ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಣವಿ ತಿಮ್ಮಲಾಪುರದ ಎಲ್‌ಎಲ್‌ಸಿ ಕಾಲುವೆ ಬಳಿ ಬಿದ್ದ ದೊಡ್ಡ ಪ್ರಮಾಣದ ಬೊಂಗಾ : ಸಾರ್ವಜನಿಕರ ಸಂಚಾರಕ್ಕೆ ಸಂಚಕಾರ

ಬಳ್ಳಾರಿ / ಕಂಪ್ಲಿ: ತಾಲೂಕಿನ ಕಣವಿತಿಮ್ಮಲಾಪುರ ಗ್ರಾಮದ ರಾಮಸಾಗರ ವಿದ್ಯಾಪೀಠದ ಹೊಸಪೇಟೆ ರಸ್ತೆಗೆ ಸಾಗುವ ಗುಡ್ಡಗಾಡು ಪ್ರದೇಶದ ಎಲ್‌ಎಲ್‌ಸಿ ಕಾಲುವೆ ಬಳಿಯ ರಸ್ತೆಯಲ್ಲಿ ದೊಡ್ಡ ಪ್ರಮಾಣದ ಬೊಂಗಾ ಬಿದ್ದಿದ್ದು, ಅಪಘಾತಕ್ಕೆ ಆಹ್ವಾನಿಸುವಂತಿದ್ದು, ಅಧಿಕಾರಿಗಳ ಕಣ್ಣಿಗೆ ಕಾಣದಂತಾಗಿದೆ.
ಕಣವಿತಿಮ್ಮಲಾಪುರ ಗ್ರಾಮದ ಸಾಕಷ್ಟು ಜನರು ಹೊಸಪೇಟೆಗೆ ಹೋಗಬೇಕಾದರೆ ಇಲ್ಲಿನ ರಸ್ತೆಯ ಮುಖಾಂತರ ಹಾದು ಹೋಗಿರುವ ಕಾಲುವೆಯ ಗುಡ್ಡಗಾಡು ಪ್ರದೇಶದಲ್ಲಿರುವ ರಸ್ತೆಯ ಮೂಲಕ ಸಂಚರಿಸುತ್ತಾರೆ. ಆದರೆ, ಕಳೆದ ಶುಕ್ರವಾರ ರಾತ್ರಿ ಸಮಯದಲ್ಲಿ ಏಕಾಏಕಿ ದೊಡ್ಡದೊಂದು ಬೊಂಗಾ ( ರಂದ್ರ) ಬಿದ್ದಿದೆ. ಇಲ್ಲಿನ ರಸ್ತೆ ಮೂಲಕ ಸಾಕಷ್ಟು ಜನರು ದಿನನಿತ್ಯ ಸಂಚಾರ ಮಾಡುತ್ತಿದ್ದು, ದೊಡ್ಡ ಅವಘಡಕ್ಕೆ ತಪ್ಪಿದಂತಾಗಿದೆ.
ಕಳೆದ ಎರಡ್ಮೂರು ದಿನದ ಹಿಂದೆ ಸುರಿದ ಮಳೆಯ ಆರ್ಭಟಕ್ಕೆ ಗುಡ್ಡಗಾಡಿನ ನೀರಿನ ಸೆಲೆ ಬಂದು ರಸ್ತೆ ಬದಿಯಲ್ಲಿ ನಿಂತಿದ್ದು, ಇದರಿಂದ ಇಲ್ಲಿನ ರಸ್ತೆಯ ಕೆಳಭಾಗವು ಸಂಪೂರ್ಣವಾಗಿ ನೀರಿನ ತಂಪು ಹಿಡಿದು ಬೊಂಗಾ ಬಿದ್ದಿರುವ ಲಕ್ಷಣಗಳಿಗೆ ಕೆಳಗಡೆ ಇರುವ ನೆಲ ಕಾಣುತ್ತಿಲ್ಲ. ಹೀಗಾಗಿ ಇಲ್ಲಿನ ದೊಡ್ಡ ಪ್ರಮಾಣದಲ್ಲಿ ಬೊಂಗಾ ಬಿದ್ದಿರುವುದು ಗೋಚರವಾಗುತ್ತಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಎಂದು ಸ್ಥಳೀಯರು ಆಗ್ರಹಿಸಿದರು. ಬೊಂಗಾ ಬಿದ್ದ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ, ಬೊಂಗಾ ಮುಚ್ಚಿಸಿ, ದುರಸ್ಥಿ ಮಾಡುವ ಮೂಲಕ ಇಲ್ಲಿನ ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ. ಮುಂದೆ ಆಗುವ ಅವಘಡವನ್ನು ತಪ್ಪಿಸಲು ಸೂಕ್ತ ಕ್ರಮವಹಿಸಬೇಕೆಂದು ಮುಖಂಡರಾದ ತಳವಾರ ರಾಮಲಿಸ್ಚಾಮಿ, ಶಿವಪ್ಪ, ದೊಡ್ಡನಾಗಪ್ಪ, ಬಸವರಾಜ ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!