ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬದುಕೆಂಬ ಪಯಣ

ಬದುಕಿಗೆ ವಿಶ್ಲೇಷಣೆಗಳು ಸುಮಾರಿವೆ ಎಲ್ಲಾ ಅವರವರ ದೃಷ್ಟಿಕೋನಕ್ಕೆ ಬಿಟ್ಟಿದ್ದು. ಬೇಂದ್ರೆ ಅಜ್ಜ ಹೇಳುತ್ತಾ ಬರುತ್ತಾರೆ, ಹೋದವರು ತಿರುಗಿ ಬಂದಾರೆ?

ಅವರು ಬರಲಿಕ್ಕೂ ಇಲ್ಲ ಮರಳಿ ಎಂದು, ಅವರು ಹೇಳಿದಂತೆ ಬದುಕಿನ ಕೊನೆಯ ಯಾನ ಮುಗಿಸಿಕೊಂಡು ಹೋದವರು ಪುಣ್ಯವಂತರು, ಕಷ್ಟ ಸುಖದ ಲೆಕ್ಕ ಹಾಕಿ ಕುಳಿತರೆ ಸಮಯ ತಿರುಗಿ ಬರುವುದೇ? ಕೊನೆಗೆ ಜಯಿಸುವುದು ಮರಣವೆ, ಎಲ್ಲೋ ಒಂದು ಕಡೆ ಸಾಕ್ರೇಟಿಸ್ ಗೆ ಅವರ ಕಡೆಯ ದಿನಗಳಲ್ಲಿ ನಿಮ್ಮ ಸಮಾಧಿ ಹೇಗೆ ಮಾಡಬೇಕೆಂದು ಅವರ ಶಿಷ್ಯರಲ್ಲೊಬ್ಬ ಕೇಳಿದ್ದರಂತೆ, ಅದಕ್ಕವರು ನೀವು ದೇಹಕ್ಕೆ ಮಾತ್ರ ಸಮಾಧಿ ಮಾಡುತ್ತೀರಿ ನಿಮಗೆ ನಾನೆಲ್ಲಿ ಸಿಗುತ್ತೇನೆ? ಎಂದಿದ್ದರಂತೆ.
ಇದು ಕೇವಲ ಒಂದು ವಾಕ್ಯವಷ್ಟೇ ಅಲ್ಲ ಗಂಭೀರತೆಯಿಂದ ಚಿಂತನೆ ಮಾಡಬೇಕಾದ ವಿಷಯ, ಇದರ ಆಳ ಅರಿತು ನೋಡಿದರೆ ಎಷ್ಟೊಂದು ಆಧ್ಯಾತ್ಮ ಮತ್ತು ಗಾಂಭೀರ್ಯ ತುಂಬಿದೆ ನೋಡಿ.

