗುರುಮಠಕಲ್ ಪಟ್ಟಣದಲ್ಲಿರುವ ಉದ್ಯನವನ ಹಾಗೂ ಅರಕೇರಾ ನೀರಿನ ಘಟಕದ ಕುರಿತು ಪುರಸಭೆ ಕಾರ್ಯಾಲಯಕ್ಕೆ ಮಾಹಿತಿ ಹಕ್ಕು ಕಾಯ್ದೆ 2005ರ ನಿಯಮ 6 (1) ಮತ್ತು 7 (1) ಅಡಿಯಲ್ಲಿ ಕಳೆದ ವರ್ಷ 26-07-2024 ರಂದು ಮಾಹಿತಿ ಕೇಳಲಾಗಿದ್ದು, ಇಲ್ಲಿಯವರೆಗೆ ಸುಮಾರು ಒಂದು ವರ್ಷ ಕಳೆದರೂ ಮಾಹಿತಿ ನೀಡದಿರುವ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮೂರು ದಿನಗಳ ಒಳಗಾಗಿ ಒಟ್ಟು ಉದ್ಯಾನವನಗಳ ಸಂಖ್ಯೆ ಹಾಗೂ 2006 ರಿಂದ 2025ರ ವರೆಗೆ ಉದ್ಯಾನವನಗಳಿಗೆ ಬಂದಂತಹ ಹಣದ ವಿವರ ಮತ್ತು ಗುರುಮಠಕಲ್ ಪುರಸಭೆಯಲ್ಲಿ 2006 ರಿಂದ ಅರಕೇರಾ ವಾಟರ್ ಫಿಲ್ಟರ್ ಮತ್ತು ಪುರಸಭೆಯಲ್ಲಿ ಇಲ್ಲಿಯವರೆಗೆ ಖರೀದಿ ಮಾಡಿರುವ ಬ್ಲೀಚಿಂಗ್ ಪೌಡರ್‌ನ ವಿವರ ಮತ್ತು ಗುತ್ತಿಗೆದಾರರ ವಿವರ ನೀಡಲು ಮನವಿ ನೀಡಿ, ಒಂದು ವೇಳೆ ಮಾಹಿತಿ ನೀಡದಿದ್ದರೆ ಪುರಸಭೆ ಕಾರ್ಯಾಲಯದ ಮುಂಭಾಗದಲ್ಲಿ ಪ್ರತಿಭಟನೆ ಕೂಡುವುದಾಗಿ ಕರವೇ ತಾಲೂಕ ಅಧ್ಯಕ್ಷ ಶರಣಬಸಪ್ಪ ಎಲ್ಹೇರಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗುರುಮಠಕಲ್ ತಾಲೂಕಿನ ಗೌರವ ಅಧ್ಯಕ್ಷರಾದ ಭೀಮಶಂಕರ್ ಪಡಿಗೆ, ಮೌನೇಶ್ ಮಾದವರ್, ಶರಣು ಮೇಧಾ, ಮಹೇಶ್ ಅಳಿಗೆರಾ, ಬನ್ನು ಕಾಳಬೆಳಗುಂದಿ, ವೆಂಕಟೇಶ್ ಚಿಟಿಕೆನಪಲ್ಲಿ, ಜಗದೀಶ್ ನಸಲ್ ವಾಯಿ, ಕಾಶೀನಾಥ್ ರಾಥೋಡ್, ದೇವಾಸಿಂಗ್, ತಾಯಪ್ಪ, ವೆಂಕಟೇಶ್ ಬೋಯಿನ, ಅನಿಲ್ ಹಿಮ್ಲಾಪೂರ್ ಉಪಸ್ಥಿತರಿದ್ದರು.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!