ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹರ್ ಘರ್ ತಿರಂಗಾ ಬೈಕ್ ರ‍್ಯಾಲಿ | ಚಾಲನೆ ನೀಡಿದ ಭಾ.ಜ.ಪ ರಾಜ್ಯ ಕಾರ್ಯದರ್ಶಿ ಲಲಿತಾ ಅನಪುರ

ಯಾದಗಿರಿ/ ಗುರುಮಠಕಲ್ : ಪಟ್ಟಣದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ನಿನ್ನೆ ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ ಬೈಕ್ ರ‍್ಯಾಲಿ ಜರುಗಿತು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬೈಕ್ ರ‍್ಯಾಲಿ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಭಾ. ಜ. ಪ ರಾಜ್ಯ ಕಾರ್ಯದರ್ಶಿ ಹಾಗೂ ಯಾದಗಿರಿ ನಗರಸಭೆಯ ಅಧ್ಯಕ್ಷೆ ಆಗಿರುವ ಲಲಿತಾ ಅನಪುರ, ಆಗಸ್ಟ್ 15ರಂದು ಸ್ವಾತಂತ್ರ್ಯ ದಿನೋತ್ಸವದ ಹಿನ್ನಲೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿರುವ ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಬೈಕ್ ರ‍್ಯಾಲಿ ಆಯೋಜಿಸಿರುವುದಾಗಿ ಅವರು ತಿಳಿಸಿದರು.
ಅಭಿಯಾನದಲ್ಲಿ ಪ್ರತಿ ಮನೆಯಲ್ಲೂ ಆಗಸ್ಟ್ 15ರಂದು ಬೆಳಿಗ್ಗೆ ನಮ್ಮ ಹೆಮ್ಮೆಯ ತ್ರಿವರ್ಣ ಧ್ವಜಾರೋಹಣ ಮಾಡುವುದು ಮತ್ತು ಗೌರವ ಪೂರ್ವಕವಾಗಿ ಸಂಜೆ ವೇಳೆ ಅವರೋಹಣವನ್ನೂ ಮಾಡಬೇಕು, ಜೊತೆಗೆ ಧ್ವಜವನ್ನು ಅತ್ಯಂತ ಗೌರವದಿಂದ ಮನೆಯಲ್ಲಿ ಸಂರಕ್ಷಿಸಿಡಬೇಕು, ರಾಷ್ಟ್ರ ಧ್ವಜಕ್ಕೆ ಅವಮಾನವಾಗುವಂತೆ ಎಲ್ಲೆಂದರಲ್ಲಿ ಬಿಸಾಡದಿರಿ ಎಂದು ಕೋರಿದರು.
ಬಸವೇಶ್ವರ ವೃತ್ತದಲ್ಲಿ (ಹಳೇ ತಹಶೀಲ್ದಾರ್ ಕಚೇರಿ) ನಿಜಶರಣ ಅಂಬಿಗರ ಚೌಡಯ್ಯ ವೃತ್ತ, ಗಂಗಾಪರಮೇಶ್ವರ ವೃತ್ತ, ನಗರೇಶ್ವರ ದೇವಸ್ಥಾನ, ನಾಅನಾಪುರ ಬಡಾವಣೆ, ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆಯಲ್ಲಿ ಬಂದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಡಾ. ಬಾಬೂಜೀ ಮೂರ್ತಿಗಳಿಗೆ ಹೂಮಾಲೆ ಹಾಕುವ ಮೂಲಕ ಬೈಕ್ ರ‍್ಯಾಲಿ ಪೂರ್ಣಗೊಂಡಿತು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಗುರು ಕಾಮಾ, ನೀಲಪ್ಪ ಗುಳಿಗಿ, ಯುವ ಮೋರ್ಚಾ ಅಧ್ಯಕ್ಷ ಶ್ರೀಧರ, ಮಂಡಲ ಘಟಕದ ಅಧ್ಯಕ್ಷ ನರಸಿಂಹುಲು ನಿರೇಟಿ, ಕೆ.ದೇವದಾಸ, ವೆಂಕಟಪ್ಪ ಅವಾಂಗಪುರ, ಮಲ್ಲಿಕಾರ್ಜುನ ಹೊನಗೇರಾ, ಚಂದೂಲಾಲ್ ಚೌದರಿ, ಜಗದೀಶ ಮೇಂಗಜಿ, ಮೌನೇಶ ಬೆಳಗೇರಾ, ವಿನಾಯಕರಾವ ಜನಾರ್ಧನ, ರಾಜೇಂದ್ರ ಕಲಾಲ್, ಮಲ್ಲೇಶಪ್ಪ ಬೇಲಿ, ರವೀಂದ್ರರೆಡ್ಡಿ ಪೋತುಲ್, ರಾಮುಲು, ಮರಿಲಿಂಗ, ಲಕ್ಷ್ಮಣ ಆಶನಾಳ, ಬಾಲಪ್ಪ, ಸುನೀಲ್ ಕಡೇಚೂರ, ಚನ್ನಪ್ಪ ಕಾಕಲವಾರ, ರಮೇಶ್ ಕಾಕಲವಾರ ಉಪಸ್ಥಿತರಿದ್ದರು.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!