
ಬೀದರ್/ಬಸವಕಲ್ಯಾಣ: ಪ್ರತಿ ವರ್ಷದಂತೆ ಪವಿತ್ರ ಶ್ರಾವಣ ಮಾಸ ಅಂಗವಾಗಿ ನಗರದ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠದಲ್ಲಿ ಗವಿಮಠ ಟ್ರಸ್ಟ್ ವತಿಯಿಂದ ಆಯೋಜಿಸಿದ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತ 9ನೇ ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಮನುಷ್ಯ ನಿತ್ಯ ಶುಚಿರ್ಭೂತನಾಗಿ, ಗುರು ಕರುಣಿಸಿದ ಇಷ್ಟ ಲಿಂಗ ಪೂಜೆಯನ್ನು ಭಕ್ತಿಯಿಂದ ಮಾಡುತ್ತಾ ಸತ್ಯ ಶುದ್ಧ ಕಾಯಕ ನಡೆಸಿದಾಗ ಮಾತ್ರ ಸದಾಚಾರಿಯಾಗಿ ಪರಮಾತ್ಮನ ಕೃಪೆ ಪಡೆಯಲು ಸಾಧ್ಯ. ಪ್ರತಿ ವರ್ಷದಂತೆ ಅನೇಕ ತಾಯಂದಿರು ಮನೆಯಲ್ಲಿ ಮಾಡಿಕೊಂಡು ತಂದಿರುವ ವಿಧ ವಿಧ ಅಡುಗೆ ಗುರುವಿಗೆ ಅರ್ಪಿಸಿದ್ದು ಬರೀ ಅಡುಗೆ ಅಲ್ಲ ಮಹಾಪ್ರಸಾದ. ನಾವೂ ಕೂಡಾ ಎಲ್ಲ ಸದ್ಭಕ್ತರ ಜೊತೆ ಸೇರಿ ಸಾಮೂಹಿಕ ಮಹಾಪ್ರಸಾದ ಸೇವನೆ ಮಾಡುತ್ತಿರುವುದು ತೃಪ್ತಿ ತಂದಿದ್ದು ಎಲ್ಲ ಸದ್ಭಕ್ತರ ಮೇಲೆ ಪರಮಾತ್ಮನ ಕೃಪೆ ಸದಾ ಇರಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಯುವ ಮುಖಂಡ ಅಮರ ಬಡದಾಳೆ ಅವರು ಮಾತನಾಡಿ ಗವಿಮಠ ನಮ್ಮ ಮಠ, ಪ್ರತಿವರ್ಷ ಪೂಜ್ಯ ಡಾ. ಅಭಿನವ ಗುರುಗಳು ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತು ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಿ ಜ್ಞಾನ ನೀಡುತ್ತಿರುವುದು ನಮ್ಮ ಪುಣ್ಯ. ಪ್ರಕೃತಿ ಸೌಂದರ್ಯದಿಂದ ಕೂಡಿದ ಗವಿಮಠವು ಪವಿತ್ರ ತಾಣ ಪೂಜ್ಯ ಗುರುಗಳು ನಮಗೆ ಮಾರ್ಗದರ್ಶನ ಮಾಡುತ್ತಿರುತ್ತಾರೆ ಎಂದು ನುಡಿದರು. ಅತಿಥಿಯಾಗಿದ್ದ ಸಾಮಾಜ ಸೇವಕ ಲೋಕೇಶ ಮೋಳಕೇರೆ ಮಾತನಾಡಿ ಪೂಜ್ಯ ಡಾ. ಅಭಿನವ ಗುರುಗಳು ಸರಳ ಜೀವಿಗಳು. ಎಲ್ಲಾ ಜಾತಿ, ಧರ್ಮದವರನ್ನು ಸಮಾನವಾಗಿ ಕಾಣುತ್ತ ಬಸವಣ್ಣನವರ ಸಮಾನತೆ ತತ್ವವನ್ನು ಅನುಸರಿಸುತ್ತಿದ್ದಾರೆ. ಅವರ ಧಾರ್ಮಿಕ, ಸಾಮಾಜಿಕ, ಮೊದಲಾದ ಕಾರ್ಯಗಳು ಅಮೋಘವಾಗಿವೆ ಅವರ ಮಾಡುವ ಕಾರ್ಯಕ್ಕೆ ನಾವು ಕೂಡ ಸಿದ್ಧರಿದ್ದೇವೆ ಎಂದು ಕೊಂಡಾಡಿದರು.
