ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ವಡವಟ್ವಿ ಗ್ರಾಮದ ರಮೇಶ್ ಬಸವರಾಜ ಅಂಗಡಿ ವಯಸ್ಸು 42ರ ಆಸುಪಾಸಿನ ರೈತ ಕಳಸದಲ್ಲಿರುವ ಮಲಪ್ರಭಾ ನದಿಯ ಪ್ರವಾಹ ಬರುತ್ತಿದ್ದು ಜಮೀನಿನಲ್ಲಿರುವ ಪಂಪ್ ಸೆಟ್ ಹೊತ್ತು ತರಲು ಹೋದಾಗ ನದಿಯ ರಭಸಕ್ಕೆ ಕೊಚ್ಚಿಹೋಗಿ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಧಾರುಣ ಘಟನೆ ನಡೆದಿದೆ.
ಮಲಪ್ರಭಾ ನದಿ ದಡಕ್ಕೆ ಸ್ಥಳೀಯರು ಹಾಗೂ ಬಾದಾಮಿ ಅಗ್ನಿ ಶಾಮಕ ಸಿಬ್ಬಂದಿ ಹುಡುಕಿ ಮೃತದೇಹ ಹೊರತೆಗೆದಿದ್ದಾರೆ. ಮೃತ ದೇಹವನ್ನು ಬಾದಾಮಿ ತಾಲೂಕಾ ಆಸ್ಪತ್ರೆಗೆ ಶಪರೀಕ್ಷೆಗೆ ತೆಗೆದುಕೊಂಡು ಹೋಗಲಾಗಿದೆ ಎಂದು ತಿಳಿದುಬಂದಿದೆ.
ವರದಿ: ನಿಂಬಯ್ಯ ಕುಲಕರ್ಣಿ, ಬಾದಾಮಿ



















