ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಇದೇ ತಿಂಗಳ 15 ರಂದು ಶ್ರೀಗಳ ಮೌನ ಅನುಷ್ಠಾನ ಸಂಪನ್ನ | ವಿವಿಧ ಮಠಾಧೀಶರು, ರಾಜಕೀಯ ಗಣ್ಯರು ಪಾಲ್ಗೊಳ್ಳುವ ಸಾಧ್ಯತೆ

ಗುರುಮಠಕಲ್/ಚಿಂತನಳ್ಳಿ: ಶ್ರೀ ಸಿದ್ದಲಿಂಗೇಶ್ವರ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತಮಠ ನೇರಡಗಂ ಶ್ರೀಗಳು ಲೋಕ ಕಲ್ಯಾಣಕ್ಕಾಗಿ ಶಿವಯೋಗ ಸಾಧನೆಗಾಗಿ 21 ದಿನಗಳ ಕಾಲ ಕೈಗೊಂಡಿದ್ದ ಮೌನ ಅನುಷ್ಠಾನ ಇದೇ 15ರಂದು ಸಂಪನ್ನವಾಗಲಿದೆ.

ನೇರಡಗಂ ಮತ್ತು ಬೋರಬಂಡ ಶ್ರೀ ಸಿದ್ಧಲಿಂಗೇಶ್ವರ ಪಶ್ಚಿಮಾದ್ರಿ ವಿರಕ್ತಮಠ ಪೂಜ್ಯರಾದ ಶ್ರೀ ಪಂಚಮ ಸಿದ್ಧಲಿಂಗ ಸ್ವಾಮಿಗಳು ಲೋಕ ಕಲ್ಯಾಣ ಹಾಗೂ ಶಿವಯೋಗ ಸಾಧನೆ ಸಿದ್ದಿಗಾಗಿ ಚಿಂತನಹಳ್ಳಿ ಮಹಾತ್ಮ ಶ್ರೀ ಗವಿಸಿದ್ದಲಿಂಗೇಶ್ವರ ಪುಣ್ಯ ನಿಸರ್ಗದ ಮಡಿಲಲ್ಲಿ ಕಳೆದ ತಿಂಗಳು ಜುಲೈ 25 ರಿಂದ 21 ದಿನಗಳ ಕಾಲ ಮೌನ ಅನುಷ್ಠಾನ ಕೈಗೊಂಡಿದ್ದರು, ನಿತ್ಯ ತ್ರಿಕಾಲ ಪೂಜೆ ಇಷ್ಟಲಿಂಗ ಪೂಜೆ ಧ್ಯಾನ, ಜಪ, ಕೈಗೊಳ್ಳುತ್ತಾ ದಿನಕ್ಕೆ ಎರಡು ಮೂರು ಗಂಟೆ ಮಾತ್ರ ಬಂದ ಭಕ್ತರಿಗೆ ದರ್ಶನ ನೀಡಿ, ಉಳಿದ ಸಮಯದಲ್ಲಿ ತಮ್ಮ ಶಿವಯೋಗ ಸಾಧನೆಗೆ ಮೀಸಲಿಟ್ಟಿದ್ದಾರೆ, ಪೂಜ್ಯರ ಈ ಸಂಕಲ್ಪ ಈಡೇರಲಿ ಅವರ ಅನುಷ್ಠಾನದ ಫಲ ಈ ಭಾಗದ ಭಕ್ತರ ಮೇಲೆ ಇರಲಿ ಎಂದು ಆಶಿಸುತ್ತೇವೆ.

ಪೂಜ್ಯರ ಈ ಮೌನ ಅನುಷ್ಠಾನವು ಇದು ಅವರ ಐದನೇ ಅನುಷ್ಠಾನವಾಗಿದ್ದು ಇದೇ 15ನೇ ತಾರೀಖು ಆಗಸ್ಟ್ 15ರಂದು ಬೆಳಿಗ್ಗೆ ತ್ರಿಕಾಲ ಲಿಂಗಪೂಜೆ ನಿಷ್ಠರಾದ ವಳ ಬಳ್ಳಾರಿ ಸುವರ್ಣ ಗಿರಿ ವಿರಕ್ತಮಠದ ಪೂಜ್ಯ ಸಿದ್ದಲಿಂಗ ಸ್ವಾಮಿಗಳ ಇಷ್ಟಲಿಂಗ ಪೂಜೆ ಮತ್ತು ಪಾದ ಪೂಜೆಯೊಂದಿಗೆ ಮೌನ ಅನುಷ್ಠಾನ ಸಂಪನ್ನಗೊಳ್ಳುವದು.

ಅನುಷ್ಠಾನ ಮುಕ್ತಾಯದ ನಂತರ ಧರ್ಮಸಭೆ ನಡೆಯಲಿದೆ ಈ ಕಾರ್ಯಕ್ರಮದಲ್ಲಿ ವಿವಿಧ ಮಠಾಧಿಪತಿಗಳು, ರಾಜಕೀಯ ನಾಯಕರು, ಸಂಗೀತಕಾರರು, ಭಜನೆ ಮಂಡಳಿಯವರು ಹಾಗೂ ಅಪಾರ ಭಕ್ತವೃಂದದವರು ಖಾಸಾಮಠದ ಭಕ್ತರು ಸುತ್ತಮುತ್ತಲಿನ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀ ಮಠದ ಭಕ್ತರು ಮಾಹಿತಿ ನೀಡಿದ್ದಾರೆ.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!