ಯೌವ್ವನ ಮತ್ತು ಆತ್ಮ ಸದಾ ಜೀವಂತವಾಗಿ ಚಿಲುಮುವ ಝರಿಯಂತೆ, ಬೇಂದ್ರೆ ಅಜ್ಜ ಹೇಳಿದಂತೆ ಈ ತುಂಬಿದ ಬಾಳು ತುಂಬಿರುವ ತನಕ ತುಂಬಿ ತುಂಬಿ ಕುಡಿಯಬೇಕು ಯೌವ್ವನ ಇರುವಾಗಲೆ ಏನಾದರೂ ಸಾಧಿಸಬೇಕು ಆ ಸಾಧನೆಯ ಪಥದಲ್ಲಿ ಚಲಿಸಬೇಕು, ಬದುಕಿದು ಹಿಮ್ಮುಖವಾಗಿ ಹರಿಯುವುದಿಲ್ಲ ಕ್ಷಣ ಕಳೆದಂತೆ ಮರಣಕ್ಕೆ ಸಮೀಪ ಎಂಬಂತೆ ಯೌವ್ವನ ಕಳೆದು ಮುಪ್ಪಿಗೆ ಜಾರುವಾಗ ದೇಹ ಅಶಕ್ತನಾಗಿ ಬಿಡುತ್ತೆ ಮಾಡುವ ಕೆಲಸಕ್ಕೆ ಜೊತೆಯಾಗುವುದಿಲ್ಲ, ಆದರೆ ಆತ್ಮ ಏನಾದರೂ ಹಂಬಲಿಸುವ ಜೀವಂತ ಜ್ವಾಲೆ ಅದು ಅದಕ್ಕೆಲ್ಲಿಯ ಸಾವು ಎಂದು ಸಾಕ್ರೇಟಿಸ್ ಹೇಳುತ್ತಾರೆ, ಇಬ್ಬರೂ ಕೂಡಾ ಮಹಾನ್ ದಾರ್ಶನಿಕರು ಮತ್ತು ಅದಮ್ಯ ಚೇತನಗಳು, ಇವರಿಬ್ಬರ ಚಿಂತನೆಗಳು ಅಳೆಯುತ್ತಾ ಕೂತರೆ ಕೊನೆಗೆ ದಕ್ಕವುದೇನೆಂದು ಬಲ್ಲಿರಾ? ಬದುಕು ಇಬ್ಬರಿಗೂ ಪರಿ ಪರಿಯಾಗಿ ಕಾಡುತ್ತಲೇ ಇತ್ತು ಇವಾಗಲೂ ಕೆಲವೊಬ್ಬರು ಹೇಳುವುದುಂಟು ಜೀವನದಲ್ಲಿ ಬೆಂದರೆ ಬೇಂದ್ರೆಯಾಗುತ್ತೀರೆಂದು ಅವರು ತಮಗಿರುವ ಕಷ್ಟದಲ್ಲಿ ಅದೆಷ್ಟು ಬೆಂದರೋ ಕಾಣೆ ಅಕ್ಕಿ ಅನ್ನವಾಗಬೇಕಾದರೆ ಎಷ್ಟೊಂದು ಶಾಖಕ್ಕೆ ಕೊತ ಕೊತ ನೆ ಕುದಿಯಬೇಕು ಅದಕ್ಕಿಂತ ಜಾಸ್ತಿನೆ ಬೆಂದವರು ಬೇಂದ್ರೆ, ಒಮ್ಮೆ ಹೇಳಿದ್ದರಂತೆ ನೀವು ಎತ್ತರಕ್ಕೆ ಹೋಗಬಹುದು ಆದರೆ ನನ್ನಷ್ಟು ಆಳಕ್ಕೆ ಇಳಿಯ ಬಲ್ಲಿರಾ? ಎಂದು ವಿಪರೀತ ಬಡತನದಲ್ಲಿ ಬೆಂದು ಬಂದ ಬೇಂದ್ರಜ್ಜ ನಮಗೆಲ್ಲಾ ವರಕವಿಯೇ ಆದರು ಜೀವನವನ್ನ ನಿಜಕ್ಕೂ ಜಯಿಸಿದವರು ಜನಮಾನಸದಲ್ಲಿ ಅಚ್ಚಳಿಯದೆ ಕೂತವರು.

ಇತ್ತ ಸಾಕ್ರೇಟಿಸ್ ತನ್ನ ಸಾವು ಕಣ್ಣೆದುರಿಗೆ ಕಾಣುತ್ತಿದ್ದರೂ ಹೆದರಲಿಲ್ಲ ಮಹಾನ್ ಆಧ್ಯಾತ್ಮದ ಒಲವು ಹೊಂದಿರುವ ಮನುಷ್ಯ ನೋಡಿದರೆ ಅರ್ಥ ಆಗಲೇ ಇಲ್ಲ ಆ ಜನಕ್ಕೆ, ಆತನನ್ನು ಓದಿದವರು ಆತನ ಚಿಂತನೆಗಳನ್ನು ಆಳವಾಗಿ ಅರಿತವರು ಮಹಾನ್ ವ್ಯಕ್ತಿಗಳಲ್ಲಿ ಒಬ್ಬರಾದ ಪ್ಲೇಟೋ ಕೂಡಾ ಒಬ್ಬರು, ಈತನನ್ನು ಮಹಾನ್ ತತ್ವಜ್ಞಾನಿಯೆಂದು ಇಡೀ ಜಗತ್ತೆ ಒಪ್ಪಿಕೊಂಡಿತು. ಇವನ ಜ್ಞಾನದ ಬುನಾದಿಯೇ ಸಾಕ್ರೇಟಿಸ್ ಎಂದರೆ ತಪ್ಪಾಗಲಾರದು.

