ಬಳ್ಳಾರಿ / ಕಂಪ್ಲಿ : ಶ್ರೀ ಪೇಟೆ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘವು 70.44 ಲಕ್ಷ ರೂ.ಗಳ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಗದೀಶ ಜಿ.ರಾಯ್ಕರ್ ಹೇಳಿದರು.
ಪಟ್ಟಣದ ಎಸ್‌ಎನ್‌ಪೇಟೆಯ ರಾಘವೆಂದ್ರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಭಾನುವಾರ 2024-25ನೇ ಸಾಲಿನ 3ನೇ ವಾರ್ಷಿಕ ಮಹಾಜನ ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಘವು 1905 ಜನ ಸದಸ್ಯರನ್ನು ಹೊಂದಿದ್ದು, ಸುಮಾರು 2 ಕೋಟಿ 10ಲಕ್ಷ 32ಸಾವಿರ 800 ರೂಪಾಯಿ ಶೇರು ಬಂಡವಾಳ ಇದೆ. ಮತ್ತು 12ಕೋಟಿ 86ಲಕ್ಷ 48 ಸಾವಿರ ರೂಪಾಯಿ ಠೇವಣಿ ಸಂಗ್ರಹಿಸಿದೆ. 15 ಕೋಟಿ 22ಲಕ್ಷ 43ಸಾವಿರ ರೂಪಾಯಿ ದುಡಿಯುವ ಬಂಡವಾಳ ಇರುತ್ತದೆ. ಹಿರಿಯ ನಾಗರೀಕರಿಗೆ ಹಾಗೂ ವಿಕಲಚೇತನರಿಗೆ 0.5ರಷ್ಟು ಅಧಿಕ ಬಡ್ಡಿ ಸಿಗಲಿದೆ. ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬರು ಸಹಕರಿಸಬೇಕು. ದುಡಿಯುವ ಬಂಡವಾಳ ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಡಾ.ಆಶೋಕ ಬಿ.ಹಂದ್ರಾಳ, ನಿದೇಶಕರಾದ ಕರಿಬಸವನಗೌಡ, ಕೆ.ರಮೇಶರೆಡ್ಡಿ, ವೀರೇಶ ತಾಂಡೂರು, ಕಟ್ಟೆ ವೆಂಕಟೇಶ, ಕೃಷ್ಣ ಎಸ್.ಪೋಳ್, ಜಿ.ವೀರಭದಪ್ರ‍್ರ, ಜಿ.ಮನೋಜ್ ರಾಯ್ಕರ್, ಕೆ.ಎಂ.ಅನಿತಾ ಸುಧಾಕರ, ಸಂಧ್ಯಾಶ್ರೀಸತೀಶ್‌ಭತ್ತದ, ಮಾನಸ ಬರ‍್ಗಿ ಸಂತೋಷಕುಮಾರ್, ಪ್ರತ್ಯುಷ ವೈ.ರವಿಶಂಕರ್, ಹೆಚ್.ಎಂ.ಕುಮಾರಸ್ವಾಮಿ, ಪಿ.ಜಿಂದಾವಲಿ, ಎನ್.ನಾಗಪ್ಪ, ಸಲಹೆಗಾರರಾದ ಸತೀಶ್, ಕೆ.ಎಂ.ಸುಧಾಕರ, ಬಿ.ಸಂತೋಷಕುಮಾರ, ವೈ.ರವಿಶಂಕರರೆಡ್ಡಿ, ಮುಖ್ಯ ಕಾರ್ಯನಿರ್ವಾಹಕ ಕೆ.ಎಂ.ಕೃತಿಕ್, ಕಾರ್ಯನಿರ್ವಾಹಕ ಗೌಸ್ ಲಾಜಂ, ಸಿಬ್ಬಂದಿಗಳಾದ ರವಿ, ಯಾಸ್ಮೀನ್, ಸೈಫುಲ್ಲಾ, ವೀರಭದ್ರಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















