ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿಜೃಂಭಣೆಯಿಂದ ಜರುಗಿದ ಗುಡ್ಡೆಕಲ್ಲು ಮೂರ್ತಿ ಮತ್ತು ಕುಂಭ ಮೆರವಣಿಗೆ

ಬಳ್ಳಾರಿ / ಕಂಪ್ಲಿ : ಪಟ್ಟಣದ 20ನೇ ವಾರ್ಡಿನ ಮಾರುತಿನಗರ (ಶಿಬಿರದಿನ್ನಿ)ಯಲ್ಲಿ ಶ್ರೀ ಬ್ರಹ್ಮದೇವರ (ಗುಡ್ಡೆಕಲ್ಲು) ಪ್ರತಿಷ್ಠಾಪನೆ ಪ್ರಯುಕ್ತ ಗುಡ್ಡೆಕಲ್ಲು ಮೂರ್ತಿ ಮತ್ತು ಕುಂಭ ಮೆರವಣಿಗೆ ಅದ್ದೂರಿಯಾಗಿ ಶ್ರದ್ದಾ – ಭಕ್ತಿಯಿಂದ ಬುಧವಾರ ನಡೆಯಿತು.
ಇಲ್ಲಿನ ಶ್ರೀ ಕಲ್ಮಠದಿಂದ ಆರಂಭಗೊಂಡ ಭವ್ಯ ಮೆರವಣಿಗೆ ಹೊಸ ಬಸ್ ನಿಲ್ದಾಣದ ಮುಖಾಂತರ ಪ್ರಮುಖ ರಸ್ತೆಗಳ ಮೂಲಕ ಮಾರುತಿನಗರದ ಶ್ರೀ ಆಂಜನೇಯ್ಯ ದೇವಸ್ಥಾನ ಬಳಿಯಲ್ಲಿ ಸಂಪನ್ನಗೊಂಡಿತು. ಮೆರವಣಿಗೆಯಲ್ಲಿ ಸುಮಂಗಲಿಯರ ಕುಂಭ, ಕಳಸ, ಎರಡು ಜೋಡೆತ್ತುಗಳ ಮೆರವಣಿಗೆ ಹಾಗೂ ತಾಷಾರಾಂಡೋಲ್ ಎಲ್ಲರ ಗಮನ ಸೆಳೆಯಿತು. ಮತ್ತು ಡೊಳ್ಳು ಕುಣಿತ, ಮಂಗಳವಾದ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಮೆರವಣಿಗೆಗೆ ಮೆರಗು ನೀಡಿದವು. ನಂತರ ಮೂರ್ತಿ ಪುರ ಪ್ರವೇಶದೊಂದಿಗೆ ಗಂಗೆ ಮತ್ತು ಗಣೇಶ ಪೂಜೆ ಹಾಗೂ ಜಲಾಧಿವಾಸ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕಾರ್ಯಗಳು ಶ್ರದ್ಧೆಯಿಂದ ನೆರವೇರಿದವು. ಇಲ್ಲಿನ ಮೆರವಣಿಗೆಯಲ್ಲಿ ಮಾಜಿ ಶಾಸಕ ಟಿ.ಎಚ್.ಸುರೇಶ ಬಾಬುರವರು ಪಾಲ್ಗೊಂಡು, ದೇವರ ಕೃಪೆಗೆ ಪಾತ್ರರಾದರು. ತದನಂತರ ಮಾಜಿ ಶಾಸಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಇಲ್ಲಿನ ಪುರಸಭೆ ಸಮುದಾಯ ಭವನದಲ್ಲಿ ಅನ್ನಸಂತರ್ಪಣೆ ಜರುಗಿತು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!