ಗ್ರಾಮೀಣ ಭಾಗದ ಮಕ್ಕಳ ಆಟಕ್ಕೆ ಎಲ್ಲರೂ ಫಿದಾ.
ಗುರುಮಠಕಲ್/ಚಪೆಟ್ಲಾ: ಪಟ್ಟಣದ ಜವಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಇಂದು ಗುರುಮಠಕಲ್ ಮತ್ತು ಕೊಂಕಲ್ ಹೋಬಳಿ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಕ್ರೀಡಾಕೂಟದಲ್ಲಿ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆ ಚಪೆಟ್ಲಾ ವಿದ್ಯಾರ್ಥಿಗಳು ಕಬಡ್ಡಿ ಪಂದ್ಯದಲ್ಲಿ ಪ್ರಥಮ ಬಹುಮಾನ ಗಳಿಸಿರುತ್ತಾರೆ.
ಶಾಲೆಯ ಕಾರ್ಯದರ್ಶಿಗಳಾದ ಗೌರಿಶಂಕರ ಪಾಟೀಲ, ಖಜಾಂಚಿ ಲಕ್ಷ್ಮೀ ರೆಡ್ಡಿ, ಶಿಕ್ಷಕರಾದ ಸುಗಯ್ಯ ಮತ್ತು ವಿಧ್ಯಾರ್ಥಿಗಳ ಪೋಷಕರು ಹರ್ಷ ವ್ಯಕ್ತಪಡಿಸಿ, ವಿಧ್ಯಾರ್ಥಿಗಳಿಗೆ ತಮ್ಮ ಗೆಲುವಿನ ಪ್ರಯಾಣ ಜಿಲ್ಲಾ ಮತ್ತು ರಾಜ್ಯ ಮಟ್ಟಕ್ಕೆ ತಲುಪಲಿ ಎಂದು ಶುಭ ಕೋರಿದರು.
ವರದಿ: ಜಗದೀಶ್ ಕುಮಾರ್ ಭೂಮಾ



















