ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ ವತಿಯಿಂದ ಹೊರ್ತಿ ವಲಯದ ಘಟಕ ಪ್ರಶಿಕ್ಷಣ ವರ್ಗ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ವಲಯದ ಘಟಕ ಪ್ರಶಿಕ್ಷಣ ವರ್ಗ ಕಾರ್ಯಕ್ರಮದಲ್ಲಿ
“ಮೊದಲು ದೇಶ ಸೇವೆ” ಈ ದೇಶಕ್ಕೆ ಅನ್ನ ಕೊಡುವ ರೈತರೂ ಕೂಡಾ ದೇಶದ ಸೇವೆಗಾಗಿ ಪ್ರಮುಖ ಪಾತ್ರ ವಹಿಸುತ್ತಾರೆ, ದೇಶದಲ್ಲಿ ಪ್ರತಿಯೊಬ್ಬ ರೈತನು ಕೂಡಾ ಈ ದೇಶದ ನಾಯಕನೇ ಎಂದು ಮಲ್ಲಣ್ಣ ಗೌಡ್ರು ಪಾಟೀಲ್ ಹೇಳಿದರು.
ಲಾಭದಾಯಕ ಬೆಳೆ ಸಿಗಲು ರೈತರೆಲ್ಲಾ ಒಗ್ಗಟ್ಟಾಗಿ ಸಂಘಟನೆ ಬಲಪಡಿಸಬೇಕು ಎಂದು ಪ್ರಶಿಕ್ಷಣ ವರ್ಗದಲ್ಲಿ ಭಾರತೀಯ ಕಿಸಾನ್ ಸಂಘದ ಪ್ರಾಂತ ಅಧ್ಯಕ್ಷರಾದಂತ ವಿವೇಕ್ ಮೊರೆ ಅವರು ಮಾತನಾಡಿದರು.
ಪ್ರತಿಯೊಬ್ಬ ರೈತರು ಸದಸ್ಯರಾಗಿ ಗ್ರಾಮ ಸಮಿತಿಯನ್ನು ಬಲಪಡಿಸಬೇಕು ಎಲ್ಲಾ ಗ್ರಾಮದವರು ಕೂಡಿ ತಾಲೂಕ ಮತ್ತು ಜಿಲ್ಲೆ, ಪ್ರಾಂತ್ಯ ಬಲಪಡಿಸಬೇಕು. ಪರಿಸರ ಉಳಿಸಬೇಕು, ಗಿಡಗಳನ್ನು ನೆಟ್ಟು ಉಳಿಸಬೇಕು, ಕೃಷಿ ತ್ಯಾಜ್ಯವನ್ನು ಸುಡಬಾರದು, ರೈತರು ಬೆಳೆದ ಬೆಳೆಗಳನ್ನು ಮೌಲ್ಯವರ್ಧನೆ ಮಾಡಿ ಪ್ರತಿಯೊಬ್ಬ ರೈತರು ಲಾಭ ಪಡೆಯಬೇಕೆಂದು ರಾಜ್ಯ ಕಾರ್ಯಕಾರಣಿ ಸದಸ್ಯರಾದ ಗುರುನಾಥ್ ಬಗಲಿ ಅವರು ಮಾತನಾಡಿದರು.
ತಾಲೂಕ ಅಧ್ಯಕ್ಷರು ಈರಣ್ಣ ಗೊಟ್ಟಾಳವರು ರೈತ ಸಂಘಟನೆ ಬಲಪಡಿಸುವ ಕುರಿತು ಮಾತನಾಡಿ ಸಾಂತ್ವಾನ ನುಡಿ ಅರ್ಪಿಸಿದರು. ಹಾಗೂ ಈ ರೈತ ಪರ ಕಾರ್ಯಕ್ರಮಕ್ಕೆ ಜಾಗ ಒದಗಿಸಿಕೊಟ್ಟು ಊಟದ ವ್ಯವಸ್ಥೆಯನ್ನು ಮಾಡಿಕೊಟ್ಟ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಅಧ್ಯಕ್ಷರಾದ ಅಣ್ಣಪ್ಪ ಸಾಹುಕಾರ ಖೈನೂರ ಅವರು ವ್ಯವಸ್ಥೆ ಮಾಡಿಕೊಟ್ಟು ರೈತ ಪರ ಸಂಘಟನೆಗಳಿಗೆ ಅವರ ಬೆಂಬಲ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಬಳ್ಳೊಳ್ಳಿ ಹೋಬಳಿಯ 25 ಗ್ರಾಮದ ರೈತರು ಹಾಜರಿದ್ದರು.
ರಮೇಶ್ ಗೌಡ ಬಿರಾದಾರ, ಸುಭಾಷ್ ನಾಯಕ, ಸಿದ್ದರಾಯ ಕುಂಬಾರ, ಚೆಂದ್ರೋಜಿ ಬಿರಾದಾರ, ಬಾಳಪ್ಪ ನೀಲಂಗಿ, ಕಾರ್ತೀಕ ನಿಲಂಗಿ, ಬಸವರಾಜ್ ಗೋಡೆಕೆ, ಬನಸಿದ್ದ ಗೋಡಕೆ ಸೇರಿದಂತೆ ಇನ್ನಿತರ ರೈತ ಮುಖಂಡರು ಪಾಲ್ಗೊಂಡಿದ್ದರು.

ವರದಿಗಾರರು ಆನಂದ ಹರಿಜನ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!