ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮೈಸೂರು ದಸರಾ :ಆನೆಗಳು ಬಂದವು ದಾರಿಬಿಡಿ

ಮೈಸೂರು ದಸರಾವು ಕರ್ನಾಟಕ ರಾಜ್ಯದ ನಾಡಹಬ್ಬ (ರಾಜ್ಯ ಉತ್ಸವ) ಆಗಿದೆ. ಇದು ೧೦ ದಿನಗಳ ಹಬ್ಬವಾಗಿದ್ದು, ನವರಾತ್ರಿ ಎಂದು ಕರೆಯಲ್ಪಡುವ ಒಂಬತ್ತು ರಾತ್ರಿಗಳಿಂದ ಪ್ರಾರಂಭವಾಗುತ್ತದೆ ಮತ್ತು ಕೊನೆಯ ದಿನವನ್ನು ವಿಜಯದಶಮಿ ಎಂದು ಆಚರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ ತಿಂಗಳಲ್ಲಿ ಬರುತ್ತದೆ.

ಮೈಸೂರು ದಸರಾಗೂ ಆನೆಗಳಿಗೂ ಅವಿನಾಭಾವ ಸಂಬಂಧ. ಮೈಸೂರು ಅರಮನೆಯಲ್ಲಿ ಎಂತೆಂತಹ ಅನೆಗಳಿದ್ದವು? ಯಾವ ಯಾವ ಆನೆಗಳು ಅಂಬಾರಿ ಹೊತ್ತಿವೆ?.

ಮೈಸೂರು ದಸರಾದ ನಾಲ್ಕು ಶತಮಾನಕ್ಕೂ ಮಿಗಿಲಾದ ಸುಧೀರ್ಘ ಇತಿಹಾಸದಲ್ಲಿ ಆನೆಗಳಿಗೂ ಪ್ರಮುಖ ಸ್ಥಾನ. ಅರಮನೆಯಷ್ಟೇ ಅಂಬಾರಿಗೂ ಹಾಗೂ ಅದನ್ನು ಹೊತ್ತು ಗಾಂಭೀರ್ಯದೊಂದಿಗೆ ಹೆಜ್ಜೆ ಹಾಕುವ ಆನೆಗಳ ಬಾಂಧವ್ಯ ದಸರಾದಷ್ಟೇ ಮಹತ್ವ ಪಡೆದಿದೆ.
ಮೈಸೂರು ದಸರಾಗೂ ಆನೆಗಳಿಗೂ ಅವಿನಾಭಾವ ಸಂಬಂಧ. ದಸರಾದ ಮುಖ್ಯ ಆಕರ್ಷಣೆಯೇ ಆನೆಗಳು. ಆನೆಗಳಿಲ್ಲದೆ ಮೈಸೂರು ದಸರಾ ಕಳೆಗಟ್ಟುವುದೇ ಇಲ್ಲ. ಮುಮ್ಮುಡಿ ಕೃಷ್ಣರಾಜ ಒಡೆಯರ್ ಅವರ ಕಾಲದಿಂದಲೂ ಆನೆಗಳಿಗೆ ರಾಜ ಮರ್ಯಾದೆ ಇತ್ತು.
ಇದಕ್ಕೆ ದಾಖಲೆಯಾಗಿ ಮೈಸೂರು ಅರಮನೆ ಹಾಗೂ ಜಗನ್ಮೋಹನ ಅರಮನೆ ಗೋಡೆಗಳ ಮೇಲಿನ ಚಿತ್ರಕಲೆಯನ್ನು ದಾಖಲೆಯಾಗಿ ಪರಿಗಣಿಸಬಹುದು. ಅರಮನೆ ಗೋಡೆಗಳ ಮೇಲಿನ ಎಲ್ಲಾ ಚಿತ್ರಗಳು ಮಹಾರಾಜರು ದಸರಾ ಮೆರವಣಿಗೆಗೆ ಸಾಗುತ್ತಿದ್ದ ಮತ್ತು ಆರು ಆನೆಗಳ ಸಾರೋಟಿನ ಮೇಲೆ ಸಾಗುತ್ತಿದ್ದ ಚಿತ್ರಗಳನ್ನು ಕಾಣಬಹುದಾಗಿದೆ. ಮಹಾರಾಜರ ಮನೆತನದ ಕುಟುಂಬದ ಸದಸ್ಯರೆಲ್ಲರೂ ಆನೆಗಳ ಮೇಲೆ ಕುಳಿತು ಸಾಗುತ್ತಿದ್ದದ್ದೂ ಮೆರವಣಿಗೆಯ ಒಂದು ಭಾಗವಾಗಿತ್ತು ಎಂಬುದನ್ನು ಇಲ್ಲಿನ ಚಿತ್ರಪಟಗಳು ಹೇಳುತ್ತವೆ.

ಮುಮ್ಮಡಿ ಅವರ ಕಾಲದಿಂದಲೂ
ಮುಮ್ಮುಡಿ ಕೃಷ್ಣರಾಜ ಒಡೆಯರ್ ಅವರು ಆನೆಗಳ ಗಜೇಂದ್ರ ರಥದ ಮೇಲೆ ಕುಳಿತು ಸೇನೆಯ ಪರಿವೀಕ್ಷಣೆ ನಡೆಸುತ್ತಿದ್ದ ಚಿತ್ರಕಲೆಯನ್ನೂ ಕಾಣಬಹುದಾಗಿದೆ.
ಹೀಗೆ ಚಾಮರಾಜ ಒಡೆಯರ್, ಕೃಷ್ಣರಾಜ ಒಡೆಯರ್ ಮತ್ತು ಕೊನೆಯ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರ ಅವಧಿಯಲ್ಲಿ ಆನೆಗಳ ಪಾತ್ರ ಮತ್ತು ಮಹತ್ವವನ್ನು ಸಾರುವ ಚಿತ್ರಕಲೆಯನ್ನು ನೋಡಬಹುದಾಗಿದೆ. ನವರಾತ್ರಿಯ ಮೊದಲ ದಿನದಿಂದ ಹಿಡಿದು ಕೊನೆಯ ದಿನದವರೆಗೆ ಆನೆಗಳು ಹೇಗೆ ಅವಿಭಾಜ್ಯ ಅಂಗವಾಗಿದ್ದವು ಎನ್ನುವುದನ್ನು ಅಧ್ಯಯನ ಮಾಡಬಹುದಾಗಿದೆ.

ಗಜಶಾಲೆಯೇ ಆಸರೆ

ಅರಮನೆಯ ಗಜಶಾಲೆಯಲ್ಲಿ ಅನೇಕ ಆನೆಗಳಿದ್ದವು. ಆನೆಗಳ ಲಾಯದಲ್ಲಿ ಅಂಬಾರಿ ಆನೆ ಅಥವಾ ಪಟ್ಟದ ಆನೆಗೆ ರಾಜ ಮರ್ಯಾದೆ ಇತ್ತು. ಕೆಲವು ಆನೆಗಳ ಎತ್ತರ ಮತ್ತು ವರ್ತನೆಯಿಂದಾಗಿ ಮಹಾರಾಜರ ಗಮನ ಸೆಳೆದಿದ್ದವು ಎಂದು ಇತಿಹಾಸದ ಪುಟಗಳು ಹೇಳುತ್ತವೆ. ನಾಲ್ಕನೇ ಕೃಷ್ಣರಾಜ ಒಡೆಯರ್ ಅವರ ಪಟ್ಟದ ಆನೆಯ ಹೆಸರು ಜಯಮಾರ್ತಾಂಡ. ಈ ಆನೆಯ ಮೇಲೆ ಮಹಾರಾಜರು ಸವಾರಿ ಮಾಡುತ್ತಿದ್ದರು. ಇವರು ಗತಿಸಿದ ನಂತರವೂ ಈ ಆನೆ ಅನೇಕ ಮಹಾರಾಜರಿಗೆ ವಾಹನವಾಗಿತ್ತು. ಈ ಆನೆ ಮೃತಪಟ್ಟ ಮೇಲೆ ಇದರ ಗೌರವಾರ್ಥ ಅರಮನೆಯ ಮಹಾದ್ವಾರಕ್ಕೆ ಜಯಮಾರ್ತಾಂಡ ಎಂದು ನಾಮಕರಣ ಮಾಡಲಾಗಿತ್ತು.

