ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಸಳಿ ಬಿಕೆ ಗ್ರಾಮ ಪಂಚಾಯತಿಯಲ್ಲಿ ಕಂಪ್ಯೂಟರ್ ಆಪರೇಟರ್ ಗಂಗೂ ಅಶೋಕ್ ಮರಡಿ ಅವರು ರೈತರ ಕೃಷಿ ಇಲಾಖೆಯಿಂದ ಬದು ನಿರ್ಮಾಣ ಅಂತ ಕ್ರಿಯಾಯೋಜನೆ ಮಾಡಿಕೊಡಿ ಅಂತ ಕೇಳಿದರೆ ಮಾಡಿಕೊಟ್ಟಿರುವುದಿಲ್ಲ. ಇಬ್ಬರೂ ರೈತರ ಹೋದ ಡಿಸೆಂಬರ್ ತಿಂಗಳಲ್ಲಿ ಕ್ರಿಯಾಯೋಜನೆಯಲ್ಲಿ ಇಬ್ಬರು ರೈತರ ನಾಲಾ ಬಂಡಿ ರದ್ದುಗೊಳಿಸಿದ್ದಾರೆ ಕಂಪ್ಯೂಟರ್ ಆಪರೇಟರ್ ಅವರು ಕಾರಣ ಕೇಳಿದರೆ ಅದಕ್ಕೆ ಉತ್ತರ ಕೊಟ್ಟಿಲ್ಲ ,ಮಾಡಿಕೊಡುತ್ತೇನೆ ಅಂತ ಸುಳ್ಳು ಹೇಳಿದ್ದಾರೆ. ಯಾಕೆ ಅಂತ ಕೇಳಿದರೆ ಅದು ನನ್ನಿಂದಲೇ ತಪ್ಪಾಗಿದೆ ಅಂತ ಹೇಳಿದ್ದಾರೆ ಒಟ್ಟಿನಲ್ಲಿ ರೈತರ ಹಾಗೂ ದಲಿತರ ಜೊತೆ ಸರಿಯಾಗಿ ಸ್ಪಂದಿಸುವುದಿಲ್ಲ ಏನಾದರೂ ಕೇಳಿದರೆ ನನಗೆ ಏನೂ ಕೇಳಬೇಡಿ ಅಂತ ಅನ್ನುತ್ತಾರೆ ಅದರಲ್ಲೂ ವಿಶೇಷವಾಗಿ ದಲಿತರಿಗೆ ಇಲ್ಲಿ ಯಾವುದೇ ಸ್ಪಂದನೆ ಇರುವುದಿಲ್ಲ. ಯಾಕೆ ಅಂತ ಕೇಳಿದರೆ ಮಾಡುವುದಿಲ್ಲ ಅಂತ ಹೇಳುತ್ತಾರೆ. ನೀವು ಯಾರಿಗೆ ಬೇಕಾದರೂ ಹೇಳಿ ನನಗೆ ಯಾರು ಏನೂ ಮಾಡಕ್ಕಾಗಲ್ಲ ಅಂತಿದ್ದಾರೆ. ಅದೇ ರೀತಿ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಿಸಿದಂತೆ ಕಾರ್ಡ್ ಮಾಡಿಕೊಡಿ ಅಂತ ಕೇಳಿದರೆ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿ ಕೇಳಿ ಅಂತ ನಮಗೆ ದಾರಿ ತಪ್ಪಿಸುತ್ತಿದ್ದಾರೆ ಇಲ್ಲ ಮಾಡಿ ಕೊಡಕಾಗಲ್ಲ ಅಂತಿದ್ದಾರೆ. ಹೀಗಾಗಿ ಸಾರ್ವಜನಿಕರಿಗೆ ಅನುಚಿತವಾಗಿ ವರ್ತಿಸುವ ಹಾಗೂ ದಲಿತರನ್ನು ಕಂಡರೆ ಇವರಿಗೆ ಆಗುವುದಿಲ್ಲ ಈಗಾಗಲೇ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇಂಡಿ ಅವರಿಗೆ ದೂರು ಸಲ್ಲಿಸಿದರೂ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ. ಅದೇ ರೀತಿ ಮಾನ್ಯ ಜಿಲ್ಲಾ ಉಪ ಕಾರ್ಯದರ್ಶಿಗಳು ಜಿಲ್ಲಾ ಪಂಚಾಯತ್ ವಿಜಯಪುರ ಇವರಿಗೆ ದೂರು ಸಲ್ಲಿಸಿದರು ಕೂಡಾ ಯಾವುದೇ ಪ್ರತಿಕ್ರಿಯೆ ಕೊಟ್ಟಿರುವುದಿಲ್ಲ. ಅದಕ್ಕಾಗಿ ತಾವುಗಳು ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಪ್ರಸ್ತುತ ನಡೆಯುತ್ತಿರುವ ಕ್ರಿಯೆ ಯೋಜನೆಯಲ್ಲಿ ಹಿಂದುಳಿದ ಅಲ್ಪಸಂಖ್ಯಾತರ ಹಾಗೂ ದಲಿತರ ಯಾವುದೇ ಫಲಾನುಭವಿಗಳ ಹೆಸರು ಇರುವುದಿಲ್ಲ ಈ ಜಾತಿ ವಿರೋಧಿಯನ್ನು ಅಮಾನತುಗೊಳಿಸಿ ಇಲ್ಲ
ಇವರನ್ನು ತಕ್ಷಣದಿಂದಲೇ ಈ ಪಂಚಾಯಿತಿಯಿಂದ ಅಮಾನತು ಮಾಡಬೇಕು ಇಲ್ಲ ಅಂದ್ರೆ ಬೇರೆ ಕಡೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಗೌತಮ್ ಚ ಕಾಂಬಳೆ ( ಡಿ ಎಸ್ ಎಸ್ ಉಪಾಧ್ಯಕ್ಷರು ಇಂಡಿ), ಅಲ್ಲಾಬಕ್ಷ ಗೂಗಿಹಾಳ,
ಶಬ್ಬಿರ ಅಗರಖೇಡ, ಜಬ್ಬರ ಗೂಗಿಹಾಳ,ಅಬ್ದಲ್ ಜಮಾದಾರ, ರಫೀಕ್ ಅಗರಖೇಡ, ದಾವೂದ ಗೂಗಿಹಾಳ, ಲಕ್ಕಪ್ಪ ಹಂಜಗಿ, ಪರಶು ದೊಡಮನಿ ಇನ್ನಿತರರು ಹಾಜರಿದ್ದರು.
- ಕರುನಾಡ ಕಂದ



















