550 ಕಿಲೋ ಮೀಟರ್ ದೂರ ಪಾದಯಾತ್ರೆ ಮಾಡುತ್ತಿರುವ ಧರ್ಮಪೂರ ಗ್ರಾಮದ ಭಕ್ತಾಧಿಗಳ
ಪಾದಯಾತ್ರೆಗೆ ಶುಭ ಕೋರಿದ ಶಾಸಕರು ಹಾಗೂ ಗ್ರಾಮಸ್ಥರು.
ಯಾದಗಿರಿ/ ಗುರುಮಠಕಲ್: ತಾಲೂಕಿನ ಧರ್ಮಪೂರ ತಾಂಡಾದಿಂದ ಆಂಧ್ರ ಪ್ರದೇಶದ ತಿರುಪತಿ ತಿರುಮಲ ದೇವಸ್ಥಾನಕ್ಕೆ ಸತತವಾಗಿ 13 ನೇಯ ವರ್ಷ ಸುಮಾರು 550 ಕಿಲೋ ಮೀಟರ್ ದೂರ ಪಾದಯಾತ್ರೆ ಮಾಡುತ್ತಿರುವ ಬೋರಬಂಡ ಗ್ರಾಮದ ಭಕ್ತಾಧಿಗಳಿಗೆ ಗುರುಮಠಕಲ್ ಮತಕ್ಷೇತ್ರದ ಶಾಸಕರಾದ ಶ್ರೀ ಶರಣಗೌಡ ಕಂದಕೂರ ಸಹಾಯ ಮಾಡಿ ಅವರ ಪಾದಯಾತ್ರೆಗೆ ಶುಭಕೋರಿದರು.
ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಬಂಜಾರಾ ಮುಖಂಡರಾದ ಸುರೇಶ್ ಚಿನ್ನ ರಾಥೋಡ್ ಹಾಗೂ ಗ್ರಾಮಸ್ಥರು ಪಾದಯಾತ್ರಾರ್ಥಿಗಳಿಗೆ ಶುಭ ಕೋರಿದರು.
ವರದಿ: ಜಗದೀಶ್ ಕುಮಾರ್ ಭೂಮಾ



















