ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಲ್ಬುರ್ಗಿ ಶರಣಬಸವೇಶ್ವರರ ಪುರಾಣದಲ್ಲಿ ರಾಶಿ ಪೂಜೆ

ಬಳ್ಳಾರಿ / ಕಂಪ್ಲಿ : ಪಟ್ಟಣದಲ್ಲಿ ಬಸವಾದಿ ಶರಣರು ಹಾಕಿಕೊಟ್ಟ ಪರಂಪರೆ, ಧಾರ್ಮಿಕ ಆಚರಣೆಗಳು ಇಂದಿಗೂ ನಡೆದುಕೊಂಡು ಬಂದಿವೆ. ಇಲ್ಲಿನ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಶರಣಬಸವೇಶ್ವರ ಪುರಾಣ ಕಾರ್ಯಕ್ರಮಕ್ಕೆ ತನ್ನದೇ ಆದ ಇತಿಹಾಸವಿದೆ. ವಿವಿಧ ಧಾರ್ಮಿಕ ಆಚರಣೆಗಳು ಶ್ರಾವಣ ಮಾಸ ನಿಮಿತ್ಯ ನಡೆದ ಪವಾಡ ಪುರುಷ ಕಲಬುರ್ಗಿ ಶ್ರೀ ಶರಣಬಸವೇಶ್ವರ ಅವರ ದಾಸೋಹ ಕಾಯಕ ಬರೀ ಮನುಜರಿಗೆ ಮಾತ್ರವೇ ಸೀಮಿತವಾಗಿರಲಿಲ್ಲ. ಇತರ ಪ್ರಾಣಿ ಹಾಗೂ ಹಕ್ಕಿಗಳಿಗೂ ನಡೆಯುತ್ತಿತ್ತು. ಅವರು ಕೃಷಿಯನ್ನು ತಮ್ಮ ಕಾಯಕವನ್ನಾಗಿಸಿ ಕೊಂಡಿದ್ದರು. ಹೊಲದಲ್ಲಿ ಹಕ್ಕಿಗಳ ಕಾಟದಿಂದ ಎಲ್ಲರೂ ಹಕ್ಕಿಗಳನ್ನು ಓಡಿಸುತ್ತಿದ್ದರು. ಹಕ್ಕಿಗಳು ಬೆಳೆಗಳಿಗೆ ಅಂಟಿಕೊಂಡಿರುವ ಹುಳುಗಳನ್ನು ತಿನ್ನುವುದರಿಂದ ಬೆಳೆಗಳು ಹಾಳಾಗುವುದು ಕಡಿಮೆಯಾಗುತ್ತದೆ ಎಂದರಿತ ಇವರು, ಹಕ್ಕಿಗಳ ಸಹಾಯದಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದೆಂದು ಹೊಲಕ್ಕೆ ಬರುವ ಹಕ್ಕಿಗಳಿಗೆ ಕುಡಿಯುವ ನೀರಿನ ವ್ಯವಸ್ತೆಯನ್ನು ಮಾಡಿದರು. ಇವರು ಜೋಳದ ಬೆಳೆಯನ್ನು ಬಿತ್ತಿದ್ದರು. ಹಕ್ಕಿಗಳು ಸಾಮಾನ್ಯ ಆಹಾರವಾದ ಕ್ರಿಮಿಕೀಟಗಳನ್ನು ತಿಂದದ್ದರಿಂದ ಒಳ್ಳೆಯ ಜೋಳದ ಬೆಳೆ ಬೆಳೆಯಿತು. ಇವರ ಜೋಳದ ಇಳುವರಿ ಊರಿನ ಮಂದಿಯನ್ನು ಬೆರಗಾಗಿಸಿತ್ತು. ಪರಿಸರದಲ್ಲಿನ ಜೀವ ವೈವಿದ್ಯಗಳ ನೆರವಿನಿಂದ ಕೃಷಿಯನ್ನು ಮಾಡಿ ಎಲ್ಲರಿಗೂ ಮಾದರಿಯಾದರು. ಲೀಲಾಮೃತ ಪುರಾಣ ಪ್ರವಚನದಲ್ಲಿಬರುವ ಈ ಸನ್ನಿವೇಶಕ್ಕೆ ತಕ್ಕಂತೆ ಸೋಮವಾರ ಶರಣಬಸವೇಶ್ವರರವರ ಪುರಾಣದಲ್ಲಿ ರೈತರಿಗೋಸ್ಕರ ರಾಶಿ ಪೂಜೆಯನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಪುರಾಣ ಪ್ರವಚನಾಕಾರರಾದ ಶ್ರೀ ಗವಿಸಿದ್ದೇಶ್ವರ ಶಾಸ್ತ್ರಿಗಳು, ತಬಲಾ ವಾದಕರಾದ ಚಿದಾನಂದ ಗವಾಯಿ, ಪ್ರಮುಖರಾದ ಗಂಡಿ ಗಣೇಶ, ಟಿ.ಸುರೇಶ್ ಗೌಡ, ಶಿವಮೂರ್ತಿ ಸ್ವಾಮಿ, ಶಂಕರಪ್ಪ ಘನಮಠದಯ್ಯ ಹಿರೇಮಠ್, ಕೆ.ಎಂ. ಹೇಮಯ್ಯಸ್ವಾಮಿ, ವಾಲಿ ಕೊಟ್ರಪ್ಪ, S. D. ಬಸವರಾಜ, ಎಲಿಗಾರ್ ವೆಂಕಟರೆಡ್ಡಿ, ಮರಿ ಶೆಟ್ರು ವಿಜಯಕುಮಾರ, ಜಡೇಯ ಸ್ವಾಮಿ, ಸಜೇದ್ದ ಶರಣಪ್ಪ, ಎಚ್.ಎಸ್. ವೀರೇಶ, ಫುಡ್ ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ ಜಿಲಾನಸಾಬ್ ಬಡಿಗೇರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!