ಮೂವರನ್ನು ಹೊತ್ತ ಚಾಮುಂಡಿ ಪ್ರಸಾದ

ಅರಮನೆಯ ಮತ್ತೊಂದು ಪ್ರಮುಖ ಆನೆ ಚಾಮುಂಡಿ ಪ್ರಸಾದ. ಮೈಸೂರು ಮಹಾರಾಜರ ಇತಿಹಾಸದಲ್ಲಿ ಮೂವರು ಮಹಾರಾಜರಾದ ಮುಮ್ಮುಡಿ ಕೃಷ್ಣರಾಜ ಒಡೆಯರ್, ಚಾಮರಾಜ ಒಡೆಯರ್ ಮತ್ತು ನಾಲ್ಕನೇ ಕೃಷ್ಣರಾಜ ಒಡೆಯರ್ ಅವರಿಗೆ ಸೇವೆ ಸಲ್ಲಿಸಿದ ಆನೆ ಇದೊಂದೇ ಎಂದು ಹೇಳಲಾಗುತ್ತದೆ. ಈ ಆನೆ ಅರಮನೆಯಲ್ಲಿದ್ದ ಅತಿ ಹೆಚ್ಚು ಎತ್ತರದ ಎರಡನೇ ಆನೆ ಎಂದು ಹೇಳಲಾಗುತ್ತದೆ. ಈ ಚಾಮುಂಡಿ ಪ್ರಸಾದನನ್ನು ನೋಡಿಕೊಳ್ಳಲು ಒಂದೇ ಕುಟುಂಬದ ಏಳು ಮಂದಿ ಸೇವಕರನ್ನು ನೇಮಕ ಮಾಡಲಾಗಿತ್ತು. ಇವರಲ್ಲಿ ಇಬ್ಬರು ಮಾವುತರು, ಇಬ್ಬರು ಕಾವಡಿಗಳು ಮತ್ತು ಮೂವರು ಕೊತ್ಲಿಗಳಿದ್ದರು. ಈ ಆನೆ 1928ರಲ್ಲಿ ಅಸುನೀಗಿತು.

ಗಜೇಂದ್ರ ಪೂಜೆ ಪಡೆದ ಹಂಸರಾಜ

ಅರಮನೆಯ ಮತ್ತೊಂದು ಪ್ರಸಿದ್ದ ಆನೆ ಹಂಸರಾಜ್. ದಸರಾದ ಆರಂಭದ ದಿನದಂದು ಬೆಳಗ್ಗೆ ಜಯಚಾಮರಾಜೇಂದ್ರ ಒಡೆಯರ್ ಅವರಿಗೆ ಹೂಗಳನ್ನು ಎರಚಿ ಗೌರವ ಸೂಚಿಸುತ್ತಿದ್ದ ಆನೆ. ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರು ಅರಮನೆಯಲ್ಲಿ ಈ ಅನೆಗೆ ಗಜೇಂದ್ರ ಪೂಜೆಯನ್ನು ಸಲ್ಲಿಸಲಾಗುತ್ತಿತ್ತು.

