ಯಾದಗಿರಿ/ ಗುರುಮಠಕಲ್: ಕಣ್ಣುಗಳಿಗೆ ಸೂಕ್ತಚಿಕಿತ್ಸೆ ನೀಡಿ ಬೆಳಕು ನೀಡುವ ಮೂಲಕ ಈಭಾಗದ ಜನರಿಗೆ ಸಹಾಯ ಮಾಡಿದ ವೇದ ಕಣ್ಣಿನ ಆಸ್ಪತ್ರೆಯ ಸೇವೆ ಅನನ್ಯವಾಗಿದೆ ಎಂದು ಮುಖಂಡ ಸಿದ್ದಲಿಂಗರೆಡ್ಡಿ ಕಂದಕೂರ ಹೇಳಿದರು.
ತಾಲ್ಲೂಕಿನ ಕಂದಕೂರ ಗ್ರಾಮದಲ್ಲಿ ಯಾದಗಿರಿಯ ವೇದ ಕಣ್ಣಿನ ಆಸ್ಪತ್ರೆಯ ವೈದ್ಯೆ ಡಾ. ನವನೀತಾ ರೆಡ್ಡಿ ಅವರ ನೇತೃತ್ವದಲ್ಲಿ ಸುಮಾರು 200 ಜನರಿಗೆ ಉಚಿತವಾಗಿ ಕಣ್ಣಿನ ಶಸ್ತ್ರಚಿಕಿತ್ಸೆ, ಔಷಧಿ ಮತ್ತು ಹಾಗೂ ಕನ್ನಡಕಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಮುಖಂಡ ಸಿದ್ದಲಿಂಗರೆಡ್ಡಿ ಸೇರಿದಂತೆ ಗ್ರಾಮಸ್ಥರಾದ ಯಲ್ಲಪ್ಪ, ತಾಯಪ್ಪ ಶೇಖರಪ್ಪ ಹಾಗೂ ಆಸ್ಪತ್ರೆಯ ಸಿಬ್ಬಂದಿ ಇದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















