ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗವಿಮಠದಲ್ಲಿ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ನಾಲ್ಕನೇ ವಿಶೇಷ ಉಪನ್ಯಾಸ

ಬೀದರ್/ ಬಸವಕಲ್ಯಾಣ : ಪ್ರಾಣ ಇದ್ದಾಗ ಮಾತ್ರ ಈ ಶರೀರ ಜೀವಂತ ವಿದ್ದು ಮನುಷ್ಯ ಜೀವನ ನಡೆಸಲು ಸಾಧ್ಯ ಎಂದು ನಗರದ ಸಂಸ್ಥಾನ ಗವಿಮಠದ ಪೂಜ್ಯಶ್ರೀ ಷ. ಬ್ರ. ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ನುಡಿದರು.
ಪವಿತ್ರ ಶ್ರಾವಣ ಮಾಸ ಅಂಗವಾಗಿ ನಗರದ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠದಲ್ಲಿ ಗವಿಮಠ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತ ನಾಲ್ಕನೇ ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮ ದ ದಿವ್ಯಸಾನಿಧ್ಯ ವಹಿಸಿ ಮಾತನಾಡುತ್ತಾ ಸರ್ವಕ್ಕೂ ಆಧಾರವಾದ ಶಿವನು ಈ ಶರೀರದ ಎಲ್ಲಾ ವ್ಯವಹಾರವು ಸುಗಮವಾಗಿ ಸಾಗಲೆಂದು ಇದರಲ್ಲಿ ಪ್ರಾಣವನ್ನು ಪ್ರತಿಷ್ಠಾಪಿಸಿದ್ದಾನೆ ಅಲ್ಲದೇ ಆ ಪ್ರಾಣಕ್ಕೆ ಪ್ರೇರಕ ಶಕ್ತಿಯಾಗಿ ತಾನೂ ಸಹ ಪ್ರತಿಯೊಬ್ಬರ ಹೃದಯದಲ್ಲಿ ನಿವಾಸಿಸಿರುತ್ತಾನೆ. ಶರೀರದಲ್ಲಿ ಪ್ರಾಣ ಇರುವುದರಿಂದಲೇ ಪ್ರತಿಯೊಂದು ಇಂದ್ರಿಯಗಳ ಚಲನವಲನವು ಕಂಡುಬರುತ್ತದೆ.ಅದು ಇರದೇ ಹೋದಾಗ ಶರೀರದ ಎಲ್ಲಾ ಕ್ರಿಯೆಗಳು ನಿಂತು ಹೋಗುವವು ಎಂದರು ವಿಶೇಷ ಸನ್ಮಾನಕ್ಕೆ ಪಾತ್ರರಾದ ಮುಖ್ಯ ಗುರುಗಳಾದ ಸುಧಾಕರ ಮಹೇಂದ್ರಕರ್ ಅವರು ತಮ್ಮ ಸುದೀರ್ಘ ಸೇವೆಯಲ್ಲಿ ಶ್ರದ್ಧೆಯಿಂದ ದುಡಿದು ತಾವು ಸೇವೆ ಸಲ್ಲಿಸಿದ ಶಾಲೆಗಳಲ್ಲಿ ಬಡ ಮಕ್ಕಳ ಕುರಿತು ವಿಶೇಷ ಕಾಳಜಿ ವಹಿಸಿ ಉತ್ತಮ ವ್ಯವಸ್ಥೆ ರೂಪಿಸಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಿ ಗೌರ ಪ್ರೌಢಶಾಲೆ ಶಾಲೆಯನ್ನು ಅಭಿವೃದ್ಧಿ ಸಾಧಿಸಿದಕ್ಕಾಗಿ ಅವರನ್ನು ವಿಶೇಷ ಸನ್ಮಾನಗೈದು ಗೌರವಿಸಲಾಯಿತು ಎಂದು ನುಡಿದರು.
ಪೂಜ್ಯಶ್ರೀಗಳಿಂದ ವಿಶೇಷ ಸನ್ಮಾನ ಸ್ವೀಕರಿಸಿದ ಗೌರ ಸರ್ಕಾರಿ ಪ್ರೌಢಶಾಲೆ ಮುಖ್ಯ ಗುರು ಸುಧಾಕರ ಮಹೇಂದ್ರಕರ್ ಅವರು ಶಿಕ್ಷಕನಾಗಿ 31 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿ ಸಧ್ಯ ಗೌರ ಸರ್ಕಾರಿ ಪ್ರೌಢಶಾಲೆ ಮುಖ್ಯಗುರುವಾಗಿ ಆಸಕ್ತಿಯಿಂದ ದುಡಿದು ಮಾದರಿ ಶಾಲೆ ಮಾಡುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಒಂದು ಶಾಲೆಯ ಅಸ್ತಿತ್ವ ಉಳಿಯಲು ದಾಖಲೆಗಳ ರಚನೆ ಹಾಗೂ ನಿರ್ವಹಣೆ ಅವಶ್ಯಕ ಎಂದು ಹೇಳಿದರು. ನನ್ನ ಈ ಸೇವೆ ಗುರುತಿಸಿ ಇಂದು ಪೂಜ್ಯ ಗುರುಗಳು ವಿಶೇಷ ಸನ್ಮಾನ ಮಾಡಿ ಗೌರವಿಸಿದ್ದು ಬಹಳ ಸಂತೋಷ ತಂದಿದೆ. ಜೊತೆಗೆ ನನ್ನ ಸೇವೆಗೆ ಇನ್ನಷ್ಟು ಪ್ರೋತ್ಸಾಹ ದೊರೆತಂತಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.
ಮುಖ್ಯ ಅತಿಥಿ ಡಾ. ಬಾಲಕೃಷ್ಣ ರಾಠೋಡ ಪ್ರತಿಯೊಬ್ಬರು ಯೋಗ, ಆಹಾರ, ನಿದ್ರೆ ನಿಯಮಿತವಾಗಿ ಮಾಡಿದರೆ ಆರೋಗ್ಯವಂತರಾಗಿ ಬದುಕಲು ಸಾಧ್ಯ ಎಂದು ಸಲಹೆ ನೀಡಿದರು. ಮುಖ್ಯ ಅತಿಥಿ ಸಂಜೀವಕುಮಾರ ಸುಗುರೆ, ಅತಿಥಿ ಸುರೇಶ ಚಿಕುರ್ತೆ ಗೋರ್ಟಾ ವೇದಿಕೆ ಮೇಲಿದ್ದರು. ಶಾಂತವೀರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ವಿಶೇಷ ಸನ್ಮಾನ: ಗೌರ ಸರ್ಕಾರಿ ಪ್ರೌಢಶಾಲೆ ಮುಖ್ಯ ಗುರಸುಧಾಕರ ಮಹೇಂದ್ರಕರ ಅವರಿಗೆ ಪೂಜ್ಯ ಗುರುಗಳು ವಿಶೇಷ ಸನ್ಮಾನ ಗೈದು ಆಶೀರ್ವದಿಸಿದರು.

