ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶಿವಭಕ್ತರಾಗಿ ಭಕ್ತಿ ಪಕ್ಷ ಕಟ್ಟಿ : ಶರಣಬಸವ ಶಾಸ್ತ್ರಿಗಳು

ಬಾಗಲಕೋಟೆ ಜಿಲ್ಲೆಯ ಮುಧೋಳ :
ದುಃಖ ಮಯವಾಗಿರುವ ಸಂಸಾರದಲ್ಲಿ ವ್ಯರ್ಥವಾಗಿ ಬದುಕನ್ನ ಹಾಳು ಮಾಡಿಕೊಳ್ಳದೆ ಸಜ್ಜನರ ಸಂಗ ಮಾಡಿ ಶಿವಭಕ್ತರಾಗಿ ಭಕ್ತಿ ಪಕ್ಷ ಕಟ್ಟಿ ಎಂದು ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಹೇಳಿದರು.
ಅವರು ಮುಧೋಳ ತಾಲೂಕಿನ ಸುಕ್ಷೇತ್ರ ಕುಳಲಿ ಗ್ರಾಮದಲ್ಲಿ ದೇವಿ ಅಚ೯ಕರಾದ ಸದಾಶಿವ ಅಜ್ಜನವರ ಸಾನಿಧ್ಯದಲ್ಲಿ ಶ್ರೀ ಸಿದ್ಧಲಿಂಗ ಯತಿವಯ೯ರ ಹಾಗೂ ಅಂಬಾ ಮಠದಲ್ಲಿ ನಡೆದ ಜಪಯಜ್ಞ ಕಾರ್ಯಕ್ರಮದ ತನ್ನಿಮಿತ್ಯ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ ಸದ್ಗುರು ದೇವನ ಕೃಪೆಗೆ ಪಾತ್ರರಾಗಿ ಭವವನ್ನು ಕಳೆದುಕೊಂಡು ಜನ್ಮದ ಸಾಫಲ್ಯತೆ ಹೊಂದುವುದು ಮಾನವ ಜನ್ಮದ ಕತ೯ವ್ಯವಾಗಿದೆ ಎಂದರು.
ಬಸವರಾಜ ಸ್ವಾಮೀಜಿ ರಬಕವಿ,
ಮಧುರಖಂಡಿ ಬಸಯ್ಯ ಮಹಾಸ್ವಾಮಿಗಳು, ನಿಂಗಾಪೂರದ ಬಸವರಾಜ ಸ್ವಾಮಿಗಳು,
ಕುಳಲಿಯ ಈರಯ್ಯ ಶ್ರೀಗಳು,
ಕಾಡಪ್ಪ ಶರಣರು,
ಈರಪ್ಪ ತಳಪಟ್ಟಿ ಶರಣರು,
ಬಳ್ಳೂರಿನ ಕ್ಷೀರಮ್ಮತಾಯಿಯವರು ಉಪಸ್ಥಿತರಿದ್ದರು.
ಚಂಪಮ್ಮ ತಾಯಿಯವರ ಹಾಗೂ ನಂಜುಂಡೇಶ್ವರ ಶಿವಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಜರುಗಿತು.
ಮಹಾದೇವ ಮೀಸಿ ಅವರು ಸಂಚಾಲಕರಾಗಿ ಕಾಯ೯ನಿವ೯ಹಿಸಿದರು.
ಸನ್ನಪ್ಪ ಮೀಸಿ, ಮಹಾದೇವ ಮುತ್ತಪ್ಪ ಮೀಸಿ, ಕಾಡಪ್ಪ ಮೀಸಿ ಅವರು ನೇತೃತ್ವ ವಹಿಸಿದ್ದರು.
ಭೀಮಾವಧೂತ ಭಜನಾ ಮಂಡಳಿಯ ಮುತ್ತಣ್ಣ ಬನಾಜಗೋಳ ತಂಡದಿಂದ ಭಜನಾ ಸೇವೆ ಜರುಗಿತು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!