ಯಾರದ್ದೋ ನೆನಪಾದಾಗ ಈಗ ಅವರು ನಮ್ಮೊಂದಿಗೆ ಇಲ್ಲ ಎಂದರೆ? ಕಳೆದು ಹೋದರೆ, ಮರೆಯಾದರೆ? ಮುಸುಕಾಗಿ ಬಾರದ ಲೋಕಕ್ಕೆ ಸೇರಿದರೆ? ಹೋದವರು ತಿರುಗಿ ಬರಬಹುದೇ ಇದು ಸಾಧ್ಯವೇ ಅವರ ನೆನಪು ಮಾತ್ರ ಪುನಃ ಪುನಃ ಬಂದು ಕಾಡುತ್ತವಲ್ಲ ಯಾಕಿರಬಹುದು? ಎಂದೆಲ್ಲಾ ಪ್ರಶ್ನೆಗಳು ಜೀವನದುದ್ದಕ್ಕೂ ಸದಾ ಕಾಡುತ್ತಲೇ ಇರುತ್ತವೆ.

ಬದುಕು ಎಲ್ಲರಿಗೂ ಒಂದೇ ರೀತಿಯಾಗಿಲ್ಲ ಒಂದಲ್ಲ ಒಂದು ತರಹದ ನೋವು ಸದಾ ಕಾಡುತ್ತಲೇ ಇರುತ್ತೆ, ಅತ್ತು ನೆನೆಸಿಕೊಳ್ಳುವರೆಷ್ಟೋ ನಕ್ಕು ಮರೆಯುವರೆಷ್ಟೋ ಕಷ್ಟಾನೋ ಸುಖಾನೋ ಏಳು ಬೀಳು ದಾಟಿ ಮುಂದೆ ಸಾಗಲೇ ಬೇಕಲ್ಲವೇ, ದುಃಖ ಬಂತಲ್ಲ ಎಂದು ಕೂತರೆ ಬೇಂದ್ರೆ ಎಂಬ ವರ ಕವಿ ನಮಗೆ ಅಪರಿಚಿತ, ಸಾವು ಎದುರಿಗಿದೆ ಎಂದು ಆತ ಜೀವ ಭೀಕ್ಷೆ ಕೇಳಿದ್ದರೆ ಪಾಶ್ಚಾತ್ಯದ ಪಂಡಿತರಲ್ಲಿ ಸಾಕ್ರೇಟಿಸ್ ಹೆಸರು ಇಷ್ಟೊಂದು ಆಳವಾಗಿ ಬೇರೂರುತ್ತಿರಲಿಲ್ಲ. ಬದುಕಿನ ತಾತ್ಪರ್ಯ ಅರಿಯುವಲ್ಲಿ ನಾವುಗಳು ಹಿಂದೇಟು ಹಾಕುತ್ತಿದ್ದೇವೆ. ಬದುಕಿಗೆ ಪರ್ಯಾಯ ಮಾರ್ಗಗಳಿಲ್ಲ ಬದುಕಿದು ಬದುಕಬೇಕಷ್ಟೇ, ಯಾವುದೋ ಒಂದು ಚಿಕ್ಕ ಚಿಕ್ಕ ವಿಷಯಗಳಿಗೆಲ್ಲ ಮನಸ್ತಾಪ ಶುರುವಾಗಿ ಕೆಲವೊಂದು ಮರಣಗಳಲ್ಲಿ ಕೊನೆಗೊಳ್ಳುವುದನ್ನು ಇತ್ತೀಚೆಗೆ ತುಂಬಾನೇ ಕಾಣಸಿಗುತ್ತಿವೆ, ಮಾತುಗಳು ಕೆಲವೊಬ್ಬರಿಗೆ ಭಾರ ಎನಿಸಿದರೆ ಇನ್ನೂ ಕೆಲವೊಬ್ಬರಿಗೆ ಮಾತುಗಳು ಏನೂ ಅಲ್ಲ, ಇನ್ನೂ ಕೆಲವೊಬ್ಬರಿಗೆ ಮರಣ ಸಂಕಟ ಜೀವನದಲ್ಲಿ ಇಂತಹ ಸಂಧರ್ಭಗಳು ಸಹಜ, ಇವಕ್ಕೆಲ್ಲ ತಲೆಕೆಡಿಸಿಕೊಡು ಕೂತರೆ ನಮ್ಮಿಂದಾಗುವ ಕಾರ್ಯಗಳು ನಮಗಾಗಿಯೇ ಕಾದು ಕೂತು ಅಲ್ಲೆ ಕೊನೆಗೊಳ್ಳುತ್ತವೆ, ನಮ್ಮ ಕನಸುಗಳು ನಾವೇ ಕೊಂದಂತೆ ಆ ಪಾಪ ಪ್ರಜ್ಞೆ ಜೀವನದುದ್ಧಕ್ಕೂ ಕಾಡುತ್ತಲೇ ಇರುತ್ತದೆ, ನಾನು ಆಗ ಆ ರೀತಿ ಮಾಡಿದರೆ ಸರಿ ಇರುತ್ತಿತ್ತು ಎಂದುಕೊಂಡರೆ ಸಮಯ ನಮಗಾಗಿ ಮರಳಿ ಬರುವುದಿಲ್ಲ ಆ ಕ್ಷಣಕ್ಕೆ ಸಾಧಿಸಿಬಿಡಬೇಕು ಮರುಕ್ಷಣ ಯಾವುದಕ್ಕೆ ಮೀಸಲೆಂದು ಬಲ್ಲಿರಾ? ಕ್ಷಣ ಉರುಳಿದಂದೆ ಸಾವಿಗೆ ಸಮೀಪ ನಾವುಗಳು, ಈ ಕಠೋರ ಸತ್ಯ ಅರಿತರೂ ಇನ್ನೊಬ್ಬರಿಗೆ ತೊಂದರೆ ಕೊಡದೆ ಬದುಕುತ್ತಿದ್ದೀವಲ್ಲಾ ಇದು ಎಲ್ಲದ್ದಕ್ಕೂ ದೊಡ್ಡದು. ಒಬ್ಬ ಕವಿ ಬರೀತಾ ಹೋಗ್ತಾರೆ,

