ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದಲ್ಲಿ ಮಹಾ ಮಹಿಮ ಪುರುಷ ಬೀರಲಿಂಗೇಶ್ವರರ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ಜರುಗಿತು. ನೂರಾರು ಭಕ್ತರು ಬಾಜಾ ಭಜಂತ್ರಿ ಮೇಳದೊಂದಿಗೆ ಗಂಗಾಸ್ನಾನ ಪೂಜೆಯಲ್ಲಿ ಭಾಗವಹಿಸಿದ್ದರು.
ಅದೇ ರೀತಿಯಾಗಿ ಗ್ರಾಮದ ತುಂಬೆಲ್ಲಾ ಬೀರ ದೇವರ ಮೆರವಣಿಗೆ ನಡೆಯಿತು, ಗ್ರಾಮಸ್ಥರು ದೇವರಿಗೆ ಕಾಯಿ, ಕರ್ಪೂರ, ಜಲಾಭಿಷೇಕ ಅರ್ಪಿಸಿ ದೇವರ ಆಶೀರ್ವಾದ ಪಡೆದರು ಎಂದು ಕಾಂಗ್ರೆಸ್ ಪಕ್ಷದ ಮುಖಂಡರಾದ ಶರಣು ಪೂಜಾರಿ ದೊಡ್ಮನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಈರಪ್ಪ ಪೂಜಾರಿ ಹಿರೇ ಕುರುಬರ, ಜಟ್ಟಪ್ಪ ಪೂಜಾರಿ ದೊಡ್ಡಮನಿ ಮತ್ತು ಜೆಡಿಎಸ್ ಮುಖಂಡರಾದ ಶರಣು ಪೂಜಾರಿ ಅಂಗಡಿ, ಸಂತೋಷ್ ಪೂಜಾರಿ ಮಲ್ಲಬಾದ, ದೇವೇಂದ್ರ ಪೂಜಾರಿ ಮಲ್ಲಾಬಾದ, ಸಿದ್ದು ಪೂಜಾರಿ ಸರಪಳಿ, ಮರಿಯಪ್ಪ ಪೂಜಾರಿ ಮಲ್ಲಾಬಾದ್, ಅಯ್ಯಪ್ಪ ಪೂಜಾರಿ ದೇವರಹಳ್ಳಿ , ಹೊನ್ನಪ್ಪ ಪೂಜಾರಿ ಮಲ್ಲಾಬಾದ, ಈರಪ್ಪ ಮೋಯಲ್ಲಿ, ನಿಂಗಪ್ಪ ಪೂಜಾರಿ ಕಂಬಳಿ , ಜಟ್ಟಪ್ಪ ಪೂಜಾರಿ ಸರಪಳಿ, ಭೀಮಣ್ಣ ಪೂಜಾರಿ ದೇಸಾಯಿ ಸೇರಿದಂತೆ ಇನ್ನಿತರ ಮುಖಂಡರು ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿದರು.
- ಕರುನಾಡ ಕಂದ



















