ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬೆಳವಡಿ ಮಲ್ಲಮ್ಮನ 366 ನೆಯ ಜಯಂತೋತ್ಸವ

ಬೆಳಗಾವಿ: ವೀರರಾಣಿ ಬೆಳವಡಿ ಮಲ್ಲಮ್ಮನ 366 ನೆಯ ಜಯಂತೋತ್ಸವವು ಮಲ್ಲಮ್ಮನ ಬೆಳವಡಿಯಲ್ಲಿ ಅದ್ದೂರಿಯಾಗಿ ಜರುಗಿತು.
ಗ್ರಾಮದ ಮನೆಗಳ ಮುಂದೆ ರಂಗವಲ್ಲಿ ಹಾಕಿ ರಾಣಿ ಮಲ್ಲಮ್ಮಳ ಭಾವಚಿತ್ರವಿರುವ ವಾಹನವನ್ನು ಭಕ್ತಿಯಿಂದ ನೀರು ಹಾಕಿ ಬರಮಾಡಿಕೊಂಡು, ಮಲ್ಲಮ್ಮಳ ಅಭಿಮಾನಿಗಳು ತಮ್ಮ ತಮ್ಮ ಮನೆ ಮುಂಭಾಗದಲ್ಲಿ ರಾಣಿ ಮಲ್ಲಮ್ಮಾಜಿಯ ಫೋಟೋವನ್ನು ಇಟ್ಟು ಪೂಜೆ ಮಾಡಿ ಸಿಹಿ ಹಂಚಿದರು. ರಾಣಿ ಮಲ್ಲಮ್ಮ ಮೂರ್ತಿಯನ್ನು ಮಾಜಿ ಶಾಸಕ ವಿ ಐ ಪಾಟೀಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರಯ್ಯ ಕಾರಿಮನಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರು ಪೂಜಾ ಕಾರ್ಯಕ್ರಮ ನೆರವೇರಿಸಿದರು. ಮ ಮ ಕಾಡೇಶನವರ ಮಾಜಿ ಜಿ ಪಂ ಸದಸ್ಯ ವೀರಣ್ಣ ಕರಿಕಟ್ಟಿ ರಾಚಯ್ಯ ರೊಟ್ಟಯ್ಯನವರ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ಗ್ರಾಮದಲ್ಲಿ ಸಂಚರಿಸುವ ರಾಣಿ ಮಲ್ಲಮ್ಮಳ ಭಾವಚಿತ್ರ ಇರುವ ವಾಹನದ ಪೂಜೆಯನ್ನು ಬಸಯ್ಯಸ್ವಾಮಿಗಳು ವಿರಕ್ತಮಠ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಹುಂಬಿ ಬೆಳವಡಿಯ ಪ್ರಾಧಿಕಾರ ಬೇಗನೆ ಸರ್ಕಾರ ಘೋಷಣೆ ಮಾಡಬೇಕು ಒಂದು ವೇಳೆ ಘೋಷಣೆಯಾಗದಿದ್ದರೆ ಉಪವಾಸ ಸತ್ಯಾಗ್ರಹ ಪ್ರಾರಂಭಿಸಲಾಗುವುದೆಂದು ಹೇಳಿದರು. ಹಿರಿಯರಾದ ರಾಚಪ್ಪ ಮಟ್ಟಿ ವಕೀಲರಾದ ಸಿ ಎಸ್ ಚಿಕ್ಕನಗೌಡರ್ ಪ್ರಕಾಶ್ ಕಾರಿಮನಿ ಎಸ್ ಎಂ ಕರಿಕಟ್ಟಿ ಡಾ ಡಿ ವೈ ಗರಗದ ವಿಠಲ ಫಿಶೇ ಎಂ ಪಿ ಉಪ್ಪಿನ ಗ್ರಾಮ ಪಂಚಾಯತಿಯ ಮಹಿಳಾ ಸದಸ್ಯರು ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಮಲ್ಲಮ್ಮ ಅಭಿಮಾನಿ ತಾಯಂದಿರು ಪ್ರತಿಷ್ಠಾನದ ಮಹಿಳಾ ಸವಿತಾ ಪಾಟೀಲ್ ಕಿತ್ತೂರು ಕರ್ನಾಟಕ ವೇದಿಕೆಯ ಬಸವರಾಜ್ ಗುಡ್ಡದಮಠ ವಕೀಲರಾದ ವಿಶ್ವನಾಥ ಪೂಜಾರ ಮಹಾಂತೇಶ್ ಎಸ್ ಕರಿಕಟ್ಟಿ ರಂಜಾನ್ ನದಾಫ್ ಪ್ರದೀಪ್ ಬಿಸಿರೋಳ್ಳಿ ಉಮೇಶ್ ಸಿದ್ದಣ್ಣವರ ಮಹಾಂತೇಶ್ ಕರವಿನಕೊಪ್ಪ ಸಮೀರ್ ದೊಡ್ಡಮನಿ ರಾಯನಗೌಡ ಪಾಟೀಲ್ ಎಲ್ಲಪ್ಪ ಸಿದ್ದಣ್ಣವರ್ ಉಪಸ್ಥಿತರಿದ್ದರು.

ವರದಿ ಉಮೇಶ್ ಗೌಡರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!