ಎಂಜಿನಿಯರ್ ವಿದ್ಯಾರ್ಥಿ ಶರಣಬಸಪ್ಪ ಅಲಗುಡೆ ಮಾತನಾಡಿ ಗವಿಮಠವು 11ನೇ ಶತಮಾನದ ಜಗದ್ಗುರು ರೇವಣಸಿದ್ಧೇಶ್ವರರು ತಪಗೈದ ಪಾವನ ತಾಣ, ಜಗದ್ಗುರು ಘನಲಿಂಗರಿಗೆ ವೀರಶೈವ ಧರ್ಮ ದೀಕ್ಷೆ ನೀಡಿದ ಪುಣ್ಯದ ನೆಲ ಎಂದು ಗವಿಮಠದ ಮಹಿಮೆಯನ್ನು ಪರಿಚಯಿಸಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಕಲ್ಪನಾ ದಯಾನಂದ ಶೀಲವಂತ ಅವರು ಮಾತನಾಡಿ ಅಭಿನವ ಗುರುಗಳು ಈ ಪವಿತ್ರ ಶ್ರಾವಣ ಮಾಸದಲ್ಲಿ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತು ಉಪದೇಶ ನೀಡುತ್ತಾರೆ ಭಕ್ತರನ್ನು ಉದ್ಧರಿಸುತ್ತಿದ್ದಾರೆ. ಶ್ರೀಮದ್ ರಂಭಾಪುರಿ ಜಗದ್ಗುರುಗಳ ದಸರಾ ಮಹೋತ್ಸವ ಈ ವರ್ಷ ನಮ್ಮ ಬಸವಕಲ್ಯಾಣದಲ್ಲಿ ನಡೆಯುತ್ತಿರುವುದು ನಮ್ಮೆಲ್ಲರ ಭಾಗ್ಯ. ಎಲ್ಲಾ ಸದ್ಭಕ್ತರು ಪಾಲ್ಗೊಂಡು ಜಗದ್ಗುರುಗಳ ದರ್ಶನ ಆಶೀರ್ವಾದ ಪಡೆದು ಧನ್ಯರಾಗಬೇಕೆಂದು ಕೋರಿದರು.
ವಿಶ್ವಹಿಂದುಯ್ ಪರಿಷತ್ ತಾಲೂಕಾ ಅಧ್ಯಕ್ಷ ಶ್ರೀಶೈಲ ವಾತಡೆ ವೇದಿಕೆಮೇಲಿದ್ದರು.
ವಿಶೇಷ ಸನ್ಮಾನ :
ಗವಿಮಠದ ಹಿರಿಯ ಭಕ್ತರಾದ ಶ್ರೀಮತಿ ಸುಭದ್ರಾಬಾಯಿ ವೀರಯ್ಯ ಸ್ವಾಮಿ ಅವರನ್ನು ಪೂಜ್ಯ ಗುರುಗಳು ವಿಶೇಷ ಸನ್ಮಾನ ಮಾಡಿ ಗೌರವಿಸಿದರು.
ಬೆಳದಿಂಗಳ ಸಹ ಭೋಜನ:
ಪ್ರತಿ ವರ್ಷದಂತೆ ಅನೇಕ ಮಹಿಳಾ ಭಕ್ತರು ತಮ್ಮ ಮನೆಯಲ್ಲಿ ಅಡುಗೆ ಮಾಡಿಕೊಂಡು ತಂದು ಗುರುಗಳೂ ಸಹಿತ ಎಲ್ಲ ಸದ್ಭಕರು ಸಾಲಾಗಿ ಕುಳಿತು ಬೆಳದಿಂಗಳ ವಿಧ ವಿಧ ಅಡುಗೆ ಸಹ ಭೋಜನ ಸವಿದಿದ್ದು ವಿಶೇಷ ಆಕರ್ಷಣೆಯಾಗಿತ್ತು.
ಕುಮಾರಿ ಆರಾಧ್ಯ ದೀಪಕ ಪುರವಂತ ಹಾಗೂ ಪ್ರಗತಿ ಶಾಂತಕುಮಾರ ಹುಡಗಿ ಪ್ರಾರ್ಥನಾಗೀತೆ ಹಾಡಿದರು. ಶಿಕ್ಷಕ ಮಲ್ಲಿಕಾರ್ಜುನ ಅಲಗುಡೆ ಸಂಚಾಲನೆ ಮಾಡಿದರು. ಪ್ರೊ. ರುದ್ರೇಶ್ವರ ಗೋರ್ಟಾ ಸ್ವಾಗತಿಸಿದರು.
ಈ ಕಾರ್ಯಕ್ರಮದಲ್ಲಿ ರಾಕೇಶ ಪುರವಂತ, ಶಿವಕುಮಾರ ಮುನ್ನೋಳಿ, ರುದ್ರಮುನಿ ಹಿರೇಮಠ, ಅಭಿಷೇಕ ರಾಮಣ್ಣನವರ, ಪ್ರದೀಪ ಬಿರಾದಾರ,ಸರಸ್ವತಿ ಬೆಂಬಲಗೆ, ಶಕುಂತಲಾ ಮಠ, ಜ್ಯೋತಿ ಸಂಗಮೇಶ ಪಾಟೀಲ, ಸವಿತಾ ರಮೇಶ ಸ್ವಾಮಿ,ರೇಖಾ ಚಿಟ್ಟೆ,ಪ್ರೇಮಲಾ ರಾಮಣ್ಣಾ, ಸುರೇಖಾ ಸಜ್ಜನಶೆಟ್ಟಿ,ಪಾರ್ವತಿ ಶಂಕರ ರೋಜೆ,ಸುನೀತಾ ಸಂಗಪ್ಪಾ ಭಾಲ್ಕೆ, ಇನ್ನಿತರರು ಉಪಸ್ಥಿತರಿದ್ದರು.
ವರದಿ : ಶ್ರೀನಿವಾಸ ಬಿರಾದಾರ



