  ಜಗವೆಲ್ಲ ನಗುತಿರಲಿ

  ಜಗದಳುವು ನನಗಿರಲಿ!

  ನಾನಳಲು, ಜಗವೆನ್ನನ್ನೆತ್ತಿಕೊಳ್ಳದೇ?

  ನಾನಕ್ಕು ಜಗವಳಲು ನೋಡಬಹುದೇ?

ಜಗವೆಲ್ಲಾ ಖುಷಿಯಿಂದಿರಲಿ, ಜಗದ ದುಃಖ ಬಯಸುವ ಕವಿ ಮನಸ್ಸು ಎಷ್ಟೆಂದು ಅಳತೆ ಮಾಡಬಹುದೇ? ಮಾತೃ ಹೃದಯದ ಕವಿ, ಈ ಸಾಲುಗಳು ಮಾನವ ಕುಲಕ್ಕೆ ಪರಿಚಯಿಸಿಕೊಟ್ಟವರು ಈಶ್ವರ್ ಸಣ್ಣಕಲ್ಲ. ನಾವು ನಮ್ಮ ಬದುಕನ್ನೇ ಭಾರವಾಗಿಸಿಕೊಂಡವರು, ಬೇರೆಯವರ ಭಾರ ಹೊತ್ತುಕೊಳ್ಳಲು ಸಿದ್ಧರಿದ್ದೀವಾ? ನಾವುಗಳು ನಮ್ಮ ಬದುಕಿನ ಭಾರ ಹೊತ್ತು ಕಷ್ಟಾನೋ ಸುಖಾನೋ ಮುಂದೆ ಸಾಗುವುದರಲ್ಲೆ ಬದುಕಿನ ಸಾರ್ಥಕತೆ ಅಡಗಿದೆ, ಬೇಂದ್ರಜ್ಜ ಹೇಳಿದಂತೆ ಈ ತುಂಬಿ ಬಾಳು ತುಂಬಿರುವ ತನಕ ತುಂಬಿ ತುಂಬಿ ಕುಡಿಯಬೇಕು.

  • ಆನಂದಿ ರಾಜಶೇಖರ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!