ಗುರುಮಠಕಲ್: ಯಾದಗಿರಿ ಜಿಲ್ಲೆಯ ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷರಾದ ಗೌಡಪ್ಪ ಅಲ್ದಾಳ ಅವರು ನಕಲಿ ಜಾತಿ ಪ್ರಮಾಣ ಪತ್ರ ವಿರೋಧಿಸಿ ಇದೇ ಆಗಸ್ಟ್ 13ರಂದು ವಾಲ್ಮೀಕಿ ಸಮಾಜದ ವತಿಯಿಂದ ಯಾದಗಿರಿ ನಗರದಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದು, ಈ ಪ್ರತಿಭಟನೆಗೆ ಕೈ ಜೋಡಿಸಲು ಗುರುಮಠಕಲ್ ತಾಲೂಕಿನ ಗ್ರಾಮಗಳಿಗೆ ಭೇಟಿ ನೀಡಿ ವಾಲ್ಮೀಕಿ ಸಮಾಜದ ಮುಖಂಡರೊಂದಿಗೆ ಸಮಾಲೋಚನೆ ಮಾಡಿರುವುದಾಗಿ ವಾಲ್ಮೀಕಿ ಸಮಾಜದ ತಾಲೂಕಿನ ಅಧ್ಯಕ್ಷರಾದ ಕಾಶಪ್ಪ ದೊರೆ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಗ್ರಾಮಗಳ ಮುಖಂಡರ ಭೇಟಿಗೆ ವಾಲ್ಮೀಕಿ ಸಮಾಜದ ಗೌರವ ಅಧ್ಯಕ್ಷರಾದ ನರಸಪ್ಪ ದೊರೆ ಮತ್ತು ತಾಲೂಕ ಪ್ರಧಾನ ಕಾರ್ಯದರ್ಶಿ ತಿಮ್ಮಯ್ಯ ನಾಯಕ ಕಾಳೆಬೆಳಗುಂದಿ, ತಾಲೂಕು ಉಪಾಧ್ಯಕ್ಷರಾದ ಭೀಮಪ್ಪ ನಾಯಕ ಅಮ್ಮಪಲ್ಲಿ, ತಾಲೂಕು ಖಜಾಂಚಿಯಾದ ಶ್ರೀನಿವಾಸ್ ನಾಯಕ ಸಣ್ಣ ಸಂಭ್ರ, ಸಹ ಕಾರ್ಯದರ್ಶಿಗಳಾದ ನಿಂಗಪ್ಪ ನಾಯಕ ಚಿನ್ನಕಾರ, ಬಾಬು ದೊರೆ ತಾತಾಳಗೇರ, ಕಾನೂನು ಸಲಹೆಗಾರರಾದ ಮಾರಪ್ಪ ನಾಯಕ ಕಾಳೆಬೆಳಗುಂದಿ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಮತ್ತು ಸಮಾಜದ ಚಿಂತಕರು ಜೊತೆಯಾದರು.
ವರದಿ: ಜಗದೀಶ್ ಕುಮಾರ್ ಭೂಮಾ



















