ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಕ್ಕಳ ಭವಿಷ್ಯ ಹಾಗೂ ಪ್ರಾಣದ ಜೊತೆಗೆ ಆಟವಾಡುತ್ತಿರುವ ಮುಖ್ಯ ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿಯನ್ನು ಕೂಡಲೇ ವಜಾಗೊಳಿಸಲು ಒತ್ತಾಯ

ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ ರಟಕಲ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಿಸಿ ಊಟ ಹಾಕದೆ ಇರುವುದು ಮತ್ತು ಬಿಸಿ ಊಟದಲ್ಲಿ ಕಸ ಹುಳಗಳು ಸ್ವಚ್ಛತೆ ಮಾಡದೆ ಹಾಗೇನೇ ಅಡಿಗೆ ಮಾಡುವುದು ಮುಖ್ಯ ಶಿಕ್ಷಕರು ಸರಿಯದ ಸಮಯಕ್ಕೆ ಶಾಲೆಗೆ ಬರದಿರುವುದು ಇದನ್ನು ಪ್ರಶ್ನಿಸಿದಾಗ ಮಕ್ಕಳಿಗೆ ಬೈಯುತ್ತಿದ್ದಾರೆ. ಅದಕ್ಕೆ ವಿದ್ಯಾರ್ಥಿಗಳು ಇವತ್ತು ದಿನಾಂಕ 19-08-2025 ರಂದು ಮುಖ್ಯ ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿಯವರನ್ನು ಕೂಡಲೆ ವಜಾ ಗೊಳಿಸಬೇಕು ವಿದ್ಯಾರ್ಥಿಗಳ ಹಾಗೂ ಪೋಷಕರು ಊರಿನ ಪ್ರಮುಖರು ಪ್ರತಿಭಟನೆ ಮಾಡಿದರು.
ಮುಖ್ಯ ಶಿಕ್ಷಕರು ಸರಿಯಾದ ಸಮಯಕ್ಕೆ ಶಾಲೆಗೆ ಬರದೇ ಇರುವುದು ಮತ್ತು ಅಡಿಗೆ ಸಿಬ್ಬಂದಿಯವರ ಜೊತೆಗೆ ಪ್ರತಿನಿತ್ಯ ಜಗಳ ಮಾಡುತ್ತಿರುವುದರಿಂದ ಮಕ್ಕಳ ಶಿಕ್ಷಣದ ಜೊತೆಗೆ ಬದುಕಿನ ಆಟವಾಡುತ್ತಿದ್ದಾರೆ. ಸರ್ಕಾರದ ಯೋಜನೆ ಸವಲತ್ತುಗಳನ್ನು ಮಕ್ಕಳಿಗೆ ತಲುಪಿಸಿದ ಕಾರಣ ಇವರನ್ನು ಸೇವೆಯಿಂದ ವಜಾ ಗಳಿಸಬೇಕೆಂದು ವೀರಣ್ಣ ಗಂಗಾಣಿ ರೈತ ಸೇನೆ ತಾಲೂಕ ಅಧ್ಯಕ್ಷರು ಕಾಳಗಿ ಅಗ್ರಹಿಸಿದ್ದಾರೆ. ಕರ್ನಾಟಕ ರಾಜ್ಯದ ಹಿಂದುಳಿದ ಭಾಗವೆಂದರೆ ಕಲಬುರ್ಗಿ ಜಿಲ್ಲೆ, ಕಲಬುರ್ಗಿ ಜಿಲ್ಲೆಯ ಹಿಂದುಳಿದ ತಾಲೂಕ ಎಂದರೆ ಚಿಂಚೋಳಿ ಈ ತಾಲೂಕಿನಲ್ಲಿ 10ನೇ ತರಗತಿ ವಿದ್ಯಾರ್ಥಿ ಹೆಚ್ಚಿನ ಸಂಖ್ಯೆಯಲ್ಲಿ ಫೇಲಾದ ಕಾರಣ ಶಿಕ್ಷಕರನ್ನು ವಜಾ ಗೊಳಿಸಬೇಕು ಬಿಜೆಪಿ ಒಪಿಸಿ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ್ ಮರಗುತ್ತಿ ಅಗ್ರಹಿಸಿದ್ದಾರೆ.
ಸರ್ಕಾರಿ ಪ್ರೌಢಶಾಲೆ ರಟಕಲ್ ಶಾಲೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಚಿಂಚೋಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರ ಗಮನಕ್ಕೆ ತರಲಾಗಿದೆ. ಅವರು ನಾಳೆಗೆ ಶಾಲೆಗೆ ಭೇಟಿ ನೀಡುತ್ತೇವೆ ಎಂದು ವೀರಣ್ಣ ಗಂಗಾಣಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವೀರಣ್ಣ ಗಂಗಾಣಿ ರೈತ ಸಂಘದ ಅಧ್ಯಕ್ಷರು ಕಾಳಗಿ, ಮಲ್ಲಿಕಾರ್ಜುನ ಮರುಗುತ್ತಿ ರೇವಣಸಿದ್ಧಪ್ಪ ಬಡಾ, ಕಲ್ಯಾಣ್ ರಾವ್ ತಳಕೇರಿ, ಬಸು ತಳವಾರ್, ವೀರೇಶ್ ಬುಕಟಗಿ, ಲಲಿತ ವಾಡೇ ದ, ವಿಜಯಕುಮಾರ್ ಜಡಗಿ, ಶರಣು ಸಿಂಗಿ, ಶಂಕರ್ ಚೋಕಾ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ ಚಂದ್ರಶೇಖರ್ ಅರ್ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!