ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಉತ್ತಮ ಆರೋಗ್ಯಕ್ಕೆ ಸಾವಯುವ ಗೊಬ್ಬರ ಬೇಕು : ಬಳ್ಳೆಕೆರೆ ವಿಶ್ವನಾಥ್

ಚಿಕ್ಕಮಗಳೂರು/ ಕಡೂರು : ಇತ್ತೀಚಿನ ದಿನಗಳಲ್ಲಿ ಹೃದಯಾಘಾತ, ಶುಗರ್, ಬಿಪಿ ಕಾಯಿಲೆಗಳು ಪ್ರತಿಯೊಬ್ಬರಲ್ಲಿಯೂ ಸಾಮಾನ್ಯ ಎಂಬಂತಾಗಿದೆ ಇದಕ್ಕೆ ನಾವುಗಳು ಉಪಯೋಗಿಸುವ ಆಹಾರ ಕಾರಣ ರಾಸಾಯನಿಕ ರಸಗೊಬ್ಬರ ಬಳಸದೆ ಸಾವಯುವ ಗೊಬ್ಬರದಿಂದ ಬೆಳೆಯುವ ಸೊಪ್ಪು ತರಕಾರಿಗಳನ್ನು ಉಪಯೋಗಿಸುವುದರ ಮೂಲಕ ಉತ್ತಮ ಆರೋಗ್ಯವನ್ನು ಪಡೆಯಬೇಕಿದೆ ಎಂದು ಕಡೂರು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾದ ಬಳ್ಳೇಕೆರೆ ವಿಶ್ವನಾಥ್ ತಿಳಿಸಿದರು. ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ರೈತ ಬಜಾರ್ ನಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ಯಾವುದೇ ರಸಗೊಬ್ಬರಗಳನ್ನು ಬಳಸದೆ ಮನೆಯ ಹಸುಗೊಬ್ಬರವನ್ನು ಉಪಯೋಗಿಸಿಕೊಂಡು ವೈ ಮಲ್ಲಾಪುರದ ರೈತ ಷಣ್ಮುಖ ಇವರು ಬೆಳೆಯುತ್ತಿರುವ ಸೊಪ್ಪು ಹಾಗೂ ತರಕಾರಿ ಮಳಿಗೆಯನ್ನು ಪ್ರಾರಂಭಿಸಿ ಮಾತನಾಡಿ ಇದೇ ರೀತಿಯಲ್ಲಿ ಬೆಳೆಯುವ ರೈತರಗಳಿಂದ ನೇರವಾಗಿ ರೈತ ಬಜಾರ್ ನಿಂದ ಕೊಂಡು ನಿಖರವಾದ ಬೆಲೆಯಲ್ಲಿ ಗ್ರಾಹಕರಗಳಿಗೆ ದೊರಕಿಸಲು ರೈತ ಬಜಾರ್ ನಲ್ಲಿ ರೈತರಿಗೆ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಗತಿ ಉತ್ಪಾದಕರ ಸಿಇಓ ಕುಮಾರ್ , ನಿರ್ದೇಶಕರುಗಳಾದ ಮಲ್ಲೇಶ್ವರ ಧರ್ಮಣ್ಣ, ಎಸ್ ಎಸ್ ಜಯಣ್ಣ, ಚಿರನಹಳ್ಳಿ ಬಸವರಾಜ್, ಅಲೆಮಾರಿ ಅಭಿವೃದ್ಧಿ ನಿಗಮದ ಜಿಲ್ಲಾ ಅನುಷ್ಠಾನ ಸಮಿತಿ ಸದಸ್ಯ ಮಲ್ಲಿದೇವಿಹಳ್ಳಿ ಶ್ರೀನಿವಾಸ್ ಇದ್ದರು.

ವರದಿ ಮಲ್ಲಿದೇವಿಹಳ್ಳಿ ಶ್ರೀನಿವಾಸ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!