ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಇಲಾಖೆಗಳ ಸಮನ್ವಯ ಕೊರತೆ, ಅಭಿವೃದ್ಧಿಯಿಲ್ಲದೆ ಬಾಡಿದ ಸ್ಥಿತಿಯಲ್ಲಿ ಜಲಪಾತ ಪ್ರದೇಶ : ನಿರಾಶರಾದ ಪ್ರವಾಸಿಗರು

ಪುಂಡರ ಅಡ್ಡೆಯಾಗಿ ಮಾರ್ಪಟ್ಟ ಪ್ರಕೃತಿಯ ಮಡಿಲ ಕಣ್ ಮನ ಸೆಳೆಯುವ ಧಬ್ ದಬಿ ಜಲಪಾತ

ಗುರುಮಠಕಲ್/ನಜರಾಪೂರ್: ಗುರುಮಠಕಲ್ ಪಟ್ಟಣಕ್ಕೆ ಪ್ರಕೃತಿ ನೀಡಿದ ವರ ಕೇವಲ ಕೆಲವೇ ಕಿಲೋ ಮೀಟರ್ ದೂರದ ನಜರಪೂರ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಧಬ್ ದಬಿ ಜಲಪಾತ ನೋಡಲು ದೂರ ದೂರದಿಂದ ಬರುವ ಪ್ರವಾಸಿಗರು.

ಕಳೆದ ಕೆಲ ವರ್ಷಗಳಿಂದ ಪ್ರವಾಸಿಗರು ಈಜು, ಅಜಾಗರೂಕತೆಯಿಂದ ಸೆಲ್ಫಿ ತೆಗೆಯಲು ಕಾಲು ಜಾರಿ ಬಿದ್ದು ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಈಗ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ.

ಅರಣ್ಯಇಲಾಖೆ, ಪ್ರವಾಸೋದ್ಯಮ, ಕಂದಾಯ ಸಮನ್ವಯ ಕೊರತೆಯಿಂದಾಗಿ ಸುಮಾರು ಒಂದು ಕೋಟಿಗೂ ಅಧಿಕ ಬಳಕೆಯಾಗದ ಅನುದಾನ ಹಣ, ನಮ್ಮ ಭಾಗದ ಒಂದು ಒಳ್ಳೆಯ ಪ್ರೇಕ್ಷಣೀಯ ಸ್ಥಳ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಟು ಆಗುತ್ತಿದೆ, ಎಲ್ಲೆಂದರಲ್ಲಿ ಬಿದ್ದಿರುವ ಬಿಯರ್ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ತ್ಯಾಜ್ಯ ನೋಡಲು ಬರುವ ಪ್ರವಾಸಿಗರಿಗೆ ರಮಣೀಯ ಜಲಪಾತ ಜೊತೆ ಒಡೆದ ಬಾಟಲಿಗಳ ದರ್ಶನ ವಿಚಿತ್ರ ಅನುಭವ ಉಂಟಾಗುತ್ತಿದೆ.

ಸ್ನೇಹಿತರೊಡನೆ, ಕುಟುಂಬ ಸದಸ್ಯರೊಡನೆ ಬರುವ ಸಾರ್ವಜನಿಕರು ಜಲಪಾತಕ್ಕೆ ಬರುವ ಪ್ರವಾಸಿಗರು ಸರಿಯಾದ ವ್ಯವಸ್ಥೆ ಇಲ್ಲದಿರುವ ಕಾರಣ ಹೈರಾಣಾಗಿರುವುದಂತೂ ನಿಜ.

ಧಬ್ ದಬಿ ಜಲಪಾತದ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಜಲಪಾತದ ಬಳಿ ಯಾವುದೇ ಸರಿಯಾದ ಸೂಚನಾ ಫಲಕಗಳಿಲ್ಲ ಒಂದು ಎರಡು ಅಳವಡಿಕೆ ಮಾಡಿದ್ದರೂ ಸಹ ಅಪಾಯದ ಅರಿವಿಲ್ಲದೆ, ಪ್ರವಾಸಿಗರು ಪ್ರಾಣಕ್ಕೆ ಕುತ್ತು ತಂದು ಕೊಳ್ಳುತ್ತಿದ್ದಾರೆ, ಪ್ರವಾಸಕ್ಕೆ ಬರುವ ಅಧಿಕಾರಿಗಳು ಅಭಿವೃದ್ಧಿಗೆ ಮುಂದಾಗಲಿ.

  • ಸಂಜೀವ ಕುಮಾರ್ ಅಳೆಗಾರ್, ಸಾಮಾಜಿಕ ಕಾರ್ಯಕರ್ತ

ಮಳೆಗಾಲದಲ್ಲಿ ಜಲಪಾತವು ಹೆಚ್ಚು ರಭಸದಿಂದ ಹರಿಯುವ ಕಾರಣ ಪ್ರವಾಸಿಗರನ್ನು ಆಕರ್ಷಿಸುವ ಜಲಪಾತಕ್ಕೆ ಸುಮಾರು ಅಂದಾಜು 1.40 ಕೋಟಿ ಅನುದಾನ ಬಂದಿದ್ದರೂ ಪ್ರವಾಸೋದ್ಯಮ, ಕಂದಾಯ, ಅರಣ್ಯ ಇಲಾಖೆಗಳ ಸಮನ್ವಯ ಕೊರತೆಯಿಂದ ಯಾವುದೇ ಅಭಿವೃದ್ಧಿ ಕಾಣದೇ ಜಲಪಾತ ಹೆಚ್ಚು ಜನರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ, ಇಲ್ಲಿ ಬರುವ ಪ್ರವಾಸಿಗರಿಗೆ ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯ ಮತ್ತು ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು.

  • ಶರಣ ಬಸಪ್ಪ ಎಲ್ಹೇರಿ. ಕರವೇ ತಾಲೂಕ ಅಧ್ಯಕ್ಷರು.

ನಜರಾಪೂರ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಣ್ಣ ಪುಟ್ಟ ವ್ಯವಸ್ಥೆ ಮಾಡಿದ್ದರು, ಪ್ರವಾಸಿಗರಿಗೆ ಕೂಡಲು ಆಸನ, ಶೌಚಾಲಯ, ಬಟ್ಟೆ ಬದಲಾಯಿಸಲು ಕೋಣೆ, ಮಳೆಗಾಲದಲ್ಲಿ ಹೆಚ್ಚಿನ ಪ್ರವಾಸಿಗರು ಬರುವ ಕಾರಣ ಒಬ್ಬ ಸಿಬ್ಬಂದಿ ಕಲ್ಪಿಸಲು ಸ್ಥಳೀಯರ ಮನವಿ.

ವರದಿ: ಜಗದೀಶ್ ಕುಮಾರ್ ಭೂಮಾ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!