ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಮಾಜಿ ಶಿಕ್ಷಣ ಸಚಿವ ಗೋವಿಂದೆ ಗೌಡರ ಮನೆ ಕಳ್ಳತನ ನಡೆದಿದೆ.
ಕೊಪ್ಪ ತಾಲೂಕಿನ ಹರಂದೂರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಚ್ಚರಡಿ ಯಲ್ಲಿರುವ ಮಾಜಿ ಶಿಕ್ಷಣ ಸಚಿವರಾದ ದಿ. ಗೋವಿಂದೆ ಗೌಡರ ಮನೆಯಲ್ಲಿ ಕಳ್ಳತನ ಮಾಡಲಾಗಿದೆ.
ಮನೆಯ ಕೆಲಸ ಮಾಡುವ ನೇಪಾಳಿ ಕಾರ್ಮಿಕರಿಂದ ಕೃತ್ಯ ನಡೆದಿದ್ದು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಸಿ ಸಿ ಕ್ಯಾಮರಾದ ವೈರ್ ಕಟ್ ಮಾಡಿ ಮನೆಯ ಹಿಂದಿನಿಂದ ಬಾಗಿಲು ಮುರಿದು ಮನೆಯ ಬೀರುವಿನಲ್ಲಿರುವ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ. ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಪ್ರಸಾದ್ ಹೆಚ್ ಬಿ, ತೀರ್ಥಹಳ್ಳಿ.



















