ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

15 ನೇ ಹಣಕಾಸು ದುರ್ಬಳಕೆ ಜನರ ಮುಂದೆ ಎಲ್ಲವನ್ನೂ ಹೇಳೋಕ್ಕಾಗಲ್ಲ ಎಂದ ಪಿಡಿಓ ಗೋವಿಂದಪ್ಪ

ಹನೂರು, ಬೈಲೂರು ಗ್ರಾಮ ಪಂಚಾಯ್ತಿಯಲ್ಲಿ 15 ನೇ ಹಣಕಾಸು ಯೋಜನೆಯಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳದೆ ಕೇವಲ ಬೀದಿ ದೀಪ ನಿರ್ವಹಣೆ ಪೈಪ್ ಲೈನ್ ರಿಪೇರಿ ಚರಂಡಿ ಹೂಳು ತೆಗೆಯುವ ಕೆಲಸಕ್ಕೆ 45 ಲಕ್ಷ ರೂ ಖರ್ಚು ಮಾಡಿದ್ದು ವೆಚ್ಚದ ಬಗ್ಗೆ ಪಿಡಿಓ ಗೋವಿಂದಪ್ಪ ರಸೀಧಿ ನೀಡದಿರುವುದು ಅಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು ಮೇಲ್ನೋಟಕ್ಕೆ ಭ್ರಷ್ಟಾಚಾರ ನಡೆದಿದೆ ಎನ್ನಲಾಗಿದೆ.

ತಾಲ್ಲೂಕಿನ ಬೈಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುಣಸೇ ಪಾಳ್ಯ ಗ್ರಾಮದ ಡಾ. ಬಿ. ಆರ್. ಅಂಬೇಡ್ಕರ್ ಭವನ ಆಯೋಜಿಸಿದ್ದ 2024-25ನೇ ಸಾಲಿನ ನರೇಗಾ ಮತ್ತು 15 ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯಲ್ಲಿ ತಾಲ್ಲೂಕು ಸಂಯೋಜಕ ನಾರಾಯಣ್ ರವರು ಯೋಜನೆ ಉದ್ದೇಶಿಸಿ ಮಾತನಾಡಿ ನರೇಗಾ ಯೋಜನೆಯಡಿ 76 ಕಾಮಗಾರಿಗಳು ಕೈಗೆತ್ತಿ ಕೊಂಡಿದ್ದು 39,25,798/- ಲಕ್ಷ ರೂ ಕೂಲಿ ಪಾವತಿಯಾಗಿರುತ್ತದೆ ಎಂದರು.

ಆದರೆ 15 ನೇ ಹಣಕಾಸು ಯೋಜನೆಯಲ್ಲಿ ಸುಮಾರು 60 ಲಕ್ಷ ರೂ ಅನುಧಾನ ಇದ್ದು ಅದರಲ್ಲಿ ಯಾವುದೇ ಕಾಮಗಾರಿ ಕೈಗೊಂಡಿಲ್ಲ. ಕೇವಲ ಪೈಪ್ ಲೈನ್ ರಿಪೇರಿ ಚರಂಡಿ ಹೂಳು ತೆಗೆದಿರುವುದು ನಾಯಕರುಗಳು ಜಯಂತಿಗೆ ಹಣ ನೀಡಿರುವುದಾಗಿ 45 ಲಕ್ಷ ಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ. ಕೇಂದ್ರ ಸರ್ಕಾರದ ಈ ಅನುದಾನ ಗ್ರಾಮ ಅಭಿವೃದ್ಧಿ ಸ್ವಚ್ಛತೆ ಇನ್ನಿತರ ಉದ್ದೇಶಕ್ಕೆ ಬಳಕೆ ಮಾಡಬೇಕು. ಯಾವುದೇ ಜಯಂತಿಗೆ ಅನುಧಾನ ಬಳಕೆ ಮಾಡುವುದು ಕಾನೂನು ಭಾಹಿರ ಹಾಗೂ ಯಾವುದೆ ರಸೀಧಿ ನೀಡಿರುವುದಿಲ್ಲ. ಆಗಾಗಿ ಪಿಡಿಓ ಗೋವಿಂದಪ್ಪ ರವರೆ ಸಭೆಗೆ ಜನರಿಗೆ ಮಾಹಿತಿ ನೀಡಲೆಂದು ತಿಳಿಸಿದರು.

