ರಾಯಚೂರು: ಸೈನಿಕ ಮಿತ್ರ ತಂಡ ಕನಾ೯ಟಕ ಹಾಗೂ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಯಚೂರು ವತಿಯಿಂದ ನಮ್ಮನ್ನು ರಕ್ಷಿಸುವ ಭಾರತೀಯ ಸೇನೆಯ ವೀರ ಯೋಧರಿಗೆ ರಕ್ಷೆ ಕಟ್ಟಿ ರಕ್ಷಾಬಂಧನವನ್ನು ಆಚರಿಸಲಾಯಿತು.
ಸೈನಿಕ ಮಿತ್ರ ತಂಡ ಹಾಗೂ ಎಬಿವಿಪಿಯ ಸಹಯೋಗದಲ್ಲಿ ರಾಯಚೂರಿನ ಕೃಷಿ ವಿಜ್ಞಾನಗಳ ವಿದ್ಯಾಲಯದ ಮೈದಾನದಲ್ಲಿ ಆಗಸ್ಟ್ 8 ರಿಂದ 25 ರ ವರೆಗೆ ಜರುಗುತ್ತಿರುವ ಅಗ್ನಿವೀರ ಸೇನಾ ನೇಮಕಾತಿಗೆ ಆಗಮಿಸಿದ ಭಾರತೀಯ ಸೇನಾ ಯೋಧರ ಕೈಗಳಿಗೆ ರಕ್ಷೆ ಕಟ್ಟಿ ರಕ್ಷಾಬಂಧನವನ್ನು ಆಚರಣೆ ಮಾಡಲಾಯಿತು.
- ಕರುನಾಡ ಕಂದ



















