ಬಳ್ಳಾರಿ / ಕಂಪ್ಲಿ : ಇಂದು ಭಾನುವಾರ ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿಯಲ್ಲಿ ಸ್ವ ಸಾಕುಳಿ ಸಮಾಜದ ಮೂಲ ಸ್ಥಂಭ ಸಾಳೀ ಮಹಾತ್ಮ ಪುರಾಣ ಪುಸ್ತಕವನ್ನು ಶಾಸಕರಾದ ಜೆ. ಎನ್. ಗಣೇಶ ರವರು ಬಿಡುಗಡೆಗೊಳಿಸಿದರು.
ಬಿಡುಗಡೆಗೊಳಿಸಿ ಮಾತನಾಡಿ ಇಂತಹ ಮಹಾತ್ಮರ ಕೃತಿ ಲೋಕಾರ್ಪಣೆಗೊಳಿಸಿದ್ದು ನನ್ನ ಪುಣ್ಯ ಈ ಗ್ರಂಥವನ್ನು ಸಮಾಜದವರೂ ಓದಿ ಆಲಿಸಬೇಕು ಹಾಗೂ ಸಮಾಜದ ಮಕ್ಕಳಿಗೆ ಉತ್ತಮ ವಿಧ್ಯಾರ್ಜನೆ ನೀಡಬೇಕು ಎಂದು ತಿಳಿಸಿದರು.
ಈ ಗ್ರಂಥವು ಮೂಲ ಮರಾಠಿ ಕಾವ್ಯವಾಗಿದ್ದು ಇದನ್ನು ಭಾನುದಾಸ ಖಡಾಮಕರ ರಚಿಸಿದ್ದಾರೆ ಮತ್ತು ಇದನ್ನು ಕನ್ನಡಕ್ಕೆ ಗದ್ಯಾನುವಾದ ಸುಬ್ರಹ್ಮಣ್ಯಂ ಕೆಂದೋಳ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಅಂಜಿನಪ್ಪ ಮಳೆಕಾರ್, ಏಕಕೋಟೆ ತಿಪ್ಪಣ್ಣ, ಮಳೆಕಾರ್ ಭರತ್ ಕುಮಾರ್ ,ಮಳೆಕಾರ್ ಲಕ್ಷ್ಮಣ, ಸಂತೋಷ್ ಹಾಗೂ ಶ್ರೀಕಾಂತ್ ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