ಪಿಡಿಓ ಗೋವಿಂದಪ್ಪ ಮಾತನಾಡಿ ರಾಷ್ಟ್ರ ನಾಯಕರುಗಳ ಜಯಂತಿಗೆ ವಿವಿಧ ಸಮಾಜದ ಯುವಕರ ಒತ್ತಾಯದಿಂದ 15ನೇ ಹಣಕಾಸು ಬಳಕೆ ಮಾಡಲಾಗಿದೆ. ಅಲ್ಲದೆ ಹೂಳು ತೆಗೆದಿರುವುದು ಪೈಪ್ ಲೈನ್ ರಿಪೇರಿ ಇನ್ನಿತರ ಕೆಲಸಗಳಿಗೆ ಬಳಸಲಾಗಿದೆ. ಕೆಲವೊಂದು ಇತರೆ ಖರ್ಚುಗಳಿಗೆ ಹಣ ಬಳಕೆಯಾಗಿರುತ್ತದೆ. ಅದನ್ನೆಲ್ಲಾ ಸಭೆಯಲ್ಲಿ ಜನರ ಮುಂದೆ ಹೇಳೋಕ್ಕಾಗೋದಿಲ್ಲ ಎನ್ನುವ ಮೂಲಕ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯ ಉದ್ದೇಶ ಮತ್ತು ನಿಯಾಮಾನುಸಾರವನ್ನು ಗಾಳಿಗೆ ತೂರಿ ಮಾತನಾಡಿದ್ದು ನಡೆದಿರುವ 15ನೇ ಹಣಕಾಸಿನ ಭ್ರಷ್ಟಚಾರದ ಹಗರಣ ತನಿಖೆಯಿಂದ ಹೊರ ಬರಬೇಕಾಗಿದೆ ಎಂದು ನಾಗರೀಕರು ಒತ್ತಾಯಿಸಿದ್ದಾರೆ.

ನರೇಗಾ ಮತ್ತು 15ನೇ ಹಣಕಾಸು ಯೋಜನೆ ಬಳಕೆ ಆಗಿರುವ ಅನುಧಾನ ಬಗ್ಗೆ ವರ್ಷಕ್ಕೊಮ್ಮೆ ಸಾರ್ವಜನಿಕರ ಮುಂದೆ ನಡೆದಿರುವ ಕಾಮಗಾರಿ ಮತ್ತು ಅನುಧಾನ ಬಳಕೆ ಬಗ್ಗೆ ಪಾರದರ್ಶಕವಾಗಿ ಖರ್ಚು ವೆಚ್ಚದ ಬಗ್ಗೆ ಸಾರ್ವಜನಿಕ ಸಮ್ಮುಖ ಚರ್ಚಿಸುವುದೇ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯ ಮುಖ್ಯ ಉದ್ದೇಶವಾಗಿರುತ್ತದೆ. ಆದರೆ ಇಲ್ಲಿನ ಪಿಡಿಓ ಗೋವಿಂದಪ್ಪ ಹಣ ದುರ್ಬಳಕೆ ಮಾಡಿಕೊಂಡಿರುವುದು ಸಭೆಯಲ್ಲಿ ಇವರು ನಡೆದುಕೊಂಡ ರೀತಿ ನೀತಿಗಳೆ ಹೇಳುತ್ತಿತ್ತು.

ಹಾಗಾಗಿ ಸಂಬಂಧಿಸಿದ ಮೇಲಾಧಿಕಾರಿಗಳು ಬೈಲೂರು ಗ್ರಾಮ ಪಂಚಾಯ್ತಿಗೆ ಸರ್ಕಾರದಿಂದ ಬಂದಿರುವ 15ನೇ ಹಣಕಾಸು ಯೋಜನೆ ಸಂಪೂರ್ಣ ಅನುದಾನ ಬಳಕೆಯಾಗಿರುವ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ನಡೆಸಿ ನಡೆದಿರುವ ಭ್ರಷ್ಟಚಾರ ಬಗ್ಗೆ ತನಿಖೆ ಕೈಗೊಂಡು ಸಂಬಂಧಿಸಿದವರ ವಿರುದ್ದ ಕ್ರಮ ಜರುಗಿಸುವಂತೆ ಆಗಬೇಕು.

ಈ ವೇಳೆ ನೋಡೆಲ್ ಅಧಿಕಾರಿ ಶಿಕ್ಷಣ ಇಲಾಖೆ ದೇವರಾಜು ಗ್ರಾ.ಪಂ.ಅಧ್ಯಕ್ಷ ಸದಾನಂದ ಮೂರ್ತಿ ಸದಸ್ಯ ನಾಗಣ್ಣ ರೈತ ಮುಖಂಡ ಸದಾನಂದ ಹಿರಿಯ ಮುಖಂಡ ಗುರುಮಲ್ಲಪ್ಪ , ಮಮತಾ ಸೇರಿದಂತೆ ಇನ್ನಿತರರು ಹಾಜರಿದ್ದರು.

ವರದಿ ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!