ಬಳ್ಳಾರಿ : ಕೆಎಚ್ಬಿ ಕಾಲೋನಿ, ಬಳ್ಳಾರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ಡಿ ಮಲ್ಲಿಕಾರ್ಜುನ ವಯೋ ನಿವೃತ್ತಿ ಹಿನ್ನೆಲೆ 1997 98ನೇ ಸಾಲಿನ ಎಮ್ಮಿಗನೂರು ಹಳೆ ವಿದ್ಯಾರ್ಥಿಗಳು ಬಳಗದಿಂದ ಅಭಿನಂದನೆ ಸಲ್ಲಿಸಲಾಯಿತು.
ಈ ವೇಳೆ ಅವರ ನೆಚ್ಚಿನ ವಿದ್ಯಾರ್ಥಿಗಳು ಮಾತನಾಡಿ ಮಲ್ಲಿಕಾರ್ಜುನ ಶಿಕ್ಷಕರು ಬಹಳ ಸರಳ ಜೀವಿ ಅಲ್ಲದೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಸ್ಪೂರ್ತಿಯುತ ಮಾತುಗಳಿಂದ ಅವರಲ್ಲಿ ಸಂಘಟನೆ ಸಾಮರ್ಥ್ಯ ಬೆಳೆಸಿದ ಶಿಕ್ಷಕರು ಅಲ್ಲದೆ ಅವರು ವಿದ್ಯಾರ್ಥಿ ವೃಂದ ಪ್ರತಿಯೊಂದು ಕ್ಷೇತ್ರದಲ್ಲಿ ಉದ್ಯೋಗ ಸಲ್ಲಿಸುತ್ತಾ ಅವರ ಮಾರ್ಗದರ್ಶನದಲ್ಲಿ ಸಾಗುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಬಿ.ಎಸ್. ಸದ್ದುಜಾತಪ್ಪ, ಜಡೇಶ, ಡಿ.ಎಸ್. ರಾಜಕುಮಾರ, ಕುಮಾರಸ್ವಾಮಿ, ಲಕ್ಷ್ಮಿಕಾಂತ ರೆಡ್ಡಿ, ಅಂಬರೀಶ, ಬಾಲೆ ಸಾಬ್, ಜನಾರ್ದನ, ಪ್ರಕಾಶ, ಕೋಳೂರು ಬಸವರಾಜ ಸೇರಿದಂತೆ ಹಳೆ ವಿದ್ಯಾರ್ಥಿಗಳು, ಅಭಿಮಾನಿಗಳು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















