ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕುಂಭಮೇಳ ಮಾದರಿಯಲ್ಲಿ ಕೃಷ್ಣಾ ಪುಣ್ಯ ಸ್ನಾನ

ಅಥಣಿಯಲ್ಲಿ ಕೃಷ್ಣಾ ಆರತಿ ಕಾರ್ಯಕ್ರಮದ ಪೂರ್ವಭಾವಿ ಸಭೆ..!!

ದಿನಾಂಕ 08/08/2025 ರಂದು ಸಾಯಂಕಾಲ ನಿರಾಣಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕರಾದ ಸನ್ಮಾನ್ಯ ಶ್ರೀ ಸಂಗಮೇಶ ನಿರಾಣಿ ಹಾಗೂ ಅಥಣಿಯ ಮಾಜಿ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಮಹೇಶ್ ಕುಮಠಳ್ಳಿ ಇವರ ನೇತೃತ್ವದಲ್ಲಿ ಅಥಣಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

ಈ ಸಭೆಯಲ್ಲಿ ದಿನಾಂಕ 16/08/2025 ರಂದು ಹಿಪ್ಪರಗಿಯಲ್ಲಿ ನಡೆಯಲಿರುವ ಕುಂಭಮೇಳ ಮಾದರಿಯಲ್ಲಿ ಕೃಷ್ಣಾ ಪುಣ್ಯ ಸ್ನಾನ – ಕೃಷ್ಣಾ ಆರತಿ ಕಾರ್ಯಕ್ರಮ ಪೂರ್ವಭಾವಿ ಸಭೆಯಲ್ಲಿ ಅಥಣಿಯ ಶಿವಯೋಗಿ ನಗರದ ಕ್ಲೌಡ್ ನಂಬರ್ 9 ರ ಎಲ್ಲಾ ಸಾರ್ವಜನಿಕರು, ಮುಖಂಡರು ಪಾಲ್ಗೊಂಡು ರೂಪುರೇಷೆಗಳ ಬಗ್ಗೆ ಚರ್ಚಿಸಿದರು.

ಇದೇ ವೇಳೆ ಸನ್ಮಾನ್ಯ ಶ್ರೀ ಸಂಗಮೇಶ ನಿರಾಣಿ ಮಾತನಾಡಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಡಾ. ಮುರುಗೇಶ್ ನಿರಾಣಿ ಅವರ 60ನೇ ಹುಟ್ಟುಹಬ್ಬದ ನಿಮಿತ್ಯವಾಗಿ ಹಿಮಾಲಯದ ಪವಿತ್ರ ಅಘೋರಿಗಳು, ನಾಗಾ ಸಾಧುಗಳು, ಈ ನಾಡಿನ ಜಗದ್ಗುರುಗಳು ಹಾಗೂ ಸಂತ ಮಹಾಂತರ ದಿವ್ಯ ಸಾನಿಧ್ಯದಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ ಶ್ರೀ ಸಂಗಮೇಶ್ವರ ಶ್ರೀ ಮಠದ ಆವರಣದ ಕೃಷ್ಣಾ ತಟದಲ್ಲಿ ಕುಂಭಮೇಳ ಮಾದರಿಯಲ್ಲಿ ಕೃಷ್ಣಾ ಪುಣ್ಯ ಸ್ನಾನ – ಕೃಷ್ಣಾ ಆರತಿ ಉತ್ಸವ ಜರಗಲಿದ್ದು, ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮದ ಯಶಸ್ವಿಗೆ ಕೈ ಜೋಡಿಸಬೇಕಾಗಿದೆ ಎಂದು ಕರೆ ನೀಡಿದರು.

ಇದೇ ವೇಳೆಯಲ್ಲಿ ಅಥಣಿ ತಾಲೂಕಿನ ಮುಖಂಡರುಗಳಾದ ಶ್ರೀ ಸಿದ್ದಪ್ಪ ಮುದುಕನ್ನವರ್,
ಶ್ರೀ ಗಿರೀಶ ಬುಟಾಳಿ, ಶ್ರೀ ಅಪ್ಪಾಸಾಬ ಅವತಾಡೆ,
ಶ್ರೀ ಮುತ್ತಯ್ಯ ಕಾಡದೇವರಮಠ,
ಶ್ರೀ ರಮೇಶಗೌಡ ಪಾಟೀಲ,
ಶ್ರೀ ಹನುಮಂತ ಯಲಶೆಟ್ಟಿ,
ಶ್ರೀ ವರ್ಧಮಾನ್ ಎಲಗುದ್ದಿ,
ಶ್ರೀ ಶಿವಾನಂದ್ ಕುಂಬಾರ,
ಶ್ರೀ ಲಕ್ಕಪ್ಪ ಮುಡಸಿ, ಶ್ರೀ ಬಸು ಹಿಪ್ಪರಗಿ,
ಶ್ರೀ ಮಲ್ಲಪ್ಪ ಪೂಜಾರಿ, ಶ್ರೀ ಪ್ರಭಾಕರ ಚೌಹಾನ್ ,
ಶ್ರೀ ಅಶೋಕ್ ದಾನಗೊಂಡ, ಶ್ರೀ ನಿಂಗಪ್ಪ ನಂದೇಶ್ವರ, ಶ್ರೀ ಮಲ್ಲಪ್ಪ ಹಂಚಿನಾಳ, ಶ್ರೀ ರಾಜೇಂದ್ರ ಐಹೊಳೆ, ಶ್ರೀ ಎ ಎ ಉದ್ದಾರ , ಶ್ರೀ ನಾನಾಸಾಬ ಅವತಾಡೆ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಇನ್ನೂ ಅನೇಕ ಮುಖಂಡರು ಪಾಲ್ಗೊಂಡಿದ್ದರು.

ವರದಿಗಾರ. ವಿಠ್ಠಲ ಖೋಕಾಟೆ, ಕರುನಾಡ ಕಂದ, ಅಥಣಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!