ಬಳ್ಳಾರಿ / ಕಂಪ್ಲಿ : ತಾಲೂಕಿನ ನಂ.10 ಮುದ್ದಾಪುರ ಗ್ರಾ. ಪಂ. ವ್ಯಾಪ್ತಿಯಲ್ಲಿ ಬರುವ ಬೆಳಗೋಡಹಾಳ್ ಗ್ರಾಮದಲ್ಲಿ ಆರಾಧ್ಯ ದೈವ ಮುಂಜಿ ಬಸವೇಶ್ವರ ಗಂಗೆಸ್ಥಳ ಮೆರವಣಿಗೆ ಶ್ರದ್ದಾಭಕ್ತಿ ಹಾಗೂ ಸಡಗರದಿಂದ ಸೋಮವಾರ ಜರುಗಿತು.
ತುಂಗಭದ್ರ ನದಿ ತಟದಲ್ಲಿ ಗಂಗೆಪೂಜೆ ನೆರವೇರಿಸಿದ ನಂತರ ಮೆರವಣಿಗೆ ಪ್ರಾರಂಭಿಸಿ, ತದ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಮುಂಜಿ ಬಸವೇಶ್ವರ ದೇವಸ್ಥಾನ ಬಳಿಯಲ್ಲಿ ಸಮಾವೇಶಗೊಂಡಿತು. ವೀರಗಾಸೆ, ಕುಂಭ, ಕಳಸ, ನಂದಿಕೋಲು, ತಾಷಾರಾಂಡೋಲ್ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ದೇವಸ್ಥಾನದಲ್ಲಿ ಅಭಿಷೇಕ, ಪುಷ್ಪಾಲಂಕಾರ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಜನರು ಕಾಯಿ, ಕರ್ಪೂರ ನೀಡಿ ದೇವರ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಗ್ರಾ. ಪಂ. ಸದಸ್ಯ ಎಸ್.ಚಂದ್ರಶೇಖರಗೌಡ, ಮುಖಂಡರಾದ ಕೆ.ದೊಡ್ಡಪ್ಪ, ಎಸ್.ವಿರುಪಾಕ್ಷಿ, ಓಂಕಾರಿಗೌಡ, ಜೀರ್ ಅಯ್ಯಪ್ಪ, ಎಂ.ಮೂರ್ತಿಸ್ವಾಮಿ, ಕೆ.ರಾಜಶೇಖರ, ವೈ.ಮಲ್ಲಿಕಾರ್ಜುನಗೌಡ, ಜಿ.ರಾಜಶೇಖರ, ಕಲ್ಯಾಣಿ ಗಂಗಾಧರ, ಜಿ.ತಿಪ್ಪೇರುದ್ರ, ಮಡಿವಾಳ ಅಂಬರೇಶ, ಕಲ್ಯಾಣಿ ಚನ್ನಬಸುವ ಹಾಗೂ ಗ್ರಾಮದ ಸದ್ಭಕ್ತರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















