ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿಜೃಂಭಣೆಯಿಂದ ಜರುಗಿದ ಶ್ರೀ ದೇವಮ್ಮ, ದುರ್ಗಮ್ಮ ದೇವಿಯ ಗಂಗೆಸ್ಥಳ ಮೆರವಣಿಗೆ

ಬಳ್ಳಾರಿ / ಕಂಪ್ಲಿ: ಪಟ್ಟಣದ ಗಂಗಾನಗರದಲ್ಲಿ ಗಂಗಾಮತ ಸಮಾಜದಿಂದ ಶ್ರೀ ದೇವಮ್ಮ, ದುರ್ಗಮ್ಮ ದೇವಿಯ ಗಂಗೆಸ್ಥಳ ಹಾಗೂ ಪೂಜಾ ಕಾರ್ಯಕ್ರಮಗಳು ಶ್ರದ್ಧ ಭಕ್ತಿಯಿಂದ ಜರುಗಿದವು.
ಇಲ್ಲಿನ ಕೋಟೆ ಪ್ರದೇಶದಲ್ಲಿ ಗಂಗಾಮಾತೆಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಆರಂಭಗೊಂಡ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಮಾರೆಮ್ಮ ದೇವಸ್ಥಾನವರೆಗೆ ಸಂಚರಿಸಿ, ಪುನಃ ಗಂಗಾನಗರದಲ್ಲಿರುವ ದೇವಿಗಳ ದೇವಸ್ಥಾನದಲ್ಲಿ ಸಂಪನ್ನಗೊಂಡಿತು. ಸುಮಂಗಲಿಯರ ಕಳಸ, ಡೋಳ್ಳು, ಭಜನೆ, ಮಂಗಳವಾದ್ಯ ಸೇರಿ ವಿವಿಧ ಕಲಾ ಪ್ರಕಾರಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಗಂಗೆಸ್ಥಳ ಮತ್ತು ಪೂಜಾ ಕಾರ್ಯಕ್ರಮದ ಪ್ರಯುಕ್ತ ಇಲ್ಲಿನ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸೇರಿದಂತೆ ನಾನಾ ಧಾರ್ಮಿಕ ಕೈಂಕರ್ಯಗಳು ಶ್ರದ್ಧೆಯಿಂದ ನೆರವೇರಿದವು. ಭಕ್ತರು ಕಾಯಿ, ಕರ್ಪೂರ, ನೈವೇದ್ಯ ಅರ್ಪಿಸಿ ದೇವಿಯರ ಕೃಪೆಗೆ ಪಾತ್ರರಾದರು. ನಂತರ ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಪೂಜಾರಿಗಳಾದ ಹನುಮಂತ, ಬಿ.ರಾಘವೇಂದ್ರ, ಗಂಗಾಮತ ಸಮಾಜದ ಮುಖಂಡರಾದ ಬಿ.ವೀರಭದ್ರಪ್ಪ, ಯು.ವಿರುಪಣ್ಣ, ಬಿ.ಸಿದ್ದಪ್ಪ, ಕರೇಕಲ್ ಮನೋಹರ, ಯು.ಹನುಮಂತಪ್ಪ, ಯು.ರಮೇಶ, ಎಲೆಗಾರ ನಾಗರಾಜ, ಜೋಳಮಾರು ಈರಪ್ಪ, ಬಿ.ರಮೇಶ, ಎನ್.ಚಂದ್ರಪ್ಪ, ಯು.ಪರಶುರಾಮ, ಯು.ಪರಮೇಶ, ಎಸ್.ಆನಂದ, ಎಲ್.ಗುರುರಾಜ, ಬಿ.ರಮೇಶ, ಎಸ್.ಸುರೇಶ, ಯು.ಶರಣ, ಯು.ಸಂತೋಷ, ನಿಂಬೆಹಣ್ಣುಬಸವರಾಜ, ಲಬೇದ್ ಗಂಗಣ್ಣ, ಯು.ವೆಂಕಟೇಶ, ಯು.ಮಲ್ಲಯ್ಯ, ಜೋಳಮಾರೋ ನಾಗರಾಜ, ಅರವಿಂದ, ಸಿರಗುಪ್ಪ ನಾರಾಯಣ, ಅಯ್ಯೋದಿ ರಮೇಶ ನಾಗರಾಜ, ಅಕ್ಕಿ ವಿರುಪಣ್ಣ, ಇಟಗಿ ಈರಣ್ಣ, ಎನ್.ವಿರೇಶ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!