6 ನೇ ದಿನಕ್ಕೆ ಮುಂದುವರಿದ ಅನಿರ್ಧಿಷ್ಟ ಧರಣಿ.
ಕಲಬುರಗಿ ಜಿಲ್ಲೆಯ ಯಡ್ರಾಮಿ ಪಟ್ಟಣ ಪಂಚಾಯತ ವಿರುದ್ಧ ಬಿಸಿಲು ನಾಡಿನ ಹಸಿರು ಸೇನೆ ಪಟ್ಟಣ ಪಂಚಾಯತ ಮುಂಭಾಗದಲ್ಲಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಂಡು ನಾಲ್ಕು ದಿನ ಕಳೆದ ಪ್ರಯುಕ್ತ ತಾಲೂಕು ದಂಡಾಧಿಕಾರಿಗಳಾದ ಯಲ್ಲಪ್ಪ ಸುಭೇದಾರ ಅವರು ಧರಣಿ ಸ್ಥಳಕ್ಕೆ ಬಂದು ಮನವರಿಕೆಗೆ ಯತ್ನ ಮಾಡಿದರು.
ಪಟ್ಟಣ ಪಂಚಾಯತಿಗೆ 2021 ರಿಂದ 2025 ವರೆಗೂ ಸರಕಾರದಿಂದ ಬಂದ ಸಂಪೂರ್ಣ ಅನುದಾನ ದುರುಪಯೋಗ ಆಗಿದ್ದು ಈ ದುರುಪಯೋಗ ಆದ ಹಗರಣವನ್ನು ಜಿಲ್ಲಾಡಳಿತ ತನಿಖಾ ತಂಡ ರಚನೆ ಮಾಡಿ ಸಂಪೂರ್ಣ ತನಿಖೆ ಮಾಡುವಂತೆ ಒತ್ತಾಯಿಸಿ ಧರಣಿ ನಡೆಸಲಾಗುತ್ತಿದ್ದು ತಾಲೂಕು ದಂಡಾಧಿಕಾರಿಗಳು ಧರಣಿ ಸ್ಥಳಕ್ಕೆ ಆಗಮಿಸಿ ತಮ್ಮ ಎಲ್ಲಾ ತರಹದ ದಾಖಲೆಗಳು ನೀಡಲಾಗುವುದು ತಮ್ಮ ಧರಣಿ ಹಿಂಪಡೆದುಕೊಳ್ಳಿ ಎಂದು ಧರಣಿ ನಿರತ ಹೋರಾಟಗಾರರಿಗೆ ಮನವರಿಕೆ ಮಾಡಿದರು.
ಸಂಘಟನಾಕಾರರು ಪ್ರತಿಕ್ರಿಯೆ ನೀಡಿ ತಕ್ಷಣ ಜಿಲ್ಲಾಡಳಿತ 2021-2025 ವರೆಗೂ ಬಂದ ಸಂಪೂರ್ಣ ಅನುದಾನ ಯಾವುದಕ್ಕೆ ಬಳಕೆ ಮಾಡಲಾಗಿದೆ ಎಂದು ತನಿಖಾ ತಂಡ ರಚನೆ ಮಾಡಿ ಅನುದಾನ ದುರುಪಯೋಗ ಆದ ಹಣದ ಬಗ್ಗೆ ತನಿಖೆ ಮಾಡಬೇಕು ಆಗ ಮಾತ್ರ ಧರಣಿ ಹಿಂದೆ ಪಡೆದುಕೊಳ್ಳುತ್ತೇವೆ ಎಂದು ಹೇಳಿದರು.
ಪಟ್ಟಣ ಪಂಚಾಯತಿಯಿಂದ ಅನಧಿಕೃತ ಸರಕಾರಿ ಜಾಗದಲ್ಲಿ ಫಾರ್ಮ್ ನಂಬರ 3 ವಿತರಣೆ ಮಾಡಲಾಗಿದೆ ಅದರ ಬಗ್ಗೆ ಹಾಗೂ ಪಟ್ಟಣ ಪಂಚಾಯತಿಯ ತೆರಿಗೆ ಹಣ ಕೂಡಾ ಯಾವುದಕ್ಕೆ ಬಳಕೆ ಮಾಡಲಾಗಿದೆ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಯಲ್ಲಪ್ಪ ಸುಭೇದಾರ, ಆರಕ್ಷಕ ಉಪನಿರಿಕ್ಷಕರು ವಿಶ್ವನಾಥ ಮುದರಡ್ಡಿ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಶಾಮ ಭಜಂತ್ರಿ, ಲಕ್ಷ್ಮಿಕಾಂತ ಮದ್ದರಕಿ ರಾಜ್ಯ ರೈತ ಸಂಘ ರಾಜ್ಯ ಉಪಾಧ್ಯಕ್ಷರು ಬೆಂಗಳೂರು, ಶಪೀಉಲ್ಲಾ ದಖನಿ, ಲಾಳೇಬಾಸ ಮನಿಯಾರ, ವಿರೇಶ ಕೆರೆಪ್ಪಗೌಡ, ಮಹೇಂದ್ರ ಬಾಲೂರ, ಮಂಜುನಾಥ ಕುಲಕರ್ಣಿ, ಮಾಳುಕಾರಗುಂಡ, ಸುರೇಶ ಬಜಂತ್ರಿ, ಹಣಮಂತ ಕಡಕೋಳ,ನಿಂಗಣ್ಣ ಮ್ಯಾಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ ರಾಚೋಟಯ್ಯ ಹಿರೇಮಠ



