ಭಜನೆ: ಹಾಲಳ್ಳಿಯ ಭಜನಾ ಮಂಡಳಿ ಯವರು ಚಕ್ರಿ ಭಜನೆ ಮಾಡಿದರು. ಪ್ರೊ. ರುದ್ರೇಶ್ವರ ಸ್ವಾಮಿ ಸ್ವಾಗತಿಸಿದರು. ಸರಸ್ವತಿ ಬೆಂಬಳಿ ಸಂಚಾಲನೆ ಮಾಡಿದರು. ಶಕುಂತಲಾ ಮಠ ಮಂಗಳಾರತಿ ಹಾಡಿದರು.
ಈ ಕಾರ್ಯಕ್ರಮದಲ್ಲಿ ಬಸವಂತಪ್ಪ ಲವಾರೆ, ಸದಾನಂದ ಶೀಲವಂತ, ಮಲ್ಲಿಕಾರ್ಜುನ ಅಲಗುಡೆ, ರಾಕೇಶ ಪುರವಂತ, ಸದಾನಂದ ಕಣಜೆ, ಸವಿತಾ ಸ್ವಾಮಿ, ರೇಖಾ ಚಿಟ್ಟೆ, ಮಹಾನಂದಾ ಪುರವಂತ, ವಿಜಯಕುಮಾರ ಮುಚಳಂಬೆ, ಶಿವಶಂಕರ ಬಚನೆ,ಮಹಾದೇವ ಬಿರಾದಾರ,ಮೊದಲಾದ ಭಕ್ತರು ಪಾಲ್ಗೊಂಡಿದ್ದರು.

ವರದಿ : ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!