
ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದ ಕಾಳಿಗಲ್ಲಿಯ ಬಾಲಾಜಿ ಮಂದಿರದಲ್ಲಿ ನೂರಾರು ಮಾತೆಯರೊಂದಿಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ 61 ನೇ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನಾಚರಣೆ, ಕೃಷ್ಣ ಜನ್ಮಾಷ್ಟಮಿ ಆಚರಣೆಯೊಂದಿಗೆ ಆರ್ಯಸಮಾಜದ ಧರ್ಮಪ್ರಸಾರದ ಪ್ರಮುಖರಾದ ಶ್ರೀ ಧರ್ಮವೀರ ಜೀ ಯವರಿಂದ ರಾಮಾಯಣದ ಕಥಾ ಭಾಗವಾದ ಹನುಮಂತನ ಸುಂದರಕಾಂಡದ ಕಥಾ ಪಠಣೆಯೊಂದಿಗೆ ಧರ್ಮಸ್ಥಳದ ಶ್ರೀ ಮಂಜುನಾಥನ ಶ್ರೀಕ್ಷೇತ್ರ ಕಳೆದ ಹಲವು ದಶಕಗಳಿಂದ ಸಹಸ್ರಾರು ಧಾರ್ಮಿಕ ಕಾರ್ಯಗಳು ಹಮ್ಮಿಕೊಳ್ಳುತ್ತಾ, ನೂರಾರು ಧಾರ್ಮಿಕ ಕ್ಷೇತ್ರಗಳನ್ನು ಜೀರ್ಣೋದ್ಧಾರಗೊಳಿಸುವ ಪವಿತ್ರ ಕಾರ್ಯವನ್ನು ಮಾಡಿಕೊಂಡು ಬಂದಿರುವ, ಜೊತೆಗೆ ಕ್ಷೇತ್ರದಲ್ಲಿ ಅನ್ನದಾನದಂತಹ ಪುಣ್ಯ ಕಾರ್ಯ ಮಾಡುವ ರಾಜ್ಯ, ದೇಶ, ವಿದೇಶಗಳಿಂದ ಕೋಟ್ಯಾಂತರ ಭಕ್ತರು ಈ ಕ್ಷೇತ್ರಕ್ಕೆ ಆಗಮಿಸಿ ಶಿವನ ದರ್ಶನ ಪಡೆದು ಧನ್ಯರಾಗುವ, ನೂರಾರು ವರ್ಷಗಳ ಭವ್ಯ ಪರಂಪರೆ ಇರುವ ಹಿಂದೂಗಳ ನಂಬಿಕೆಯ ಶ್ರದ್ಧಾ ಕೇಂದ್ರವನ್ನು ಇವತ್ತು ಧರ್ಮವಿರೋಧಿ ಶಕ್ತಿಗಳು ವ್ಯಾಪಕವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಅಪಪ್ರಚಾರ ಹಾಗೂ ಷಡ್ಯಂತ್ರಗಳ ಮೂಲಕ ಕ್ಷೇತ್ರಕ್ಕೆ ಕೆಟ್ಟ ಹೆಸರು ತರುವ ಸಂಚು ನಡೆಸುತ್ತಿದ್ದಾರೆ, ಈ ಎಲ್ಲಾ ಷಡ್ಯಂತ್ರ, ಅಪಪ್ರಾಚರಕ್ಕೆ ಸೋಲುಂಟಾಗಿ ಮತ್ತೆ ಶ್ರದ್ಧೆ, ಭಕ್ತಿ ಬೆಳಗಿ ಶಾಂತಿ ನೆಲಸಲಿ ಎಂಬ ಸಂಕಲ್ಪದೊಂದಿಗೆ ಸಾಮೂಹಿಕವಾಗಿ 108 ಬಾರಿ ಶಿವಪಂಚಾಕ್ಷರಿ ಮಂತ್ರ ಜಪಿಸಲಾಯಿತು.
ಇದೆ ಸಂದರ್ಭದಲ್ಲಿ ಬಸವೇಶ್ವರ ದೇವಸ್ಥಾನದ ಶ್ರಾವಣ ಮಾಸದ ಅಧ್ಯಾತ್ಮಿಕ ಪ್ರವಚನದ ಕಾರ್ಯಕ್ರಮದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿಗಳ ಜ್ಞಾನಯೋಗಾಶ್ರಮ ವಿಜಯಪೂರದ ಶ್ರೀ ಅದ್ವೈತಾನಂದ ಶ್ರೀಗಳಿಂದ ಪ್ರವಚನದಲ್ಲಿ ಭಾಗಿಯಾದ ನೂರಾರು ಭಕ್ತರೊಂದಿಗೆ ಶಿವಪಂಚಾಕ್ಷರಿ ಮಂತ್ರ ಓಂ ನಮಃ ಶಿವಾಯ ಜಪಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ತಾಲೂಕಾ ಅಧ್ಯಕ್ಷರಾದ ಶ್ರೀಶೈಲ್ ವಾತಡೆ, ಕಾರ್ಯದರ್ಶಿಗಳಾದ ಕಮಲಜಿತಸಿಂಗ್ ಚವ್ಹಾಣ, ನಗರ ಸಂಯೋಜಕರಾದ ಪ್ರಕಾಶ ನೀರಾಳೆ ಧರ್ಮಪ್ರಸಾರದ ಜಿಲ್ಲಾ ಪ್ರಮುಖರು ಹಾಗೂ ಬಸವಕಲ್ಯಾಣ ಬಜರಂಗದಳದ ಪ್ರಖಂಡದ ಸಂಯೋಜಕರಾದ ರವಿ ನಾವದ್ಗೇಕರ, ಸಹ ಸಂಯೋಜಕರಾದ ಸಚೀನ ಗರುಡ, ಗೋರಕ್ಷ ಪ್ರಮುಖರಾದ ವಿನೋದ ಬಡಿಗೆಕರ, ಪ್ರಮುಖರಾದ ಮಹೇಶ ಪಾಟೀಲ, ನರಸಿಂಗ ಭೈರಾಗಿ ಸಂಜುಕುಮಾರ ಜಾಧವ, ಮಾನಸಿಂಗ್, ಲಖನ ಭೈರಾಗಿ, ಸಂಗಮೇಶ ವಾತಡೆ, ವಿಠಲ ಮೇತ್ರೆ, ಶ್ರೀಧರ ಮುತ್ತೆ, ಸಂಜೀವ ದಳವೆ, ಗುರು ಪವಡೆ ಹಾಗೂ ಮಾತೃ ಶಕ್ತಿಯ ಮಾತೆಯರು ಹಾಗೂ ಇನ್ನಿತರರು ಭಾಗವಹಿಸಿದರು.
ವರದಿ :ಶ್ರೀನಿವಾಸ ಬಿರಾದಾರ



















