ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮನೆಮನೆಗಳಿಂದ ವಚನ ಶ್ರಾವಣ ಕಾರ್ಯಕ್ರಮ

ಕೊಪ್ಪಳ / ಗಂಗಾವತಿ : ಬಸವ ಪರ ಸಂಘಟನೆಗಳು ವತಿಯಿಂದ ಗಂಗಾವತಿಯ ನಗರದಲ್ಲಿ ಮನೆ ಮನೆಗಳಿಂದ ಮನಮನಗಳಿಗೆ ವಚನ ಸಂದೇಶ ಸಾರುವ ವಚನ ಶ್ರಾವಣ ಕಾರ್ಯಕ್ರಮದಲ್ಲಿ ನಿಜ ಶಿವಶರಣ ಅಂಬಿಗರ ಚೌಡಯ್ಯನವರ ವಚನದ ಕುರಿತು ಕಂಪ್ಲಿ ತಾಲೂಕಿನ ಎಮ್ಮಿಗನೂರು ಸರಕಾರಿ ಶತಮಾನ ಶಾಲೆಯ ಗೌರವ ಶಿಕ್ಷಕ ಎಸ್ ರಾಮಪ್ಪ ಉಪನ್ಯಾಸ ನಡೆಸಿಕೊಟ್ಟರು.

12ನೇ ಶತಮಾನದಲ್ಲಿ ವಿಶಿಷ್ಟವಾದ ಮತ್ತು ಭಿನ್ನ ವ್ಯಕ್ತಿತ್ವವನ್ನು ಹೊಂದಿದಂತಹ ವಚನಕಾರರಲ್ಲಿ ಅಂಬಿಗರ ಚೌಡಯ್ಯನವರು ಬಸವಣ್ಣನವರೊಂದಿಗೆ ಅನುಭವ ಮಂಟಪದಲ್ಲಿ ಸಮಕಾಲೀನರಾಗಿ ಅಂಬಿಗ ವೃತ್ತಿಯೊಂದಿಗೆ ಸಮಾಜವನ್ನು ತಿದ್ದುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡ ಆದರ್ಶ ಪುರುಷ ಶಿವಶರಣ ಎನಿಸಿಕೊಂಡವರು ಸ್ವಾರ್ಥ ಮೋಸ ವಂಚನೆ ದಾಂಬಿಕತನವನ್ನು ಹೊಂದದೆ ಸಮಾಜದ ಜನರಿಗೆ ಆದರ್ಶಪ್ರಾಯನಾಗಿರಬೇಕು ಅಲ್ಲದೆ ಪರದನ ಪರಸ್ತ್ರೀಗಳಿಗೆ ಮಾರುಹೋಗದೆ ತಾನು ಮಾಡುವ ಕಾಯಕದಲ್ಲಿ ನಿಷ್ಠೆಯನ್ನು ಮೈಗೂಡಿಸಿಕೊಳ್ಳಬೇಕು ಆ ನಿಟ್ಟಿನಲ್ಲಿ ಅಂಬಿಗರ ಚೌಡಯ್ಯನವರು ಯಾವುದನ್ನೇ ಆಗಲಿ ಯಾರೇ ಆಗಲಿ ಟೀಕಿಸದೆ ಬಿಡುವ ಸ್ವಭಾವ ಅವರದಾಗಿರಲಿಲ್ಲ ನಿಷ್ಠುರ ನುಡಿಗಳಿಂದ ಅವರನ್ನು ತಿದ್ದುವ ಕಾಯಕ ಮಾಡುತ್ತಿದ್ದರು ಪ್ರಸ್ತುತ ದಿನಮಾನಕ್ಕೂ ಕೂಡ ಬಸವಾದಿ ಶಿವಶರಣರು ಹಾಕಿಕೊಟ್ಟಿರತಕ್ಕಂತ ವಚನ ಸಾಹಿತ್ಯ ನಮ್ಮೆಲ್ಲರಿಗೂ ಕೂಡ ದಾರಿದೀಪ ಎಂದರು.
ಈ ಸಂದರ್ಭದಲ್ಲಿ ಮಂಜುನಾಥ ರಾಜಪ್ಪ ಸಿದ್ದಾಪುರ ಪಂಪಣ್ಣ ಪಟ್ಟಣಶೆಟ್ಟಿ ಶ್ರೀಶೈಲ್ ಮಹೇಶ್ ಕುಮಾರ್ ದಿಲೀಪ್ ಬಸವರಾಜ್ ಸೇರಿದಂತೆ ಶಿವಶರಣರು ಇತರರು ಭಾಗಿಯಾಗಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!