ಐರಾವತ ಹೆಚ್ಚಿಸಿದ ಗೌರವ

ಮಹಾರಾಜರ ಪ್ರೀತಿಗೆ ಪಾತ್ರವಾಗಿದ್ದ ಮತ್ತು ಜನಪ್ರಿಯವಾಗಿದ್ದ ಮತ್ತೊಂದು ಆನೆ ಐರಾವತ. ಅತಿ ಎತ್ತರದ ಆನೆ ಇದಾಗಿತ್ತು. ಗಜ ಗಾಂಭೀರ್ಯಕ್ಕೆ ಪ್ರಸಿದ್ದಿ ಪಡೆದಿತ್ತು. ವಿಜಯದಶಮಿ ದಿನದಂದು ಮಹಾರಾಜರನ್ನು ಹೊತ್ತ ಈ ಐರಾವತ ತನ್ನ ಸೊಂಡಿಲನ್ನು ಆಡಿಸುತ್ತಾ ಬರುತ್ತಿದ್ದರೆ ಗೌರವ ಉಕ್ಕಿ ಬರುತ್ತಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ. ಈ ಆನೆ 30 ಬಾರಿ ಅಂಬಾರಿಯನ್ನು ಹೊತ್ತಿತ್ತು ಎಂದರೆ ಇದರ ಸಾಮರ್ಥ್ಯವನ್ನು ಊಹಿಸಬಹುದಾಗಿದೆ. ತನ್ನ 56 ನೇ ವಯಸ್ಸಿನಲ್ಲಿ 1952 ರಲ್ಲಿ ಅಸುನೀಗಿತು. ಸಕಲ ರಾಜಮರ್ಯಾದೆಗಳೊಂದಿಗೆ ಈ ಆನೆಯ ಅಂತ್ಯ ಸಂಸ್ಕಾರ ನೆರವೇರಿತು.

13 ವರ್ಷದ ಆನೆ ಹುಡುಗ ಸಾಲಾರ್ ಶೇಕ್ ಸಾಹು ನೆನಪಿರಬಹುದು. ಈ ಆನೆ ಹುಡುಗ ಹಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ. ಚಾಮುಂಡಿ ಪ್ರಸಾದ ಸೇರಿದಂತೆ ಅನೇಕ ಆನೆಗಳ ಮಧ್ಯದಲ್ಲಿ ಕಾಡಿನಲ್ಲಿ ಬೆಳೆದ ಬಾಲಕ ಸಾಹು. ಈತನ ಚಿಕ್ಕಪ್ಪ ಬಾಪು ಸಾಹೀಬ್ ಚಾಮುಂಡಿ ಪ್ರಸಾದನ ಮಾವುತರಾಗಿದ್ದರು.

ಮೈಸೂರಿನ ಆನೆಗಳ ಕತೆ ಕುರಿತು 1937 ರಲ್ಲಿ ಮೈಸೂರಿನ ಅರಣ್ಯದಲ್ಲಿ ಎಲಿಫೆಂಟ್ ಬಾಯ್ ಎಂಬ ಇಂಗ್ಲೀಷ್ ಚಿತ್ರ ಚಿತ್ರೀಕರಣವಾಗಿತ್ತು. ಕಾಲಾ ನಾಗ್ ಚಿತ್ರದಲ್ಲಿ ಐರಾವತ ಆನೆಯನ್ನು ಸಾಬು ಮುನ್ನಡೆಸುತ್ತಿದ್ದ ದೃಶ್ಯಗಳನ್ನು ಕಾಣಬಹುದಾಗಿದೆ. ಆನಂತರ ದ್ರೋಣ, ರಾಜೇಂದ್ರ, ಬಲರಾಮ, ಅರ್ಜುನನ ಬಳಿಕ ಈಗ ಅಭಿಮನ್ಯುವಿನೊಂದಿಗೆ ದಸರಾ ಅಂಬಾರಿ ಹೊರುವ ಆನೆಗಳ ಇತಿಹಾಸ ಮುಂದುವರೆಯುತ್ತಲೇ ಇದೆ…

ವರದಿ ಜೆ. ಪ್ರದೀಪ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!