ಬಳ್ಳಾರಿ / ಕಂಪ್ಲಿ : ಶುದ್ಧ ಕುಡಿಯುವ ನೀರಿನ ಘಟಕ ದುರಸ್ಥಿ ಮಾಡುವ ಜೊತೆಗೆ ಹೊಸ ಬೋರ್ವೆಲ್ ಕೊರೆಸಿ ಸಮರ್ಪಕವಾಗಿ ನೀರು ಪೂರೈಕೆ ಮಾಡಬೇಕೆಂದು ಆಗ್ರಹಿಸಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಸಂಘದಿಂದ ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಇವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.
ಸಂಘದ ಅಧ್ಯಕ್ಷ ಎಸ್. ರುದ್ರಮುನಿ ಮಾತನಾಡಿ, ಪಟ್ಟಣದ ವಾರ್ಡಿನ ಸಾರ್ವಜನಿಕರ ಗ್ರಂಥಾಲಯದ ಪಕ್ಕದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕವು ಈಗಾಗಲೇ ಕೆಲ ವರ್ಷಗಳಿಂದ ಕೆಟ್ಟು ನಿಂತಿದೆ. ಇದರಿಂದ ಇಲ್ಲಿನ ಜನತೆಗೆ ಶುದ್ಧ ನೀರಿಲ್ಲದೆ ಪ್ಲೋರೈಡ್ ಯುಕ್ತ ನೀರೇ ಗತಿಯಾಗಿದೆ. ಇದರಿಂದ ಇಲ್ಲಿನ ನಾಗರಿಕರು ಸಾಕಷ್ಟು ಸಂಕಷ್ಟ ಎದುರಿಸುವಂತಾಗಿದೆ. ಬೋರ್ವೆಲ್ ಮತ್ತು ಇಲ್ಲಿನ ಸಂಪೂರ್ಣವಾಗಿ ಹಳೆಯದ್ದಾಗಿದ್ದು, ಇದರಿಂದ ಘಟಕದ ಸಂಪರ್ಕ ಮಾಡುವುದು ತುಂಬ ತೊಂದರೆ ಉಂಟಾಗಿದೆ. ಆದ್ದರಿಂದ ಇಲ್ಲಿನ ಹಳೆ ಬೋರ್ವೆಲ್ ತೆಗೆಸಿ, ಹೊಸ ಬೋರ್ವೆಲ್ ಕೊರೆಸಿ, ಶುದ್ಧ ಕುಡಿಯುವ ನೀರಿನ ಘಟಕವನ್ನು ಪುನರ್ ಆರಂಭಿಸುವ ಮೂಲಕ ಇಲ್ಲಿನ ಜನತೆಗೆ ಶುದ್ಧ ನೀರು ಪೂರೈಸಬೇಕು ಈ ಮನವಿಗೆ ಅಧಿಕಾರಿಗಳು ಸ್ವಂದಿಸಿ, ಒಂದು ವಾರದೊಳಗೆ ಹೊಸ ಬೋರ್ವೆಲ್ ಜೊತೆಗೆ ದುರಸ್ಥಿಯೊಂದಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಭರವಸೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ವಿಜಯಕುಮಾರ, ಸಹ ಕಾರ್ಯದರ್ಶಿ ತಿಪ್ಪೇಸ್ವಾಮಿ, ಖಜಾಂಚಿ ಮಾರೇಶ, ಸಂಘಟನಾ ಸಲಹೆಗಾರರಾದ ಶೇಖರ, ಹನುಮಂತಪ್ಪ, ಯುವ ಮುಖಂಡರಾದ ಶ್ರೀನಿವಾಸ, ಮಹೇಶ, ಮಂಜುನಾಥ, ರಾಜ, ರಾಘವೇಂದ್ರ, ಹುಲಿಗೇಶ, ದುರುಗೇಶ, ಯಂಕಪ್ಪ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















