ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಡಾ . ಮುರ್ತುಜಾ ಒಂಟಿ ಅವರಿಗೆ “ಒಪ್ಪತ್ತೇಶ್ವರ ಗುರು ಕಾರುಣ್ಯ” ಪ್ರಶಸ್ತಿ

ಬಾಗಲಕೋಟೆ :ಜಿಲ್ಲೆಯ ಗುಳೇದಗುಡ್ಡ ಒಪ್ಪತ್ತೇಶ್ವರ ಮಠದ ಶಾಖಾ ಮಠವಾದ ರೋಣ ತಾಲೂಕಿನ ಕರಮಡಿಯಲ್ಲಿ ಮಠದ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ. ಅಭಿನವ ಒಪ್ಪತ್ತೇಶ್ವರ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ” ಕಲಬುರ್ಗಿಯ ಶ್ರೀ ಶರಣಬಸವೇಶ್ವರ ಪುರಾಣ ಪ್ರವಚನದ ಷಷ್ಠಬ್ದಿ ಪೂರ್ತಿ ಸಮಾರಂಭ, ಶ್ರೀ ಮ.ನಿ.ಪ್ರ. ಅಭಿನವ ಒಪ್ಪತ್ತೇಶ್ವರ ಪೂಜ್ಯರ 50ನೇ ಜನ್ಮ ಸುವರ್ಣ ಮಹೋತ್ಸವ, ಪಟ್ಟಾಧಿಕಾರದ ರಜತ ಮಹೋತ್ಸವ ಹಾಗೂ ತುಲಾಭಾರದ ಅಂಗವಾಗಿ ರಾಜ್ಯಮಟ್ಟದ ಒಪ್ಪತೇಶ್ವರ ಗುರು ಕಾರುಣ್ಯ ಪ್ರಶಸ್ತಿ” ಸಮಾರಂಭವು ದಿನಾಂಕ 24 ಅಗಸ್ಟ್ 2025 ಭಾನುವಾರ ಕರಮುಡಿಯಲ್ಲಿ ಅದ್ದೂರಿಯಾಗಿ ಜರುಗಿತು.

ಹುನಗುಂದದ ಲೇಖಕರಾದ ಪ್ರೊಫೆಸರ್ ಡಾ. ಮುರ್ತುಜಾ ಒಂಟಿ ಅವರ “ರಂಗಸಿರಿ”ಸಂಶೋಧನಾ ಕೃತಿಗೆ” ಒಪ್ಪತ್ತೇಶ್ವರ ಗುರು ಕಾರುಣ್ಯ”ಪ್ರಶಸ್ತಿಯನ್ನು ಪೂಜ್ಯಶ್ರೀ ಒಪ್ಪತ್ತೇಶ್ವರ ಮಹಾಸ್ವಾಮಿಗಳು, ಶ್ರೀ ಷ .ಬ್ರ. ಗುರುಸಿದ್ಧ ಶಿವಾಚಾರ್ಯ ಸ್ವಾಮಿಗಳು, ಶ್ರೀ ಷ.ಬ್ರ. ಕೈಲಾಸನಾಥ ಸ್ವಾಮಿಗಳು ಪ್ರದಾನ ಮಾಡಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಎ. ಎಂ. ಮಡಿವಾಳರ ವಿಶ್ರಾಂತ ಜಂಟಿ ನಿರ್ದೇಶಕರು, ಡಾ . ನಾಗರಾಜ್ ನಾಡಗೌಡ, ಶ್ರೀ ಮಹದೇವ್ ಬಸರ ಕೋಡ , ಶಿಕ್ಷಕರಾದ ಶ್ರೀಎಚ್ .ಟಿ. ರಂಗಾಪುರ ಹಾಗೂ ಶ್ರೀ ಎಸ್. ಬಿ. ಮೆಣಸಿನಕಾಯಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬದಾಮಿಯ ಎಸ್ ಬಿ ಎಂ ಪದವಿ ಮಹಾವಿದ್ಯಾಲಯದ, ಸಹಪಾಧ್ಯಾಪಕ ಎಚ್ಎಸ್ ಸಂಕನ ಗೌಡರ, ನಿರೂಪಿಸಿದರು ವಂದಿಸಿದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!