ಬೀದರಿನ ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಅರವಿಂದ ಕುಲಕರ್ಣಿ ಅವರನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರಿನ ರಾಜ್ಯ ಕಾರ್ಯಕಾರಿಣಿಯ ಕೇಂದ್ರ ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ. ರಾಜ್ಯ ಮಹಾಸಭೆಯ ಅಧ್ಯಕ್ಷರಾದ ಎಸ್. ರಘುನಾಥ್ ರವರು ಆದೇಶ ಹೊರಡಿಸಿ, 2025-26 ನೆಯ ಸಾಲಿಗಾಗಿ ಅರವಿಂದ ಕುಲಕರ್ಣಿ ಯವರ ನೇಮಕ ಮಾಡಲಾಗಿದ್ದು, ಮಹಾಸಭೆಯ ಯೋಜನೆಗಳನ್ನು ವಿಪ್ರರಿಗೆ ದೊರಕುವಂತೆ ಮಾಡಲು ಶಕ್ತಿ ಮೀರಿ ಪ್ರಯತ್ನಿಸಿ, ಮಹಾಸಭೆಯನ್ನು ಬಲಾಢ್ಯ ಸಂಸ್ಥೆಯನ್ನಾ ಗಿ ಮಾಡಲು ಕಾರ್ಯಪ್ರವೃತ್ತರಾಗುವಂತೆ ಕುಲಕರ್ಣಿಯವರಿಗೆ ಸೂಚಿಸಿರುತ್ತಾರೆ.
ಕುಲಕರ್ಣಿಯವರ ನೇಮಕಕ್ಕೆ ಅಖಿಲ ಭಾರತ ವಿಶ್ವವಿದ್ಯಾಲಯಗಳ ನೌಕರರ ಒಕ್ಕೂಟದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ವೀರಭದ್ರಪ್ಪ ಉಪ್ಪಿನ್, ಮಿತ್ರ ಮಂಡಳಿಯ ಗೌರವಾಧ್ಯಕ್ಷರಾದ ಸಂಜೀವಕುಮಾರ್ ಸ್ವಾಮಿ ಹಾಗೂ ಖ್ಯಾತ ಮಕ್ಕಳ ರೋಗ ತಜ್ಞರಾದ ಡಾಕ್ಟರ್ ಸಿ. ಆನಂದರಾವ ಮಾರುತಿ ರಾವ್ ಬಿರಾದರ್ ಅನಂತ ಕುಲಕರ್ಣಿ ಮನೋಹರ್ ಸಿಂಗ್ ಪಾಟೀಲ್ ರವರು ಸಂತಸ ವ್ಯಕ್ತಪಡಿಸಿರುತ್ತಾರೆ. ಅರವಿಂದ ಕುಲಕರ್ಣಿಯವರಿಗೆ ಕಲ್ಯಾಣ ಕರ್ನಾಟಕ ಮಿತ್ರ ಮಂಡಳಿಯ ವತಿಯಿಂದ ನಗರದಲ್ಲಿ ಸನ್ಮಾನಿಸಲಾಯಿತು. ಸಂಜೀವ್ ಕುಮಾರ್ ಸ್ವಾಮಿ, ಮನೋಹರ್ ಸಿಂಗ್ ಪಾಟೀಲ್, ಅನಿಲ್ ಕುಮಾರ್ ಕುಲಕರ್ಣಿ, ಅನಂತ್ ಕುಲಕರ್ಣಿ, ರವಿ ಕುಮನೂರ್, ಸುರೇಶ್ ದೇಗಲ್ಮಡಿ, ವಿಜಯಕುಮಾರ್ ಪಾಟೀಲ್, ನಾಗೇಶ್ ಸ್ವಾಮಿ, ಓಂಕಾರ್ ಉಪ್ಪೇ ಕರ್ಬಸಪ್ಪ, ಆಕಾಶ್, ಬಳಿರಾಮ್ ಕುರುನಾಳೆ, ರಾಕೇಶ್, ಶಹಾಬಾಜ ಹುಸೇನ್, ಸಮೀರ್ ಹುಸೇನ್, ರಾಜಕುಮಾರ್ ಬಿರಾದಾರ್, ಶಿವಕುಮಾರ್ ಕುಂಬಾರ್, ಧೂಳಪ್ಪ, ಇಲೇಶ್ ಕುಮಾರ್, ಸಂಗ್ರಾಮ್, ನಂದಕುಮಾರ್, ಪ್ರವೀಣ್ ಕುಮಾರ್, ಸಿದ್ದರಾಮ ಹೂಗಾರ ಮುಂತಾದವರು ಉಪಸ್ಥಿತರಿದ್ದರು.
- ಕರುನಾಡ ಕಂದ



















