ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಡವರ ಸಾಧನೆ ಗುರುತಿಸಿ ಸನ್ಮಾನಿಸಿದ ಪೋಲಿಸ್ ಠಾಣಾಧಿಕಾರಿ

ಚಿಕ್ಕಮಗಳೂರು / ಕೊಪ್ಪ : ಪಟ್ಟಣದ ಪೋಲಿಸ್ ಠಾಣಾಧಿಕಾರಿ ಬಸವರಾಜ್ ಅವರು ಈ ಹಿಂದಿನಿಂದಲೂ ಸಮಾಜ ಮುಖಿ ಕಾರ್ಯಗಳ ಮುಖಾಂತರ ಸಾರ್ವಜನಿಕ ವಲಯದಲ್ಲಿ ಬಹಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ಮತ್ತೊಂದು ವಿಶೇಷ ಕಾರ್ಯಕ್ರಮದ ಮೂಲಕ ಕೊಪ್ಪ ಪೋಲಿಸ್ ಠಾಣೆಯ ಹೆಸರನ್ನು ಮತ್ತಷ್ಟು ಎತ್ತರಕ್ಕೆ ಹೋಗುವಂತೆ ಮಾಡಿರುತ್ತಾರೆ. ಕೊಪ್ಪ ಪಟ್ಟಣದಲ್ಲಿ ವಾಸವಾಗಿರುವ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಯಾವುದೇ ರೀತಿಯ ಪೋಸ್ಟ್ ಮಾರ್ಟಮ್ ಗೆ ಬರುವ ಶವಗಳನ್ನು ತ್ವರಿತ ರೀತಿಯಲ್ಲಿ ಪೋಸ್ಟ್ ಮಾರ್ಟಮ್ ಮಾಡಿ ಅದರ ವರದಿ ನೀಡಲು ಪೋಲಿಸ್ ಇಲಾಖೆಗೆ ಸಹಾಯ ಮಾಡುತ್ತಿರುವ ನೌಕರರಾದ ಶ್ರೀ ರಾಜಣ್ಣ ಮತ್ತು ಹೋಟೆಲ್ ಒಂದರಲ್ಲಿ ಕ್ಲೀನಿಂಗ್ ಕೆಲಸ ಮಾಡುವ ಶ್ರೀ ಚಂದ್ರಶೇಖರ್ ಅವರು ಹಲವಾರು ಶಾಲೆಗಳ ಮಕ್ಕಳಿಗೆ ತನಗೆ ಬರುವ ಅಲ್ಪ ಆದಾಯದಲ್ಲಿ ನೋಟ್ ಪುಸ್ತಕ ನೀಡುತ್ತಿರುವುದನ್ನು ತಿಳಿದುಕೊಂಡು ,ಇಬ್ಬರನ್ನೂ ಕೊಪ್ಪ ಪೋಲಿಸ್ ಠಾಣೆಗೆ ಕರೆಸಿ ಸನ್ಮಾನಿಸಿ ಗೌರವಿಸುವಲ್ಲಿ ಮಹತ್ತರವಾದ ಪಾತ್ರವನ್ನು ಕೊಪ್ಪ ಪೋಲಿಸ್ ಠಾಣಾಧಿಕಾರಿ ಶ್ರೀ ಬಸವರಾಜ್ ನಿರ್ವಹಿಸಿರುತ್ತಾರೆ. ಇವರ ಈ ರೀತಿಯ ಕಾರ್ಯದಿಂದ ಉಳಿದವರು ಸಹ ಪ್ರೇರಣೆಯಿಂದ ಇನ್ನೂ ಹೆಚ್ಚಿನ ಸಾಮಾಜಿಕ ಕಾರ್ಯ ಮಾಡುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಇವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಬಹಳ ಮೆಚ್ಚುಗೆ ವ್ಯಕ್ತ ವಾಗಿದ್ದು, ಇಂತಹ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳ ನಡೆಯನ್ನು ಉಳಿದವರು ಸಹ ಅನುಸರಿಸಲಿ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇವರ ಈ ಕಾರ್ಯಗಳು ಹೀಗೆ ಮುಂದುವರೆಯಲಿ ಎಂದು
” ಕರುನಾಡ ಕಂದ ಪತ್ರಿಕೆ” ಅಭಿಮತ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!