ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗ್ರಂಥಪಾಲಕರ ದಿನಾಚರಣೆ

ಧಾರವಾಡ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ದಿನಾಂಕ 18/08/2025/ ರಂದು ಗ್ರಂಥಪಾಲಕರ ದಿನಾಚರಣೆಯನ್ನು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ ಧಾರವಾಡ ಶ್ರೀ ಗಂಗಾಧರ ಕಂದಕೂರ ರವರು ಉದ್ಘಾಟಿಸಿ ಗ್ರಂಥಪಾಲಕರ ಕುರಿತು ಮಾತನಾಡಿದರು. ಪದ್ಮಶ್ರೀ ಡಾ ಎಸ್ ಆರ್ ರಂಗನಾಥನ್ ಅವರು ಗ್ರಂಥಾಲಯಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಅದರಲ್ಲಿ ಪಂಚಸೂತ್ರ ,ವರ್ಗೀಕರಣ ಸೂಚಿಕರಣ ಇವರ ಕೊಡುಗೆ ಅಪಾರವಾದದ್ದು ಗ್ರಂಥಪಾಲಕರಾದ ನೀವುಗಳು ಶಿಕ್ಷಕರಿದ್ದಂತೆ ಗ್ರಂಥಾಲಯಕ್ಕೆ ಬರುವ ಮಕ್ಕಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ಪುಸ್ತಕಗಳನ್ನು ನೀಡಿ ಅವರಿಗೆ ಉತ್ತೇಜಿಸಬೇಕು ಗ್ರಂಥಾಲಯವನ್ನು ಅಚ್ಚುಕಟ್ಟಾಗಿ ಪುಸ್ತಕಗಳನ್ನು ನೀಟಾಗಿ ವರ್ಗೀಕರಣ ಮಾಡಿ ಇಟ್ಟುಕೊಳ್ಳಬೇಕು ಗ್ರಂಥಾಲಯದಲ್ಲಿ ಹೊಸ ಹಾಗೂ ವಿನೂತನ ಚಟುವಟಿಕೆಗಳನ್ನು ಮಾಡಿ ಜನ ಮೆಚ್ಚುವಂತೆ ಕೆಲಸವನ್ನು ತಾವುಗಳು ಮಾಡಬೇಕು ನಿಮ್ಮ ವ್ಯಾಪ್ತಿಯಲ್ಲಿರುವ ಶಾಲೆಗಳಿಗೆ ಹೋಗಿ ಮಕ್ಕಳಲ್ಲಿ ಗ್ರಂಥಾಲಯದ ಬಗ್ಗೆ ಜಾಗೃತಿ ಮೂಡಿಸಿ ಗ್ರಂಥಾಲಯಕ್ಕೆ ಬರುವಂತೆ ಪ್ರೇರೇಪಿಸಬೇಕು ಮಕ್ಕಳ ನೋಂದಣಿ ಹೆಚ್ಚಿಸುವಂತೆ ತಿಳಿಸಿ ಇದೇ ಸಂದರ್ಭದಲ್ಲಿ ಧಾರವಾಡ ತಾಲೂಕಿನ ಅತ್ಯುತ್ತಮ ಗ್ರಂಥ ಪಾಲಕರನ್ನಾಗಿ ಹೆಬ್ಬಳ್ಳಿ ಗ್ರಾಮ ಪಂಚಾಯತ್ ಗ್ರಂಥಾಲಯದ ಗ್ರಂಥ ಪಾಲಕರಾದ ಶ್ರೀ ಫಕೀರಪ್ಪ ಬಸಪ್ಪ ಸುಂಕದ ರವರನ್ನು ಆಯ್ಕೆ ಮಾಡಿ ಸನ್ಮಾನಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದಂತ ಶ್ರೀ ಚಂದ್ರು ಪೂಜಾರ್ ಸಹಾಯಕ ನಿರ್ದೇಶಕರು ಗ್ರಾಮಿಣ ಉದ್ಯೋಗ ಟಿಪಿ ಧಾರವಾಡ , ಶ್ರೀ ಎನ ಕೆ ಪಾಟೀಲ್ ಯೋಜನಾಧಿಕಾರಿಗಳು ಟಿಪಿ ಧಾರವಾಡ, ಶ್ರೀ ರಾಯನಗೌಡ ಲೆಕ್ಕಾಧಿಕ್ಷಕರು ಟಿಪಿ ಧಾರವಾಡ, ಶ್ರೀ ಯಲ್ಲಪ್ಪ ಸಾಳುಂಕೆ ಶಿಕ್ಷಣ ಪೌಂಡೇಶನ್ ಜಿಲ್ಲಾ ಸಂಯೋಜಕರು ಧಾರವಾಡ. ಶ್ರೀ ವಿಜಯಕುಮಾರ್ ಮಣ್ಣೂರ್ ವ್ಯವಸ್ಥಾಪಕರು ಟಿಪಿ ಧಾರವಾಡ,ಶ್ರೀಮತಿ ನೇತ್ರಾ ದೇಸಾಯಿ ವಿಷಯ ನಿರ್ವಾಹಕರು ಟಿಪಿ ಧಾರವಾಡ ಶ್ರೀ ಬಸವರಾಜ್ ಬೆಳಾರದ ಎಂ ಆರ್ ಡಬ್ಲ್ಯೂ ಟಿ ಪಿ ಧಾರವಾಡ ತಾಲೂಕು ಪಂಚಾಯಿತಿಯ ಎಲ್ಲ ಸಿಬ್ಬಂದಿ ವರ್ಗ ಮತ್ತು ತಾಲೂಕಿನ ಎಲ್ಲಾ ಗ್ರಂಥಪಾಲಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀ ಯೋಗೇಶ್ ಕನಾಜ್ ಗ್ರಂಥಪಾಲಕರು ಹಾರೋಬೆಳವಡಿ ನಿರೂಪಿಸಿದರು ,ನಿರ್ಮಲ ಬೋಗುರ್ ಜಿಪಿ ರಾಮಾಪುರ್ ರವರು ಪ್ರಾರ್ಥನೆ ಮಾಡಿದರು, ಶ್ರೀಮತಿ ಮಂಜುಳಾ ಹುಶಪ್ನವರ್ ಜಿಪಿ ಮಮ್ಮಿಗಟ್ಟಿ ಸ್ವಾಗತಿಸಿದರು ಶ್ರೀಮತಿ ಸುನಂದ ಅಕ್ಕಿ ಜಿಪಿ ಮಂಡಿಹಾಳ ಅವರು ಪದ್ಮಶ್ರೀ ಡಾ. ಎಸ್ ಆರ್ ರಂಗನಾಥ್ ಅವರ ಕುರಿತು ಅನಿಸಿಕೆ ಹಂಚಿಕೊಂಡರು ಶ್ರೀ ಮಲ್ಲಿಕಾರ್ಜುನ್ ಮಾದರ್ ಜಿಪಿ ಕರಡಿಗುಡ್ಡ ರವರು ಗ್ರಂಥಾಲಯ ಕುರಿತು ಅನಿಸಿಕೆ ಹೇಳಿದರು ಶ್ರೀ ಫಕೀರಪ್ಪ ಬ ಸುಂಕದ ಜಿಪಿ ಹೆಬ್ಬಳ್ಳಿ ವಂದನಾರ್ಪಣೆ ಮಾಡಿದರು.

ವರದಿ. ನಾಗರಾಜ ಪ್ರಚಂಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!