ಆಚರಿಸುತ್ತಿದ್ದೇವೆ ನಾವು
ಎಪ್ಪತ್ತೊಂಬತ್ತನೆಯ
ಸ್ವಾತಂತ್ರ್ಯ ದಿನೋತ್ಸವ,
ಹೋರಾಟ, ತ್ಯಾಗ, ಬಲಿದಾನಗಳೇ, ನಮ್ಮ
ಅಸ್ತ್ರಗಳು,
ಪಡೆದೆವು ನಾವು
ಅಂತೂ ಸ್ವಾತಂತ್ರ್ಯ,
ಕಳೆದುಕೊಂಡೆವು ಸ್ವತಂತ್ರ!
ಸ್ವಾತಂತ್ರ್ಯವೆಂದರೇನು?
ತಿಳಿದೆವು ನಾವು ಸ್ವೇಚ್ಛಾಚಾರ
ಅಂತೆಯೇ ಎಲ್ಲೆಡೆ ಈಗ ಭ್ರಷ್ಟಾಚಾರ!
ಸ್ವಾತಂತ್ರ್ಯ ಸಿಕ್ಕಿತೆಂದು
ಸಂತೋಷ ಪಡೋಣವೇ,
ಸ್ವತಂತ್ರ ಕಳೆದುಕೊಂಡೆವೆಂದು
ದುಃಖಿಸೋಣವೇ?
ಏರುತಿದೆ ನೋಡಿಲ್ಲಿ ಧ್ವಜ,
ಕೇಸರಿ, ಬಿಳಿ, ಹಸಿರು,
ವರ್ಣಗಳಲಿ, ಬಾನೆತ್ತರ.
ಏರುತಿದೆ ನೋಡಿಲ್ಲಿ ಸಂಖ್ಯೆ,
ಇದು ಭಾರತದ ಜನಸಂಖ್ಯೆ,
ದಿನೆ ದಿನೇ ಕೋಟ್ಯಾಂತರ!
ನಾವು ಎಷ್ಟು ಮುಂದುವರಿದಿದ್ದೇವೆ
ಅಂದರೆ, ಸಂವಿಧಾನ ಬದಲಿಸುವಷ್ಟು!
ಸಾಧ್ಯವಾದಷ್ಟು ತಿರುಚುವಷ್ಟು!
ನಮಗೆ ಸ್ವಾತಂತ್ರ್ಯ ಬಂದಿದೆ,
ಎಲ್ಲದಕ್ಕೂ ನಮಗೆ ಸ್ವಾತಂತ್ರ
ಇದೆ, ಎಲ್ಲೆಡೆಯಲ್ಲೂ ಇದೇ ಮಾತು, ಇದೇ ಕತೆ!
ನಾವೀಗ ಆಚರಿಸುತ್ತಿದ್ದೇವೆ,
ಎಪ್ಪತ್ತೊಂಬತ್ತನೆಯ ಸ್ವಾತಂತ್ರ್ಯ
ದಿನೋತ್ಸವ, ಸಂಭ್ರಮದಿಂದ,
ಆದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗದೇ,
ತಲೆ ತಗ್ಗಿಸಲೇಬೇಕಾಗಿದೆ ದುಃಖದಿಂದ!…
- ಶಿವಪ್ರಸಾದ್ ಹಾದಿಮನಿ.
ಕೊಪ್ಪಳ.583231.
ಮೊಬೈಲ್ ಸಂಖ್ಯೆ.
7996790189.



















