
ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ಇಂದು ಸಸ್ತಾಪೂರ ಬಂಗ್ಲಾದ ಹತ್ತಿರ ಇರುವ ಬಂದವರ ಓಣಿಯಿಂದ ಬಸವಕಲ್ಯಾಣ ನಗರದ ಶ್ರೀ ಸದಾನಂದ ಸ್ವಾಮಿ ಮಠದವರೆಗೆ ಅದ್ದೂರಿಯಾಗಿ ಜರುಗಿದ ಕವಡ್ ಯಾತ್ರೆಯಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು
ಭಾಗವಹಿಸಿದ್ದರು. ತಮ್ಮ ಹೆಗಲ ಅವರು ಕವಡ್ ಎಂದು ಕರೆಯಲ್ಪಡುವ ವಿಶೇಷ ಸಾಧನದಲ್ಲಿ ನೀರನ್ನು ಹೊತ್ತುಕೊಂಡು ಸಾಗಿದ ಯಾತ್ರೆ ತುಂಬಾ ವಿಜೃಂಭಣೆಯಿಂದ ಜರುಗಿತು.
ಅದರಲ್ಲೂ ತಾಯಂದಿರು, ಚಿಕ್ಕ ಚಿಕ್ಕ ಮಕ್ಕಳು ಕೂಡಾ ಕವಡ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಕವಡ್ ಯಾತ್ರೆ ಒಂದು ಹಿಂದೂ ಯಾತ್ರೆ, ಇದರಲ್ಲಿ ಶಿವ ಭಕ್ತರು ಪವಿತ್ರ ನದಿಗಳಿಂದ ನೀರನ್ನು ತಂದು ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಾರೆ. ಈ ಯಾತ್ರೆ ಶ್ರಾವಣ ಮಾಸದಲ್ಲಿ ನಡೆಯುತ್ತದೆ ಮತ್ತು ಇದರ ಇತಿಹಾಸವು ಪುರಾಣಗಳೊಂದಿಗೆ ಸಂಬಂಧ ಹೊಂದಿದೆ. ಕೆಲವರ ನಂಬಿಕೆಯ ಪ್ರಕಾರ ಪರಶುರಾಮನು ಮೊದಲು ಕವಡಿಯಾಗಿದ್ದನು ಎಂದು ಭಕ್ತರು ಹೇಳುತ್ತಾರೆ.
ಈ ಕವಡ್ ಯಾತ್ರೆ ಮುಖ್ಯ ರಸ್ತೆಗಳಾದ ಮಡಿವಾಳ ಮಾಚಿದೇವರ ವೃತ್ತ ತ್ರಿಪೂರಾಂತ, ಹರಳಯ್ಯನವರ ವೃತ್ತ, ಅಂಬೇಡ್ಕರ ವೃತ್ತ, ಮಾರ್ಗವಾಗಿ ಸದ್ಗುರು ಸದಾನಂದ ಸ್ವಾಮಿ ಮಠದವರೆಗೆ ಬಂದು ಅಲ್ಲಿರುವ ಶಿವನ ಲಿಂಗಕ್ಕೆ ಪವಿತ್ರವಾದ ಗಂಗಾಜಲದಿಂದ ಅಭಿಷೇಕ ಮಾಡುವುದರ ಮೂಲಕ ಕಾರ್ಯಕ್ರಮ ಸಮಾಪ್ತಿಗೊಳಿಸಿದರು.
ಈ ಕಾವಡ್ ಯಾತ್ರೆಯಲ್ಲಿ ಬಸವಕಲ್ಯಾಣದ ಪರಮ ಪೂಜ್ಯ ಶ್ರೀ ಡಾ. ಅಭಿನವ ಘನಲಿಂಗ ಶ್ರೀಗಳು, ಶಾಸಕರಾದ ಶರಣು ಸಲಗರ, ಮಾಜಿ ಶಾಸಕರಾದ ಮಲ್ಲಿಕಾರ್ಜುನ ಖೂಬಾ, ಜ್ಞಾನೇಶ್ವರ ಮುಳೆ, ದೀಪಕ ಗಾಯಕವಾಡ, ಅರವಿಂದ ಮುತ್ತೆ ಹಾಗೂ ಬಜರಂಗದಳ ತಾಲೂಕು ಸಂಯೋಜಕರಾದ ಶ್ರೀ ರವಿ ನಾವದ್ಗೇಕರ ಹಾಗೂ ಇತರೆ ಭಕ್ತರು, ಪ್ರಮುಖರು, ಭಾಗಿಯಾಗಿದ್ದರು.
ವರದಿ : ಶ್ರೀನಿವಾಸ ಬಿರಾದಾರ



















