ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೆರೆಗೆ ತ್ಯಾಗ ಬಲಿದಾನ ಸಂಕೇತ, ಕಟ್ಟಿಮನೆ ನಾಗೇನಹಳ್ಳಿ ಗೌಡರ ಬಂಧುಗಳು ಕೊಟ್ಟೂರು

ವಿಜಯನಗರ/ಕೊಟ್ಟೂರು :ಪ್ರತಿ ವರ್ಷ ನಮ್ಮ ಕುಟುಂಬದಲ್ಲಿ ದೈವಾಧೀನವಾದ ಹಿರಿಯರಿಗೆ ಹಬ್ಬ-ಹರಿದಿನಗಳಲ್ಲಿ ಹೊಸ ಬಟ್ಟೆ ಹಾಕಿ ಹಿರಿಯರ ಸ್ಮರಣಾರ್ಥ ಪೂಜೆ ಸಲ್ಲಿಸುವುದು ಪ್ರತಿ ಮನೆಗಳಲ್ಲಿ ನಡೆಯುವುದು ಸರ್ವೇ ಸಾಮಾನ್ಯ, ಹೀಗೆ ಕೆರೆ ನಿರ್ಮಾಣ ಸಮಯದಲ್ಲಿ ಭದ್ರತೆಗೆ ಬಲಿದಾನ ನೀಡಿದ ಮಹಾ ತಾಯಿ ಕಟ್ಟಿಮನೆ ನಾಗೇನಹಳ್ಳಿ ಗೌಡರ ಮನೆ ಹೆಣ್ಣುಮಗಳು ಬೊಮ್ಮಮ್ಮ ಗೆ ಕಟ್ಟಿಮನೆ ನಾಗೇನಹಳ್ಳಿ ಗೌಡ್ರು ಕುಟುಂಬದವರು ಮಂಗಳವಾರ ಪೂಜೆ ಸಲ್ಲಿಸಿದರು. ಪ್ರತಿ ವರ್ಷ ಕೆರೆ ಕೋಡಿ ತುಂಬಿದ ಸಂದರ್ಭದಲ್ಲಿ ಕೆರೆಗೆ ಶಾಂತಿ, ನೆಮ್ಮದಿ, ತುಂಬಿರಲಿ ಎಂದು ಕೊಟ್ಟೂರು ಕಟ್ಟಿಮನೆ ದೈವದವರು ವಾದ್ಯಗಳ ಮೂಲಕ ಮೇರವಣಿಗೆಯಲ್ಲಿ ಬೊಮ್ಮಮ್ಮ ಹುಟ್ಟಿದ ಕಟ್ಟೆಮನೆ ಗೌಡರ ಮನೆಯಿಂದ ಒಂದು ಕೇಲು ಮತ್ತು ಊರ ವತಿಯಿಂದ ಮತ್ತೊಂದು ಕೇಲು, ಎರಡು ಕೇಲುಗಳನ್ನು ಪೂಜೆ ಮಾಡಿ ಬೊಮ್ಮಮ್ಮ ಗುಡಿ ಬಳಿ ಇಟ್ಟು ಧಾರ್ಮಿಕ ವಿಧಿ ವಿಧಾನಗಳಿಂದ ಪೂಜೆ ಸಲ್ಲಿಸಿ, ಗಂಗೆ ಪೂಜೆ ಮಾಡಿದರು.ಕೊಟ್ಟೂರು ಪಟ್ಟಣದಲ್ಲಿ 1899 ರಲ್ಲಿ ನೂತನ ಕೆರೆ ನಿರ್ಮಾಣ ಸಂದರ್ಭದಲ್ಲಿ ಕೆರೆ ಕಟ್ಟಡಕ್ಕೆ ಯಾವುದೇ ವಿಘ್ನಗಳು ಬರಬಾರದು ಹಾಗೂ ಸಾರ್ವಜನಿಕರಿಗೆ ಕೆರೆ ನಿರ್ಮಾಣದಿಂದ ಜೀವನಾಧಾರಕ್ಕೆ ದಾರಿಯಾಗಬೇಕು ಎಂಬ ಹಿತಚಿಂತನೆ ಅರಿತ ಕಟ್ಟಿಮನೆ ನಾಗೇನಹಳ್ಳಿ ಗೌಡ್ರು ಕುಟುಂಬದ ಧೀರ ಮಹಿಳೆ “ಬೊಮ್ಮಮ್ಮ” ಎಂಬುವರು ಕೆರೆಗೆ ಹಾರವಾಗಿದ್ದರು ಎಂಬ ಇತಿಹಾಸ ಇದೆ ಎಂದು ಕಟ್ಟೆಮನೆ ನಾಗೇನಹಳ್ಳಿ ಗೌಡ್ರು ಮನೆತನದ ನಾಲ್ಕನೇ ತಲೆಮಾರಿನ 82 ವರ್ಷದ ನಾಗೇನಹಳ್ಳಿ ಗೌರಮ್ಮ ಹೇಳಿದರು. ಕಟ್ಟೆಮನೆ ನಾಗೇನಹಳ್ಳಿ ಗೌಡ್ರು ಮನೆತನ ಬೊಮ್ಮಮ್ಮ ನನ್ನು ಇತ್ತಿಚೆಗೆ ಕೆರೆ ಬೊಮ್ಮಮ್ಮ ಎಂದು ಕೆಲವರು ಸಂಭೋಧಿಸುವುದುಂಟು. ಕೆರೆಯ ಮೊದಲ ತುಂಬಿನಿಂದ ಸ್ವಲ್ಪ ಅಂತರದಲ್ಲಿ ಕೆರೆ ಏರಿ ಮಧ್ಯ ಭಾಗದಲ್ಲಿ ಶಿವಲಿಂಗ, ಕೇಲುಗಳಿಗೆ ಪೂಜೆ ಸಲ್ಲಿಸಲು ಕಟ್ಟಿಮನೆ ನಾಗೇನಹಳ್ಳಿ ಗೌಡರ ಕುಟುಂಬ ಹರಸಾಹಸ ಪಡುವಂತಾಗಿದೆ ಎಂದು ಕಟ್ಟೆಮನೆ ನಾಗೇನಹಳ್ಳಿ ಪ್ರಕಾಶ ಗೌಡ್ರು ಬೇಸರ ವ್ಯಕ್ತಪಡಿಸಿದರು.
ನಮ್ಮ ಕುಟುಂಬದ ಸದಸ್ಯರು ಊರಿಗೆ ಒಳಿತಾಗಲಿ ಎಂದು ಪ್ರಾಣವನ್ನೇ ಕೊಟ್ಟರು ಆದರೆ ಸರ್ಕಾರದ ಸಣ್ಣ ನೀರಾವರಿ ಇಲಾಖೆ ಹಿರಿಯರು ಕಟ್ಟಿಸಿರುವ ಕೆರೆಯನ್ನು ಜೀರ್ಣೋದ್ಧಾರ ಮಾಡುವಂತ ಯಾವುದೇ ಕಾರ್ಯಕ್ರಮ ಕೈಗೊಳ್ಳದೆ ಕೆರೆ ಏರಿ ಜಾಲಿ ಮುಳ್ಳುಗಳಿಂದ ತುಂಬಿ ಪೂಜೆ ಸಲ್ಲಿಸುವುದು ಕಷ್ಟವಾಗಿದೆ. ಬೊಮ್ಮಮ್ಮನ ಗುಡಿ ಸಾರ್ವಜನಿಕರಿಗೆ ಕಾಣುವಂತೆ ಸ್ವಚ್ಛತೆ ಹಾಗೂ ಗುಡಿ ಜೀರ್ಣೋದ್ಧಾರ ಮಾಡುವಂತೆ ಕಟ್ಟಿಮನೆ ನಾಗೇನಹಳ್ಳಿ ಗೌಡರ ಕುಟುಂಬ ಶಾಸಕರಾದ ಕೆ. ನೇಮರಾಜ ನಾಯ್ಕ್ ರವರಿಗೆ ಮನವಿ ಸಲ್ಲಿಸಿದರು.

ವರದಿಗಾರರು- ಎನ್. ಚಂದ್ರಗೌಡ

ಕೊಟ್ಟೂರು : ಕೆರೆಗೆ ತ್ಯಾಗ ಬಲಿದಾನ ಸಂಕೇತ, ಕಟ್ಟಿಮನೆ ನಾಗೇನಹಳ್ಳಿ ಗೌಡರ ಬೊಮ್ಮಮ್ಮ ಗೆ ಪೂಜೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!