ಬೆಳಗಾವಿ/ಅಥಣಿ :ಸಾಂಪ್ರದಾಯಿಕ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆಯನ್ನು ರಾಜ್ಯ ಸರ್ಕಾರವು ಆಗಸ್ಟ್ ತಿಂಗಳಿನಲ್ಲಿ ನಡೆಯುವ ಅಧಿವೇಶನದಲ್ಲಿ ಚರ್ಚಿಸಿ ಜಾರಿಗೆ ತರಬೇಕೆಂದು ಆಗ್ರಹಿಸಿ ಅಥಣಿ ತಾಲ್ಲೂಕಿನ ಕುರಿಗಾಹಿಗಳಿಂದ ಅಥಣಿ ಕುರಿಗಾರರ ಪರವಾಗಿ ಮಾನ್ಯ ಅಥಣಿ ತಶೀಲ್ದಾರಾದ ಸಿದ್ದರಾಯ ಬೋಸಗಿ ಇವರ ಮೂಲಕ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಮನವಿಯನ್ನು ಸ್ವೀಕರಿಸಲು ಮಾನ್ಯ ತಹಶೀಲ್ದಾರ್ ಅಥಣಿ ಇವರು ಆಗಮಿಸಿ ಮನವಿಯನ್ನು ಸ್ವೀಕರಿಸಿದರು.
ಇದೇ ವೇಳೆ ಮಾತನಾಡಿದ ಮುಖಂಡರು ರಾಜ್ಯದಲ್ಲಿ ವಿವಿಧ ರೀತಿಯಲ್ಲಿ ನಿರಂತರವಾಗಿ ಕುರಿಗಾರರ ಮೇಲೆ ಆಗುತ್ತಿರುವ ದೌರ್ಜನ್ಯಗಳು, ನಿಂದನೆ, ಕುರಿ ಕಳ್ಳತನ, ಹಲ್ಯೆ , ಇನ್ನೂ ಮುಂತಾದ ಇತ್ಯಾದಿ ಕಿರುಕುಳ ಕಡಿವಾಣಕ್ಕಾಗಿ ಸರ್ಕಾರವು 2024-2025 ನೇ ಸಾಲಿನ ಬಜೆಟಿನಲ್ಲಿ ಕುರಿಗಾಹಿಗಳಿಗೆ ಸಂಬಂಧಿಸಿದಂತೆ ದೌರ್ಜನ್ಯ ತಡೆ ಕಾಯ್ದೆಯನ್ನು ರೂಪಿಸಲು ಪ್ರಸ್ತಾಪಿಸಿದ್ದು ,ಸದರಿ ಪ್ರಸ್ತಾವನೆಯೂ ಸರ್ಕಾರದ ಮುಂದಿರುತ್ತದೆ, ಆದ್ದರಿಂದ ಕುರಿಗಾಹಿಗಳಿಗೆ ರಕ್ಷಣೆ ನೀಡುವ ಸದುದ್ದೇಶದಿಂದ ಸರ್ಕಾರದ ಮುಂದಿರುವ ಮಸೂದೆಯನ್ನು ಜಾರಿಗೊಳಿಸಲು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಥಣಿ ತಾಲ್ಲೂಕಿನ ಕುರಿಗಾಹಿಗಳ ಹಿತರಕ್ಷಣಾ ವೇದಿಕೆಯ ಮುಖಂಡರಾದ ಭರಮು ನಾಯಿಕ, ಪೂಜ್ಯರಾದ ಸುರೇಶ ಮಹಾರಾಜರು, ರೈತ ಸಂಘದ ಮುಖಂಡರಾದ ಭರಮು ಇಚೆರಿ, ತಾಲೂಕು ಮುಖಂಡರಾದ ಜಕ್ಕಣ್ಣ ಬೆವಣೂರ, ಉದಯ ಮಾಕಾನೆ, ಹಣಮಂತ ಲೆಂಡೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘದ ಸದಸ್ಯರಾದ ಶಿವು ಇಚೆರಿ, ಲಕ್ಕಣ್ಣ ಈಚೆರಿ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
ವರದಿ. ವಿಠ್ಠಲ ಖೋಕಾಟೆ ಅಥಣಿ



















