ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಇನ್ನೂ ಮುಗಿಯದ ಕಸ್ತೂರಿ ಬಾ ಶಾಲೆಯ ಅನುದಾನ ದುರುಪಯೋಗ ತನಿಖೆ

ಬಗೆದಷ್ಟು ಸಿಗುತ್ತಿವೆ ಕಿಲಾಡಿ ಲೇಡಿ ಕಹಾನಿಗಳು

ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಎಲ್ಹೇರಿ ಗ್ರಾಮದಲ್ಲಿನ ಕಸ್ತೂರಿ ಬಾ ಗಾಂಧಿ ಬಾಲಕಿಯರ ವಸತಿ ನಿಲಯ ಶಾಲೆಯ ಪ್ರಭಾರಿ ಮುಖ್ಯಗುರು ತಾಜು ಎಂಬುವವರು 2011 ರಿಂದ ಶಾಲೆಗೆ ಬಂದ ಅನುದಾನ ದುರ್ಬಳಕೆ ಮಾಡಿರುವ ಸಂಬಂಧ ಇವರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಮಾನತ್ತುಗೊಳಿಸಿ ಆದೇಶ ಹೊರಡಿಸಿ ಅವರ ಮೇಲೆ ಸಂಪೂರ್ಣ ತನಿಖೆಗೆ ಆದೇಶ ನೀಡಿದ್ದರು.

ನ್ಯಾಯಾಲಯ ಆದೇಶ ಕೊಟ್ಟು 8 ತಿಂಗಳು ಕಳೆದರೂ ಪ್ರಭಾರಿ ಕುಮಾರಿ. ತಾಜು ಬಂಧನ ಮಾತ್ರ ಆಗುತ್ತಿಲ್ಲ.

ಇಂದು ಎರಡು ವರ್ಷಗಳ ನಂತರ ಕಸ್ತೂರಿಬಾ ಗಾಂಧಿ ಎಲ್ಹೇರಿ ಶಾಲೆಯಲ್ಲಿ ಪ್ರಭಾರಿ ಕು. ತಾಜು, ಅವರ ಮಕ್ಕಳಿಗಾಗಿ ನೀಡಿರುವ ಕೋಣೆಯಲ್ಲಿ ತಾವೇ ವಾಸವಾಗಿದ್ದ ಕೊಠಡಿಯನ್ನು ಇಂದು ಎಸ್ ಡಿ ಎಂ ಸಿ ಸದಸ್ಯರು ಮತ್ತು ಸಿ ಆರ್ ಪಿ ಅವರ ನೇತೃತ್ವದಲ್ಲಿ ಬೀಗವನ್ನು ಮುರಿದು ಕೊಠಡಿಯನ್ನು ತೆರೆಯಲಾಯಿತು. ಆಗ ಎಲ್ಲರಿಗೂ ಆಶ್ಚರ್ಯ ಕಾದಿತ್ತು
ಮಕ್ಕಳಿಗೆ ನೀಡಬೇಕಾದ ಹಲವಾರು ಸಾಮಗ್ರಿಗಳು, ಬಟ್ಟೆ ಮತ್ತು ಚಳಿಗಾಲದ ಬೆಚ್ಚನೆ ಸ್ವೆಟರ್, ಹಲವು ವಸ್ತುಗಳು ಕಂಡು ಒಂದು ಕ್ಷಣ ನಿಬ್ಬೆರಗಾದರು.
ಎಲ್ಲಾ ವಸ್ತುಗಳನ್ನು ಶಾಲೆಯ ಮುಖ್ಯ ಗುರುಗಳಾದ ಶ್ರೀ ಲಕ್ಷ್ಮಿ ಮೇಡಂ ಅವರು ನೋಂದಣಿ ಮಾಡಿಕೊಂಡಿದ್ದಾರೆ, ನಾಳೆ ಡಿಡಿಪಿಐ ಮತ್ತು ಬಿ ಓ ಅವರಿಗೆ ನೀಡಲಿದ್ದಾರೆ

ಪ್ರಭಾರಿ ಲೇಡಿ ಕಿಲಾಡಿ ತಾಜು ಮೇಡಂ ಅವರು ಎಸಗಿದ ಅನುದಾನ ದುರ್ಬಳಕೆಯ ಹರಗಣದ ತನಿಖೆಯ ಸಂಪೂರ್ಣ ಪ್ರಮಾಣದಲ್ಲಿ ಆಗಲಿ ಮತ್ತು ಮಕ್ಕಳ ಭವಿಷ್ಯದ ಹಣ ದೋಚಿದ ಅವರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕೆಂದು ಮತ್ತು ಕೊಠಡಿಯಲ್ಲಿ ಇರುವಂತ ಇನ್ನೊಂದು ತಿಜೋರಿ ಬೀಗ ಹಾಕಿದೆ ಅದನ್ನು ಕೂಡಾ ತೆರೆದು ಅದರಲ್ಲಿ ಇರುವ ದಾಖಲಾತಿಗಳನ್ನು ಪರಿಶೀಲನೆ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಗುರುಮಠಕಲ್ ತಾಲೂಕ ಘಟಕದ ಅಧ್ಯಕ್ಷ ಶರಣಬಸಪ್ಪ ಎಲ್ಹೇರಿ ಆಗ್ರಹಿಸಿದ್ದಾರೆ.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!