ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನದಿ ಪ್ರವಾಹ ಇಳಿಕೆ : ನಿಟ್ಟುಸಿರು ಬಿಟ್ಟ ಜನರು : ಸೇತುವೆ ಮೇಲಿಲ್ಲ ಸಂಚಾರಕ್ಕೆ ಅವಕಾಶ

ಬಳ್ಳಾರಿ / ಕಂಪ್ಲಿ : ಕಳೆದ ಮೂರು ದಿನದಿಂದ ಉಕ್ಕಿ ಹರಿಯುತ್ತಿದ್ದ ಕಂಪ್ಲಿ-ಕೋಟೆಯ ತುಂಗಭದ್ರಾ ನದಿ ಪ್ರವಾಹವು ಗುರುವಾರ ಇಳಿಕೆ ಕಂಡಿದೆ.
ಮಲೆನಾಡಿನಲ್ಲಿ ಮಳೆ ಪ್ರಭಾವ ಕಡಿಮೆಯಾದ ಹಿನ್ನಲೆ ತುಂಗಭದ್ರ ಜಲಾಶಯಕ್ಕೆ ಬರುವ ಒಳ ಹರಿವಿನ ಪ್ರಮಾಣ ಇಳಿಕೆ ಕಂಡಿದ್ದು, ಇದರಿಂದ ಜಲಾಶಯದಿಂದ ಮಧ್ಯಾಹ್ನದ ಒತ್ತಿಗೆ ನದಿ ಪ್ರವಾಹ ಸುಮಾರು 86 ಸಾವಿರ ಕ್ಯೂಸೆಕ್‌ಗೆ ಇಳಿಮುಖವಾಗಿದೆ. ಇದರಿಂದ ಇಲ್ಲಿನ ಜನರು ನಿಟ್ಟುಸಿರುವ ಬಿಡುವಂತಾದರೂ, ಅಧಿಕಾರಿಗಳ ತಳಮಳದ ಆಲೋಚನೆಯಿಂದಾಗಿ ಸೇತುವೆ ಮೇಲೆ ಸಂಚಾರ ಇಲ್ಲದಂತಾಗಿದೆ.
ಸತತ ಮೂರು ದಿನ ಸೇತುವೆ ಮೇಲೆ ನೀರು ಹರಿದ ಪರಿಣಾಮ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಇಂದು ನೀರು ಇಳಿಮುಖವಾಗಿ ಸೇತುವೆ, ದೇವಸ್ಥಾನಗಳು ಕಾಣುತ್ತಿವೆ. ಸೇತುವೆ ಮೇಲಿನ ನೀರು ಇಳಿಮುಖವಾಗಿದ್ದರಿಂದ ಪಾದಚಾರಿ ಅಥವಾ ಲಘು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ, ಇಲ್ಲಿನ ರೈತರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ವೃದ್ಧರಿಗೆ ಬಹಳಷ್ಟು ಅನುಕೂಲವಾಗುತ್ತದೆ. ಈ ದೃಷ್ಠಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಸಂಚಾರಕ್ಕೆ ಮುಕ್ತ ಅವಕಾಶ ಮಾಡಿಕೊಡಬೇಕೆಂದು ಪ್ರತಿಯೊಬ್ಬರ ಹಕ್ಕೋತ್ತಾಯವಾಗಿದೆ.

ಕಂಬಿಗಳಲ್ಲಿ ಜಲಸಸ್ಯ :
ಇಲ್ಲಿನ ನದಿ ನೀರು ಇಳಿಕೆ ಕಂಡಿತಾದರೂ, ಸೇತುವೆ ಕಂಬಿಗಳಲ್ಲಿ ಜಲಸಸ್ಯ ಆವರಿಸಿಕೊಂಡಿರುವುದು ಕಂಡು ಬಂತು. ಇಲ್ಲಿನ ಕಸ, ಕಡ್ಡಿ ಸೇರಿದಂತೆ ಜಲಸಸ್ಯವನ್ನು ಪುರಸಭೆಯಿಂದ ಸ್ವಚ್ಚಗೊಳಿಸಬೇಕಾಗಿದೆ. ಪ್ರತಿ ಬಾರಿಯೂ ನೀರು ಇಳಿಕೆ ತತ್‌ಕ್ಷಣದಲ್ಲಿ ಸ್ವಚ್ಚತಾ ಕಾರ್ಯ ಮಾಡಲಾಗುತ್ತಿತ್ತು. ಆದರೆ, ಇಂದು ಸ್ವಚ್ಚತೆಯತ್ತ ಮುಖ ಮಾಡದಂತ ಪರಿಸ್ಥಿತಿ ಕಂಡು ಬಂತು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!